ಲಾಕ್‌ಡೌನ್ ಸಮಯದಲ್ಲಿ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಮನೆಗೆ ಕಳುಹಿಸಿದ ರೈತನ ಮೃತದೇಹ ಪತ್ತೆ!

2020ರ ಕೋವಿಡ್ ಲಾಕ್‌ಡೌನ್‌ ಸಮಯದಲ್ಲಿ ಉಂಟಾದ ವಲಸೆ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಬಿಹಾರಕ್ಕೆ ಕಳುಹಿಸಿದ ಅಣಬೆ ಕೃಷಿ ಮಾಡುತ್ತಿದ್ದ ರೈತರೊಬ್ಬರು ದೆಹಲಿಯ ದೇವಸ್ಥಾನವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದಾರೆ.
ಪಪ್ಪನ್ ಸಿಂಗ್ ಗೆಹ್ಲೋಟ್
ಪಪ್ಪನ್ ಸಿಂಗ್ ಗೆಹ್ಲೋಟ್
Updated on

ನವದೆಹಲಿ: 2020ರ ಕೋವಿಡ್ ಲಾಕ್‌ಡೌನ್‌ ಸಮಯದಲ್ಲಿ ಉಂಟಾದ ವಲಸೆ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಬಿಹಾರಕ್ಕೆ ಕಳುಹಿಸಿದ ಅಣಬೆ ಕೃಷಿ ಮಾಡುತ್ತಿದ್ದ ರೈತರೊಬ್ಬರು ದೆಹಲಿಯ ದೇವಸ್ಥಾನವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದಾರೆ.

55 ವರ್ಷದ ಪಪ್ಪನ್ ಸಿಂಗ್ ಗೆಹ್ಲೋಟ್ ಅವರು ಉದ್ಯೋಗಿಗಳಿಗೆ ಅವರ ನಿವಾಸಗಳಿಗೆ ತೆರಳಲು ವಿಮಾನದ ಟಿಕೆಟ್‌ಗಳನ್ನು ಖರೀದಿಸಿದ್ದರು. ಈ ವೇಳೆ ದೇಶದಾದ್ಯಂತ ಗಮನ ಸೆಳೆದಿದ್ದರು. ಈ ವೇಳೆ ಕೋವಿಡ್ ಪ್ರೇರಿತ ಲಾಕ್‌ಡೌನ್‌ನಿಂದ ಇತರೆ ಪ್ರದೇಶಗಳಲ್ಲಿ ಸಿಲುಕಿದ್ದ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರನ್ನು ತಲುಪಲು ಹೆಣಗಾಡಿದರು.

ಪೊಲೀಸರ ಪ್ರಕಾರ, ರಾಷ್ಟ್ರ ರಾಜಧಾನಿಯ ಅಲಿಪೋರ್ ಪ್ರದೇಶದ ತನ್ನ ಮನೆಯ ಮುಂಭಾಗದಲ್ಲಿರುವ ದೇವಾಲಯದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ರೈತ ಪತ್ತೆಯಾಗಿದ್ದಾರೆ. ಗೆಹ್ಲೋಟ್, ತನ್ನ ಆತ್ಮಹತ್ಯೆಗೆ 'ಅನಾರೋಗ್ಯ'ವೇ ಕಾರಣ ಎಂದು ಹೇಳಿರುವ ಡೆತ್‌ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸ್ನೇಹಜೀವಿಯಾಗಿದ್ದ ಗೆಹ್ಲೋಟ್, ದೇಶದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸಿದಾಗ, ಮತ್ತೊಮ್ಮೆ ವಿಮಾನದ ಟಿಕೆಟ್‌ಗಳನ್ನು ಖರೀದಿಸುವ ಮೂಲಕ ತಮ್ಮ ಉದ್ಯೋಗಿಗಳನ್ನು ಮತ್ತೆ ಕೆಲಸಕ್ಕೆ ಕರೆಸಿಕೊಂಡಿದ್ದರು.

ಗೆಹ್ಲೋಟ್ ಅವರ ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com