• Tag results for plane

ನೇಪಾಳ ವಿಮಾನ ಪತನ: 21 ಮೃತದೇಹಗಳು ಪತ್ತೆ, ಶೋಧ ಕಾರ್ಯಾಚರಣೆ ಮುಂದುವರಿಕೆ

ವಾರಾಂತ್ಯದಲ್ಲಿ ಹಿಮಾಲಯ ಕಣಿವೆ ಪ್ರದೇಶದಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿದ್ದ 22 ಪ್ರಯಾಣಿಕರ ಮೃತದೇಹವನ್ನು ನೇಪಾಳದ ರಕ್ಷಣಾ ಸಿಬ್ಬಂದಿ ವಶಕ್ಕೆ ಪಡೆದಿರುವುದಾಗಿ ಸೇನೆ ಸೋಮವಾರ ತಿಳಿಸಿದೆ.

published on : 30th May 2022

ನೇಪಾಳದಲ್ಲಿ ನಾಗರಿಕ ವಿಮಾನ ಅಪಘಾತ: 14 ಶವಗಳ ಪತ್ತೆ; ಉಳಿದವರಿಗಾಗಿ ಶೋಧ ಮುಂದುವರಿಕೆ

ಹಿಮಾಲಯದಲ್ಲಿ 22 ಮಂದಿಯೊಂದಿಗೆ ನಾಪತ್ತೆಯಾಗಿದ್ದ ಪ್ರಯಾಣಿಕ ವಿಮಾನದ ಅವಶೇಷಗಳಿಂದ 14 ಮೃತದೇಹಗಳನ್ನು ನೇಪಾಳ ಸೇನಾ ಸಿಬ್ಬಂದಿ ಸೋಮವಾರ ಹೊರತೆಗೆದಿದ್ದಾರೆ.

published on : 30th May 2022

ನೇಪಾಳದಲ್ಲಿ ವಿಮಾನ ಅಪಘಾತ: ಅವಶೇಷಗಳನ್ನು ಪತ್ತೆಹಚ್ಚಿದ ಸೇನಾಪಡೆ

22 ಮಂದಿ ಪ್ರಯಾಣಿಕರನ್ನು ಹೊತ್ತೊಯ್ದಿದ್ದ ವಿಮಾನ ಸೋಮವಾರ ಪತ್ತೆಯಾಗಿದೆ ಎಂದು ನೇಪಾಳ ಸೇನೆ ತಿಳಿಸಿದೆ. ವಿಮಾನದ ಅವಶೇಷಗಳನ್ನು ಶೋಧನಾ ತಂಡ ಪತ್ತೆಹಚ್ಚಿ ಫೋಟೋ ಹಂಚಿಕೊಂಡಿದೆ. ಹೆಚ್ಚುವರಿ ತಂಡಗಳು ಅವಶೇಷಗಳು ಸಿಕ್ಕಿರುವ ಸ್ಥಳಕ್ಕೆ ದೌಡಾಯಿಸುತ್ತಿದ್ದು ನಂತರ ಸಂಪೂರ್ಣ ವಿವರ ಸಿಗಲಿದೆ ಎಂದು ನೇಪಾಳ ಸೇನೆ ವಕ್ತಾರ ನಾರಾಯಣ ಸಿಲ್ವಲ್ ತಿಳಿಸಿದ್ದಾರೆ.

published on : 30th May 2022

ಚೀನಾ: ರನ್ ವೇನಲ್ಲಿ ಧಗಧಗನೆ ಹೊತ್ತಿ ಉರಿದ ಟಿಬೆಟ್ ಏರ್‌ಲೈನ್ಸ್ ವಿಮಾನ, ಹಲವು ಪ್ರಯಾಣಿಕರಿಗೆ ಗಾಯ- ವಿಡಿಯೋ ವೈರಲ್

ಚೀನಾದ ಚಾಂಗ್ ಕಿಂಗ್ ನಲ್ಲಿ ಇಂದು ಬೆಳಗ್ಗೆ ಭಾರೀ ಅವಘಡವೊಂದು ತಪ್ಪಿದೆ. ಟಿಬೆಟ್ ಏರ್ ಲೈನ್ಸ್ ನ ವಿಮಾನವೊಂದು ಟೇಕ್ ಆಫ್ ಆಗುವ ವೇಳೆ ರನ್ ವೇನಲ್ಲಿ ಹೊತ್ತಿ ಉರಿದಿದೆ. ಚೀನಾಕ್ಕೆ ಸೇರಿದ ಜೋಂಗ್ ಕಿಂಗ್ ಜಿಂಗ್ ಬಿ ವಿಮಾನ ನಿಲ್ದಾಣದಲ್ಲಿ ಈ ಅವಘಡ ನಡೆದಿದೆ.

published on : 12th May 2022

ತುರ್ತು ಭೂಸ್ಪರ್ಶದ ವೇಳೆ ಅಪಘಾತ, ಎರಡು ತುಂಡಾದ ಕಾರ್ಗೊ ವಿಮಾನ

ತುರ್ತು ಭೂಸ್ಪರ್ಶದ ಸಮಯದಲ್ಲಿ ಸರಕು ವಿಮಾನವೊಂದು ಪೈಲಟ್ ನಿಯಂತ್ರಣ ತಪ್ಪಿ ಎರಡು ತುಂಡಾಗಿರುವ ಘಟನೆ ಕೋಸ್ಟರಿಕಾದ ಸ್ಯಾನ್ ಜೋಸ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. 

published on : 8th April 2022

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ದೆಹಲಿ-ಶ್ರೀನಗರ ವಿಮಾನ, ಸ್ವಲ್ಪದರಲ್ಲೇ ತಪ್ಪಿದ ಅವಘಡ

ದೆಹಲಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಪ್ರಯಾಣಿಕರು ತುಂಬಿದ್ದ ವಿಮಾನವೊಂದು ಪುಷ್ ಬ್ಯಾಕ್ ಮಾಡುವ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ತೀವ್ರ ಸಂಚಲನ ಮೂಡಿಸಿದೆ. ಆದರೆ ಅದೃಷ್ಟವಶಾತ್ ಯಾವುದೇ ದೊಡ್ಡ ಅಪಘಡ...

published on : 28th March 2022

ಚೀನಾ ವಿಮಾನ ಪತನ: ಎರಡನೇ ಬ್ಲಾಕ್ ಬಾಕ್ಸ್ ಪತ್ತೆ

ವಿಮಾನದ ದತ್ತಾಂಶ ರೆಕಾರ್ಡರ್ ಎಂದು ನಂಬಲಾದ ಎರಡನೇ ಕಪ್ಪು ಪೆಟ್ಟಿಗೆಯನ್ನು ಶೋಧನಾ ತಂಡವು ಪತ್ತೆ ಮಾಡಿದೆ. ಈ ಮೂಲಕ ಚೀನಾದ ಪ್ರಯಾಣಿಕ ವಿಮಾನ ಪತನದ ಕಾರಣವನ್ನು ನಿರ್ಧರಿಸುವಲ್ಲಿ ಮಹತ್ವದ ಮುನ್ನಡೆ ಸಾಧಿಸಬಹುದು ಎಂದು ಚೀನಾ ಡೈಲಿ ವರದಿ ಮಾಡಿದೆ.

published on : 25th March 2022

ಚೀನಾದಲ್ಲಿ ಪತನಕ್ಕೀಡಾದ ಬೋಯಿಂಗ್ 737-800 ವಿಮಾನ ಅವಶೇಷ ಪತ್ತೆ, ಎಲ್ಲಾ 132 ಮಂದಿ ಕಾಣೆ!

ಪೂರ್ವ ಚೀನಾದಲ್ಲಿ ನಿನ್ನೆ ಸೋಮವಾರ ಅಪರಾಹ್ನ 132 ಮಂದಿಯನ್ನು ಹೊತ್ತು ಸಾಗುತ್ತಿದ್ದ ವಿಮಾನ ದಟ್ಟ ಕಾಡಿನ ಮಧ್ಯೆ ಪತನಕ್ಕೀಡಾದ ಘಟನೆಯಲ್ಲಿ ಎಲ್ಲರೂ ದುರ್ಮರಣಕ್ಕೀಡಾಗಿದ್ದಾರೆ ಎಂದು ಶಂಕಿಸಲಾಗಿದ್ದು ದಶಕದ ಅತಿ ಘೋರ ವಿಪತ್ತು ಎಂದು ಬಣ್ಣಿಸಲಾಗಿದೆ.

published on : 22nd March 2022

ಚೀನಾ ವಿಮಾನ ಪತನ ಪ್ರಕರಣ: ಪ್ರಯಾಣಿಕರು ಬದುಕಿರುವ ಸಾಧ್ಯತೆ ಕ್ಷೀಣ 

ಚೀನಾದಲ್ಲಿ 133 ಜನ ಪ್ರಯಾಣಿಸುತ್ತಿದ್ದ ವಿಮಾನವೊಂದು ದಕ್ಷಿಣ ಪ್ರಾಂತ್ಯದ ಗುವಾಂಗ್ಸಿಯಲ್ಲಿ ಪತನಗೊಂಡಿದ್ದು, ಪ್ರಯಾಣಿಕರು ಬದುಕಿರುವ ಸಾಧ್ಯತೆಗಳು ಕ್ಷೀಣ ಎಂದು ಹೇಳಲಾಗುತ್ತಿದೆ. 

published on : 22nd March 2022

ಚೀನಾದಲ್ಲಿ 133 ಪ್ರಯಾಣಿಕರಿದ್ದ ವಿಮಾನ ಪತನ

ಚೀನಾದಲ್ಲಿ 133 ಜನ ಪ್ರಯಾಣಿಸುತ್ತಿದ್ದ ವಿಮಾನವೊಂದು ದಕ್ಷಿಣ ಪ್ರಾಂತ್ಯದ ಗುವಾಂಗ್ಸಿಯಲ್ಲಿ ಸೋಮವಾರ ಪತನಗೊಂಡಿದ್ದು, ಪರ್ವತದ ಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡುತ್ತಿವೆ.

published on : 21st March 2022

ಉಕ್ರೇನ್-ರಷ್ಯಾ ಯುದ್ಧ: ಮತ್ತೊಂದೆಡೆ ನ್ಯಾಟೋ ವಿಮಾನ ಪತನ; 4 ಅಮೆರಿಕಾ ಯೋಧರ ದುರ್ಮರಣ, ನಾರ್ವೆ ಪ್ರಧಾನಿ ಹೇಳಿದ್ದೇನು?

ನಾರ್ವೆಯ ಆರ್ಕ್ಟಿಕ್ ವೃತ್ತದಲ್ಲಿ ಕೋಲ್ಡ್ ರೆಸ್ಪಾನ್ಸ್ ಹೆಸರಿನ ನ್ಯಾಟೋ ಸೈನಿಕ ವಿನ್ಯಾಸದಲ್ಲಿ ದುರಂತ ಸಂಭವಿಸಿದೆ. ಅಮೇರಿಕಾದ ನಾವಿಕ ದಳಕ್ಕೆ ಸೇರಿದ MV-22B ಓಸ್ಪ್ರೇ ವಿಮಾನ ಪತನಗೊಂಡಿದೆ. ಹಡಗಿನಲ್ಲಿದ್ದ ನಾಲ್ವರು ಅಮೇರಿಕ ನೌಕಾಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ. 

published on : 20th March 2022

ಮಾರ್ಗ ಮಧ್ಯದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕ, ಭುವನೇಶ್ವರದಲ್ಲಿ ವಿಮಾನ ತುರ್ತು ಲ್ಯಾಂಡಿಂಗ್!

ಬೆಂಗಳೂರಿನಿಂದ ಕೋಲ್ಕತ್ತಾ ಕಡೆಗೆ ಭಾನುವಾರ ಹೊರಟ್ಟಿದ್ದ ಏರ್ ಏಷ್ಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮಾರ್ಗ ಮಧ್ಯದಲ್ಲಿ ಹಠಾತ್ತನೇ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಬಿಜು ಪಾಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ  ತುರ್ತು ಲ್ಯಾಂಡಿಂಗ್ ಆಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 13th March 2022

ಬ್ರಿಟನ್ ಭೂಪ್ರದೇಶದ ಮೇಲೆ ರಷ್ಯನ್ ವಿಮಾನಗಳ ಹಾರಾಟಕ್ಕೆ ನಿರ್ಬಂಧ

ಉಕ್ರೇನ್ ವಿರುದ್ಧ ರಷ್ಯಾ ದಾಳಿಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಬ್ರಿಟನ್ ಈ ನಿರ್ಧಾರ ಕೈಗೊಂಡಿದೆ. 

published on : 9th March 2022

ಮೈಸೂರು: ಕಾಸ್ಮೊಲಜಿ ಶಿಕ್ಷಣ, ಸಂಶೋಧನಾ ತರಬೇತಿ ಕೇಂದ್ರಕ್ಕೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ

ಮೈಸೂರು ವಿಶ್ವವಿದ್ಯಾನಿಲಯ ಮತ್ತು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಸಹಯೋಗದಲ್ಲಿ 81 ಕೋಟಿ ರೂ. ವೆಚ್ಚದಲ್ಲಿ  ನಿರ್ಮಿಸಲಾಗುತ್ತಿರುವ ಕಾಸ್ಮೊಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರಕ್ಕೆ  ಕೇಂದ್ರ ಹಣಕಾಸು ಮಂತ್ರಿ ನಿರ್ಮಲ ಸೀತಾರಾಮನ್ ಇಂದು ಶಂಕುಸ್ಥಾಪನೆ ನೆರವೇರಿಸಿದರು.

published on : 6th March 2022

ರಷ್ಯಾದ ಮಿಲಿಟರಿ ದಾಳಿ: ಉಕ್ರೇನ್ ನಿಂದ 182 ಭಾರತೀಯರು ಭಾರತಕ್ಕೆ ಆಗಮನ; ವಿದ್ಯಾರ್ಥಿಗಳು ಹೇಳಿದ್ದೇನು?

ಉಕ್ರೇನ್ ಅಂತಾರಾಷ್ಟ್ರೀಯ ವಿಮಾನ (UIA) ಇಂದು ಗುರುವಾರ ಬೆಳಗ್ಗೆ 7.45ರ ಸುಮಾರಿಗೆ ದೆಹಲಿಗೆ ಉಕ್ರೇನ್ ನಿಂದ 182 ಭಾರತೀಯರನ್ನು ಹೊತ್ತು ಬಂದಿಳಿದಿದೆ. ಅವರಲ್ಲಿ ಬಹುತೇಕರು ವಿದ್ಯಾರ್ಥಿಗಳು.

published on : 24th February 2022
1 2 3 > 

ರಾಶಿ ಭವಿಷ್ಯ