ಅಮೆರಿಕಾ: ಅರ್ಹತೆ ಆಧಾರಿತ ವಲಸೆ ನೀತಿ, ಗ್ರೀನ್ ಕಾರ್ಡ್ ಸಂಖ್ಯೆ ಹೆಚ್ಚಳ ಮಸೂದೆ ಮಂಡನೆ

ಪ್ರಮುಖ ಬೆಳವಣಿಗೆಯಲ್ಲಿ ಅಮೆರಿಕ ಸಂಸತ್ತು ವಿದೇಶಿಗರಿಗೆ ನೀಡುವ ಗ್ರೀನ್ ಕಾರ್ಡ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಕುರಿತಾದ ಮಹತ್ವದ ಮಸೂದೆಯನ್ನು ಅಮೆರಿಕ ಸಂಸತ್ ನಲ್ಲಿ ಮಂಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಪ್ರಮುಖ ಬೆಳವಣಿಗೆಯಲ್ಲಿ ಅಮೆರಿಕ ಸಂಸತ್ತು ವಿದೇಶಿಗರಿಗೆ ನೀಡುವ ಗ್ರೀನ್ ಕಾರ್ಡ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಕುರಿತಾದ ಮಹತ್ವದ ಮಸೂದೆಯನ್ನು ಅಮೆರಿಕ ಸಂಸತ್ ನಲ್ಲಿ ಮಂಡಿಸಿದೆ.
ಈ ಹಿಂದೆ ಹೆಚ್ 1ಬಿ ವೀಸಾ ಕುರಿತಂತೆ ಅವಧಿ ಮೀರಿದ ವೀಸಾದಾರರ ಗಡಿಪಾರು ಮಾಡುವ ಪ್ರಸ್ತಾಪ ಇಲ್ಲ ಎಂದು ಹೇಳುವ ಮೂಲಕ ಅಮೆರಿಕದಲ್ಲಿರುವ ಭಾರತೀಯರಿಗೆ ರಿಲೀಫ್ ನೀಡಿದ್ದ ಡೊನಾಲ್ಡ್ ಟ್ರಂಪ್ ಸರ್ಕಾರ, ಇದೀಗ  ಅಂತಹುದೇ ಮತ್ತೊಂದು ನಿರ್ಧಾರವನ್ನು ಕೈಗೊಂಡಿದೆ. ಅದರಂತೆ ಅಮೆರಿಕದಲ್ಲಿ ವಿದೇಶಿಗರು ಉಳಿದುಕೊಳ್ಳಲು ಅನುವು ಮಾಡಿಕೊಡುವ ಗ್ರೀನ್ ಕಾರ್ಡ್ ಗಳ ವಿಚರಣೆ ಸಂಖ್ಯೆಯನ್ನು ಶೇ.45ರಷ್ಟು ಹೆಚ್ಚಳ ಮಾಡುವ ಪ್ರಮುಖ  ಮಸೂದೆಯನ್ನು ಅಮೆರಿಕ ಸರ್ಕಾರ ಸಂಸತ್ ನಲ್ಲಿ ಮಂಡಿಸಿದ್ದು,. ಇದರೊಂದಿಗೆ ಅರ್ಹತೆ ಆಧಾರಿತ ವಲಸೆ ವ್ಯವಸ್ಥೆ ನೀತಿ ಕುರಿತ ಮಸೂದೆಯನ್ನೂ ಅಮೆರಿಕ ಸರ್ಕಾರ ಮಂಡಿಸಿದೆ ಎನ್ನಲಾಗಿದೆ.
ಅಮೆರಿಕ ಸರ್ಕಾರದ ಈ ಮಸೂದೆಯ ಮೂಲಕ ಪ್ರಮುವಾಗಿ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯರಿಗೆ ನೆರವಾಗುವ ಸಾಧ್ಯತೆ ಇದ್ದು, ಒಂದು ವೇಳೆ ಈ "ಸೆಕ್ಯೂರಿಂಗ್ ಅಮೆರಿಕಾಸ್ ಫ್ಯೂಚರ್ ಆ್ಯಕ್ಟ್ ಗೆ ಅಮೆರಿಕ ಕಾಂಗ್ರೆಸ್  ಅನುಮೋದನೆ ನೀಡಿದ್ದೇ ಆದರೆ ಅಮೆರಿಕ ವೀಸಾ ವಿತರಣಾ ಸಮಸ್ಯೆ ಕೊಂಚ ಮಟ್ಟಿಗೆ ಪರಿಹಾರವಾಗುವ ಸಾಧ್ಯತೆ ಇದೆ. ಮಸೂದೆಯ ಅನ್ವಯ ಅಮೆರಿಕ ವಲಸಿಗರ ಪ್ರಮಾಣ ವಾರ್ಷಿಕ 1.5 ಮಿಲಿಯನ್ ನಿಂದ 2,60,000 ಕ್ಕೆ  ಏರಿಕೆಯಾಗಲಿದೆ.
ಅಂತೆಯೇ ಪ್ರಸ್ತುತ ಅಮೆರಿಕ ಸರ್ಕಾರ ವಿತರಿಸುತ್ತಿರುವ ಗ್ರೀನ್ ಕಾರ್ಡ್ ಗಳ ಸಂಖ್ಯೆಯನ್ನು ವಾರ್ಷಿಕ 1,20,000 ದಿಂದ 1,75,000ಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ. ಇದರಿಂದ ಅಧ್ಯಕ್ಷ ಟ್ರಂಪ್ ಅವರ ವಲಸೆ ನೀತಿಯಿಂದಾಗಿ ಕೆಲಸ  ಕೆಳದುಕೊಳ್ಳುವ ಭೀತಿಯಲ್ಲಿರುವ ಭಾರತೀಯರಿಗೆ ಕೊಂಚ ರಿಲೀಫ್ ನೀಡಿದಂತಾಗುತ್ತದೆ. ಅಂತೆಯೇ ಅಮೆರಿಕಕ್ಕೆ ತೆರಳಲು ತುದಿಗಾಲಲ್ಲಿ ನಿಂತಿರುವ ಸುಮಾರು 5 ಲಕ್ಷ ಭಾರತೀಯರಿಗೂ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com