ಭಾರತ ಭೇಟಿ 'ಚಾರಿತ್ರಿಕ': ಮೋದಿಗೆ ನೇತಾನ್ಯಹು ಅಭಿನಂದನೆ

ತಮ್ಮ ಭಾರತ ಭೇಟಿ ಚಾರಿತ್ರಿಕವಾದದ್ದು, ಆರು ದಿನಗಳ ಪ್ರವಾಸದಲ್ಲಿ ಗಟ್ಟಿಯಾದ ಬಾಂಧವ್ಯ ಏರ್ಪಟ್ಟಿದ್ದು, ಸುಧೀರ್ಘ ಕಾಲ ಉಳಿಯುವಂತಾಗಿದೆ ಎಂದು ಇಸ್ರೇಲ್ ಪ್ರಧಾನಿ ನೇತಾನ್ಯಹು ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ನೇತಾನ್ಯಹು ಹಾಗೂ ಮೋದಿ ಅವರ( ಸಾಂದರ್ಭಿಕ ಚಿತ್ರ)
ಇಸ್ರೇಲ್ ಪ್ರಧಾನಿ ನೇತಾನ್ಯಹು ಹಾಗೂ ಮೋದಿ ಅವರ( ಸಾಂದರ್ಭಿಕ ಚಿತ್ರ)

ಇಸ್ರೇಲ್ : ತಮ್ಮ ಭಾರತ ಭೇಟಿ ಚಾರಿತ್ರಿಕವಾದದ್ದು, ಆರು ದಿನಗಳ ಪ್ರವಾಸದಲ್ಲಿ ಗಟ್ಟಿಯಾದ ಬಾಂಧವ್ಯ ಏರ್ಪಟ್ಟಿದ್ದು, ಸುಧೀರ್ಘ ಕಾಲ ಉಳಿಯುವಂತಾಗಿದೆ ಎಂದು ಇಸ್ರೇಲ್ ಪ್ರಧಾನಿ ನೇತಾನ್ಯಹು ಹೇಳಿದ್ದಾರೆ.

ಜನವರಿ 14 ರಂದು ದೆಹಲಿಗೆ ಆಗಮಿಸಿದ್ದ ನೇತಾನ್ಯಹು ಆರು ದಿನಗಳ ಕಾಲ ಭಾರತದಲ್ಲಿ ತಂಗಿದ್ದರು. ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದಕ್ಕಾಗಿ ಪ್ರಧಾನಿ ನರೇಂದ್ರಮೋದಿಗೆ ಅಭಿನಂದನೆ ಸಲ್ಲಿಸುವುದಾಗಿ ನೇತಾನ್ಯಹು ತಮ್ಮ ಸಚಿವು ಸಂಪುಟದ ಸಭೆಯಲ್ಲಿ ತಿಳಿಸಿದ್ದಾರೆ.

 ಪ್ರವಾಸದಿಂದಾಗಿ ಉಭಯ ದೇಶ ಹಾಗೂ ಜನರ ನಡುವೆ ಸ್ನೇಹ ಸಂಪರ್ಕ ಏರ್ಪಟ್ಟಂತಾಗಿದೆ. ಆರ್ಥಿಕ, ಭದ್ರತೆ, ತಂತ್ರಜ್ಞಾನ, ಮತ್ತು ರಾಜತಾಂತ್ರಿಕ ವಿಚಾರಗಳಲ್ಲಿ ಅನೇಕ ಕೊಡುಗೆ ನೀಡಿದಂತಾಗಿದೆ ವ್ಯಾಪಾರ, ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ  ಉಭಯ ದೇಶಗಳ ನಡುವೆ 9 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

  ತಮ್ಮ ಪ್ರವಾಸದ ವೇಳೆ ಎರಡು ವಿಶೇಷ ಘಟನೆಗಳು ಮನಸ್ಸಿಗೆ ತಟ್ಟಿವೆ. ಮುಂಬಯಿ ದಾಳಿ ವೇಳೆ ತಮ್ಮ  ಪೋಷಕರನ್ನು ಕಳೆದುಕೊಂಡು ಬದುಕುಳಿದಿರುವ 11 ವರ್ಷದ ಬಾಲಕ ಮೋಸೆಯನ್ನು ಭೇಟಿಯಾದದ್ದು , ಹಾಗೂ ಭಾರತದಲ್ಲಿನ ಯಹ್ಯೂದಿ ಸಮುದಾಯ ದೇಶದ ಅಭಿವದ್ದಿಯಲ್ಲಿ ಸಲ್ಲಿಸುತ್ತಿರುವ ಕೊಡುಗೆಗಳು ತಮ್ಮ ಗಮನ ಸೆಳೆದಿದ್ದಾಗಿ ನೇತಾನ್ಯಹು ಸಂಪುಟ ಸಭೆಯಲ್ಲಿ ತಿಳಿಸಿದ್ದಾರೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com