ಘಟನಾ ಸ್ಥಳದಲ್ಲಿ ರಸ್ತೆಯನ್ನು ಬಂದ್ ಮಾಡಿರುವ ಭದ್ರತಾ ಸಿಬ್ಬಂದಿಗಳು
ವಿದೇಶ
ಕಾಬೂಲ್'ನ ಇಂಟರ್'ಕಾಂಟಿನೆಂಟಲ್ ಹೋಟೆಲ್ ಮೇಲೆ ಆತ್ಮಾಹುತಿ ದಾಳಿ: 5 ಸಾವು, ಹಲವರಿಗೆ ಗಾಯ
ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್'ನ್ ಇಂಟರ್'ಕಾಂಟಿನೆಂಟಲ್ ಹೋಟೆಲ್ ಮೇಲೆ ಬಂದೂಕುಧಾರಿಗಳು ಆತ್ಮಾಹುತಿ ದಾಳಿ ನಡೆಸಿದ್ದು, ಘಟನೆಯಲ್ಲಿ 5 ಮಂದಿ ಸಾವನ್ನಪ್ಪಿ, ಹಲವರಿಗೆ ಗಾಯಗೊಂಡಿದ್ದಾರೆಂದು ಭಾನುವಾರ ತಿಳಿದುಬಂದಿದೆ...
ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್'ನ್ ಇಂಟರ್'ಕಾಂಟಿನೆಂಟಲ್ ಹೋಟೆಲ್ ಮೇಲೆ ಬಂದೂಕುಧಾರಿಗಳು ಆತ್ಮಾಹುತಿ ದಾಳಿ ನಡೆಸಿದ್ದು, ಘಟನೆಯಲ್ಲಿ 5 ಮಂದಿ ಸಾವನ್ನಪ್ಪಿ, ಹಲವರಿಗೆ ಗಾಯಗೊಂಡಿದ್ದಾರೆಂದು ಭಾನುವಾರ ತಿಳಿದುಬಂದಿದೆ.
ಕಳೆದ ರಾತ್ರಿ ಹೋಟೆಲ್'ಗೆ ನುಗ್ಗಿರುವ ನಾಲ್ವರು ಬಂದೂಕುಧಾರಿಗಳು, ಇದ್ದಕ್ಕಿದ್ದಂತೆಯೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಹಾಗೂ ಅತಿಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.
ಹೋಟೆಲ್ ಒಳ ಪ್ರವೇಶಿಸಿದ ಬಳಿಕ ಸಣ್ಣ ಶಸ್ತ್ರಾಸ್ತ್ರಗಳು ಹಾಗೂ ರಾಕೆಟೆ ಪ್ರೊಪೆಲ್ಡ್ ಗ್ರೆನೇಡ್ ಗಳನ್ನು ಸ್ಫೋಟಿಸಿದ್ದಾರೆ. ಪರಿಣಾಮ ಹೋಟೆಲ್'ನಲ್ಲಿ ಬೆಂಕಿ ಹೊತ್ತುಕೊಂಡಿದ್ದು, ಹಲವರು ಸಾವಿಗೀಡಾಗಿರುವ ಶಂಕೆಗಳು ವ್ಯಕ್ತವಾಗಿದೆ.
ಪ್ರಸ್ತುತ ಹೋಟೆಲ್ ನಲ್ಲಿ ಗುಂಡಿನ ಚಕಮಕಿ ಮುಂದುವರೆದಿದ್ದು, ಹೋಟೆಲ್ ಒಳಗೆ ಬಚ್ಚಿಟ್ಟುಕೊಂಡಿರುವ ಅತಿಥಿಯೊಬ್ಬರು ಸ್ಥಳದಲ್ಲಿ ಗುಂಡಿನ ಮೊರೆತದ ಶಬ್ಧ ಕೇಳಿ ಬರುತ್ತಿದೆ ಎಂದು ಹೇಳಿದ್ದಾರೆ.
ಹೋಟೆಲ್ ಒಳಗೆ ಬಂದೂಕುಧಾರಿಗಳು ಇದ್ದಾರೆಯೋ, ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಆದರೆ, ಮೊದಲನೇ ಮಹಡಿಯಲ್ಲಿ ಗುಂಡಿನ ಮೊರೆತದ ಶಬ್ಧ ಕೇಳಿ ಬರುತ್ತಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ನಾವು ಹೋಟೆಲ್'ನ ಕೊಠಡಿಯೊಂದರಲ್ಲಿ ಬಚ್ಚಿಟ್ಚುಕೊಂಡಿದ್ದೇವೆ. ಬಂದೂಕುಧಾರಿಗಳು ನಾವಿರುವ ಸ್ಥಳ ತಲುಪಿ ನಮ್ಮನ್ನು ಹತ್ಯೆ ಮಾಡುವುದಕ್ಕೂ ಮುನ್ನ ನಮ್ಮನ್ನು ರಕ್ಷಣೆ ಮಾಡುವಂತೆ ಈ ಮೂಲಕ ಭದ್ರತಾ ಸಿಬ್ಬಂದಿಗಳ ಬಳಿ ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ