ಅಮೆರಿಕದಲ್ಲಿ ಭಾರತೀಯ ಮೂಲದ ಕೈದಿಗೆ ಫೆ.23ಕ್ಕೆ ಗಲ್ಲು ಶಿಕ್ಷೆ ಜಾರಿ

ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಭಾರತೀಯ ಮೂಲದ ಕೈದಿಯೊಬ್ಬನಿಗೆ ಫೆಬ್ರವರಿ 23ರಂದು ಗಲ್ಲು ಶಿಕ್ಷೆ ಜಾರಿಗೊಳಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಭಾರತೀಯ ಮೂಲದ ಕೈದಿಯೊಬ್ಬನಿಗೆ ಫೆಬ್ರವರಿ 23ರಂದು ಗಲ್ಲು ಶಿಕ್ಷೆ ಜಾರಿಗೊಳಿಸಲಾಗುತ್ತಿದೆ.
ಬಾಲಕಿ ಹಾಗೂ ಆಕೆಯ ಅಜ್ಜಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ರಘುನಂದನ್ ಯಂಡಮೂರಿಗೆ 2014ರಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ಮುಂದಿನ ತಿಂಗಳು ಶಿಕ್ಷೆ ಜಾರಿಗೊಳಿಸಲಾಗುತ್ತಿದೆ.
2012ರಲ್ಲಿ ಹತ್ತು ತಿಂಗಳ ಹೆಣ್ಣು ಮಗು ಹಾಗೂ ಮಗುವಿನ ಅಜ್ಜಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ರಘುನಂದನ್ ಯಂಡಮೂರಿ(30)ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಪೆನ್ಸಿಲ್ವೇನಿಯಾ ಉಚ್ಚನ್ಯಾಯಾಲಯ ಎತ್ತಿ ಹಿಡಿದಿತ್ತು. 
ವೃತ್ತಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದ ರಘುನಂದನ್ ಜೂಜಿನ ದಾಸನಾಗಿದ್ದ. ಹಣಕ್ಕಾಗಿ ತನ್ನ ಸ್ನೇಹಿತನ ಮಗುವನ್ನು ಅಪಹರಿಸುವ ಸಂಚು ಹೂಡಿ ಯಾರೂ ಇಲ್ಲದ ವೇಳೆಯಲ್ಲಿ ಅವನ ಮನೆಯೊಳಗೆ ನುಸುಳಿದ್ದ. ಆದರೆ, ಮನೆಯಲ್ಲಿ ಸ್ನೇಹಿತನ ತಾಯಿ ಸತ್ಯಾರ್ಥಿ ವೆನ್ನಾ(61) ಇದ್ದುದರಿಂದ ಅಪಹರಣದ ಯತ್ನ ವಿಫಲವಾಗಿತ್ತು. ಹಣ ಸಿಗದ ಹತಾಶೆಯಿಂದ ರಘುನಂದನ್ ಸತ್ಯಾರ್ಥಿ ವೆನ್ನಾ ಹಾಗು 10 ತಿಂಗಳ ಮಗು ಸಾನ್ವಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com