ಸಹಕಾರ ರದ್ದು ಕುರಿತು ಪಾಕಿಸ್ತಾನದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ: ಅಮೆರಿಕಾ

ಮಿಲಿಟರಿ ಮತ್ತು ಗುಪ್ತಚರ ಸಹಕಾರವನ್ನು ರದ್ದು ಮಾಡಿರುವ ಬಗ್ಗೆ ಪಾಕಿಸ್ತಾನದಿಂದ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಮಿಲಿಟರಿ ಮತ್ತು ಗುಪ್ತಚರ ಸಹಕಾರವನ್ನು ರದ್ದು ಮಾಡಿರುವ ಬಗ್ಗೆ ಪಾಕಿಸ್ತಾನದಿಂದ ಯಾವುದೇ ಔಪಚಾರಿಕ ಸಂವಹನ ಬಂದಿಲ್ಲ ಎಂದು ಅಮೆರಿಕಾ ಹೇಳಿದೆ.
ಸಹಕಾರ ರದ್ದು ಮಾಡಿರುವ ಬಗ್ಗೆ ಪಾಕಿಸ್ತಾನದಿಂದ ಯಾವುದೇ ಔಪಚಾರಿಕ ಸಂವಹನ ಬಂದಿಲ್ಲ ಎಂದು ಅಮೆರಿಕಾ ಸರ್ಕಾರದ ವಕ್ತಾರ ಹೇಳಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಇಸ್ಲಾಮಾಬಾದ್ ನಲ್ಲಿ ಪಾಕಿಸ್ತಾನದ ಉನ್ನತ ಮಟ್ಟದ ನಾಯಕರು ಅಮೆರಿಕಾಕ್ಕೆ ಮಿಲಿಟರಿ ಮತ್ತು ಗುಪ್ತಚರ ಸಹಕಾರ ರದ್ದುಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು.
ಪಾಕಿಸ್ತಾನಕ್ಕೆ ನೀಡುತ್ತಿರುವ ಎಲ್ಲಾ ಭದ್ರತಾ ಸಹಕಾರವನ್ನು ನಿಲ್ಲಿಸಲಾಗುವುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ನಂತರ ಪಾಕಿಸ್ತಾನ ನೆರವು ನಿರಾಕರಿಸಿದೆಯೇ ಎಂದು ಹೇಳಲು ಕೇಂದ್ರ ಗುಪ್ತಚರ ಸಂಸ್ಥೆಯ ವಕ್ತಾರರು ನಿರಾಕರಿಸಿದ್ದಾರೆ. 
ತಮ್ಮ ಗಡಿಭಾಗದಲ್ಲಿರುವ ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪಾಕಿಸ್ತಾನಕ್ಕೆ ಹಲವು ಬಾರಿ ಮನದಟ್ಟು ಮಾಡಿ ಆ ನಿಟ್ಟಿನಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ವಕ್ತಾರರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com