

ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗ (WEF) ಸಭೆಯಲ್ಲಿ ಭಾಗವಹಿಸಲು ಹೊರಟಿದ್ದು, ಈ ವೇಳೆ ಆಗಸದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ಕಂಡು ಬಂದಿದೆ.
ಟ್ರಂಪ್ ಅವರು ಪ್ರಯಾಣಿಸುತ್ತಿದ್ದ ಏರ್ ಫೋರ್ಸ್ ಒನ್ ವಿಮಾನ ದಾವೋಸ್ಗೆ ತೆರಳಲು ವಿಫಲವಾಗಿ ವಾಪಾಸ್ಸಾಗಿದೆ ಎಂದು ತಿಳಿದುಬಂದಿದೆ.
ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು, ಇದರಿಂದಾಗಿ ಸ್ವಲ್ಪ ಸಮಯದಲ್ಲೇ ವಾಪಸ್ಸಾಗಿದೆ ಎಂದು ವರದಿಗಳು ತಿಳಿಸಿವೆ.
ವಿಮಾನ ಟೇಕ್ ಆಫ್ ಆದ ನಂತರ ಸಿಬ್ಬಂದಿಗೆ ಸಣ್ಣ ವಿದ್ಯುತ್ ಸಮಸ್ಯೆ (ಮೈನರ್ ಎಲೆಕ್ಟ್ರಿಕಲ್ ಇಶ್ಯೂ) ಕಂಡುಬಂದಿದೆ. ಇದರಿಂದ ಮುನ್ನೆಚ್ಚರಿಕೆಯಾಗಿ ವಿಮಾನವನ್ನು ಮೇರಿಲ್ಯಾಂಡ್‌ನ ಜಂಟಿ ನೆಲೆ ಆಂಡ್ರ್ಯೂಸ್‌ಗೆ ಹಿಂದಕ್ಕೆ ಕಳುಹಿಸಲಾಯಿತು ಎಂದು ಶ್ವೇತಭವನ ತಿಳಿಸಿದೆ.
ಎರ್‌ಫೋರ್ಸ್ ಒನ್ ವಿಮಾನದಲ್ಲಿ ತಾಂತ್ರಿಕ ದೋಷ (ಮೈನರ್ ಎಲೆಕ್ಟ್ರಿಕಲ್ ಇಶ್ಯೂ)ಗಳು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ವಿಮಾನವು ವಾಯುನೆಲೆಗೆ ವಾಪಸಾಗಿದೆ. ಸುರಕ್ಷತೆ ಹಿನ್ನೆಲೆಯಲ್ಲಿ ವಿಮಾನ ವಾಯುನೆಲೆಗೆ ವಾಪಸ್ಸಾಗಿದೆ. ಸಮಸ್ಯೆ ಸಣ್ಣದಾಗಿದ್ದು, ಯಾವುದೇ ದೊಡ್ಡ ಅಪಾಯವಿಲ್ಲ ಎಂದು ತಿಳಿಸಿದೆ.
ಟ್ರಂಪ್ ಅವರು ಮತ್ತೊದು ವಿಮಾನದಲ್ಲಿ ಪ್ರಯಾಣ ನಡೆಸಲಿದ್ದು, ದಾವೇಸ್ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆಂದು ಮಾಹಿತಿ ನೀಡಿದೆ.
ವಿಮಾನವು ರಾತ್ರಿ 11 ಗಂಟೆ (0400 GMT) ವೇಳೆಗೆ ಆಂಧ್ರೂಸ್‌ಗೆ ವಾಪಸ್ಸಾಗಿದೆ. ಟ್ರಂಪ್ ಅವರೊಂದಿಗೆ ಪ್ರಯಾಣಿಸುತ್ತಿದ್ದ ಪತ್ರಕರ್ತರು, ವಿಮಾನ ಹಾರಾಟ ಅರಂಭವಾದ ಕೆಲವು ಕ್ಷಣಗಳ ನಂತರ ವಿಮಾನದ ಒಳಭಾಗದ ಲೈಟ್ ಗಳು ಆಫ್ ಆದವು ಎಂದು ಹೇಳಿದ್ದಾರೆ.
ಏರ್ ಫೋರ್ಸ್ ಒನ್ ಎಂಬುದು ಅಮೆರಿಕ ಅಧ್ಯಕ್ಷರ ವಿಶೇಷ ವಿಮಾನವಾಗಿದ್ದು, ಅಮೆರಿಕಾ ವಾಯುಪಡೆ ನಿರ್ವಹಿಸುತ್ತದೆ. 1943ರಿಂದ ಬೋಯಿಂಗ್ ವಿಮಾನಗಳು ಈ ಸೇವೆಯಲ್ಲಿ ಇವೆ. ಪ್ರಸ್ತುತ VC-25A ಮಾದರಿಯ ಬೋಯಿಂಗ್ 747 ಆಧಾರಿತ ವಿಮಾನವನ್ನು ಬಳಸಲಾಗುತ್ತಿದೆ. ಭವಿಷ್ಯದಲ್ಲಿ ಹೊಸ VC-25B ವಿಮಾನಗಳು ಬರುವ ನಿರೀಕ್ಷೆಯಿದೆ.
ಕಳೆದ ವರ್ಷ ಕತಾರ್ ರಾಜಕುಟುಂಬ ದಾನ ಮಾಡಿದ ಬೋಯಿಂಗ್ 747-8 ವಿಮಾನವನ್ನು ಸಹ ಏರ್ ಫೋರ್ಸ್ ಒನ್ ಫ್ಲೀಟ್‌ಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಘಟನೆಯು ಸಣ್ಣದಾಗಿದ್ದರೂ ಸುರಕ್ಷತೆಗೆ ಆದ್ಯತೆ ನೀಡಿ ವಿಮಾನ ಹಿಂತಿರುಗಿಸಿದ್ದು ಗಮನಾರ್ಹ. ಅಧ್ಯಕ್ಷ ಟ್ರಂಪ್ ಮತ್ತು ತಂಡ ಸುರಕ್ಷಿತವಾಗಿ ಪ್ರಯಾಣ ಮುಂದುವರಿಸಲಿದ್ದಾರೆ ಎಂದು ಶ್ವೇತಭವನ ಭರವಸೆ ನೀಡಿದೆ.
Advertisement