ಟರ್ಕಿ: ರನ್‌ವೇಯಿಂದ ಜಾರಿ ಸಮುದ್ರದತ್ತ ನುಗ್ಗಿದ ವಿಮಾನ, ತಪ್ಪಿದ ಭಾರೀ ದುರಂತ

ಉತ್ತರ ಟರ್ಕಿಯ ಟ್ರಬ್ಜೊನ್ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಭೂಸ್ಪರ್ಶದ ಬಳಿಕ ರನ್ ವೇಯಿಂದ ಜಾರಿ ಕೆಲವು ಅಡಿಗಳಷ್ಟು ತಗ್ಗು ಪ್ರದೇಶಕ್ಕೆ ನುಗ್ಗಿದ್ದು...
ವಿಮಾನ
ವಿಮಾನ
ಅಂಕಾರ(ಟರ್ಕಿ): ಉತ್ತರ ಟರ್ಕಿಯ ಟ್ರಬ್ಜೊನ್ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಭೂಸ್ಪರ್ಶದ ಬಳಿಕ ರನ್ ವೇಯಿಂದ ಜಾರಿ ಕೆಲವು ಅಡಿಗಳಷ್ಟು ತಗ್ಗು ಪ್ರದೇಶಕ್ಕೆ ನುಗ್ಗಿದ್ದು ಸಮುದ್ರಕ್ಕೆ ಬೀಳುವುದರಿಂದ ಸ್ಪಲ್ಪದರಲ್ಲೇ ಪಾರಾಗಿದೆ. 
ಪೆಗಾಸಸ್ ಏರ್ ಲೈನ್ಸ್ ಗೆ ಸೇರಿದ ವಿಮಾನದಲ್ಲಿ 162 ಮಂದಿ ಪ್ರಯಾಣಿಸುತ್ತಿದ್ದು ಇಬ್ಬರು ಪೈಲಟ್ ಮತ್ತು ನಾಲ್ವರು ಸಿಬ್ಬಂದಿ ಇದ್ದರು. ವಿಮಾನ ಸಮುದ್ರಕ್ಕೆ ಬೀಳದಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದೆ. ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಎಲ್ಲರನ್ನೂ ವಿಮಾನದಿಂದ ಸುರಕ್ಷಿತವಾಗಿ ಹೊರ ಕರೆತರಲಾಗಿದೆ. 
ರನ್ ವೇಯಿಂದ ಜಾರಿದ ವಿಮಾ ತಲೆಕೆಳಗಾಗಿ ಸಮುದ್ರದತ್ತ ಜಾರಿದ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ವಿಮಾನದ ಚಕ್ರಗಳು ಮಣ್ಣಿನಲ್ಲಿ ಹೂತಿವೆ. ಇಲ್ಲದಿದ್ದಲ್ಲಿ ವಿಮಾನ ಸಮುದ್ರಕ್ಕೆ ಬೀಳುವ ಅಪಾಯವಿತ್ತು. 
ಈ ವಿಮಾನ ಅಂಕಾರದಿಂದ ಹೊರಟು ಟ್ರಬ್ಜೊನ್ ನಿಲ್ದಾಣದಲ್ಲಿ ಭೂಸ್ಪರ್ಷ ಮಾಡಿತ್ತು. ಘಟನೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಟ್ರಬ್ಜೊನ್ ಗವರ್ನರ್ ಕಚೇರಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com