ಲಿಬಿಯಾದಲ್ಲಿ ಅವಳಿ ಕಾರ್ ಬಾಂಬ್ ಸ್ಫೋಟ, 33 ಸಾವು, 50 ಮಂದಿ ಗಾಯ

ಲಿಬಿಯಾದ ಬೆಂಘಾಝಿ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ಅವಳಿ ಕಾರ್ ಬಾಂಬ್‌ ಸ್ಫೋಟದಲ್ಲಿ ಕನಿಷ್ಚ 33 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಗೆ ತುತ್ತಾದ ಮಸೀದಿ
ದಾಳಿಗೆ ತುತ್ತಾದ ಮಸೀದಿ
ಟ್ರಿಪೋಲಿ: ಲಿಬಿಯಾದ ಬೆಂಘಾಝಿ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ಅವಳಿ ಕಾರ್ ಬಾಂಬ್‌ ಸ್ಫೋಟದಲ್ಲಿ ಕನಿಷ್ಚ 33 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. 
ಬೆಂಘಾಝಿಯ ಆಲ್‌ ಸಲ್ಮಾನಿ ಜಿಲ್ಲೆಯಲ್ಲಿರುವ ಮಸೀದಿಯೊಂದರಿಂದ ಪ್ರಾಥನೆ ಮುಗಿಸಿ ಹೊರಗಡೆ ಬರುತ್ತಿದ್ದ ಸಂದರ್ಭದಲ್ಲಿ ರಾತ್ರಿ ಈ ದುರ್ಘ‌ಟನೆ ಸಂಭವಿಸಿದ್ದು, ಮೊದಲ ಸ್ಫೋಟ ರಾತ್ರಿ 8.20ಕ್ಕೆ ಸಂಭವಿಸಿದ್ದು, ಇದಾದ ಕೇವಲ   10 ರಿಂದ 15 ನಿಮಿಷಗಳ ಅಂತರದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಈ ವೇಳೆ ಸಾವನ್ನಪ್ಪಿದವರ ಪೈಕಿ ಲಿಬಿಯಾ ಮತ್ತು ಅಂತಾರಾಷ್ಟ್ರೀಯ ಶಾಂತಿಪಾಲನಾ ಪಡೆಯ ಸೈನಿಕರು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಮಸೀದಿಯ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಮರ್ಸೀಡೀಸ್ ಕಾರುಗಳಲ್ಲಿ ಉಗ್ರರು ಬಾಂಬ್  ಅಡಗಿಸಿ ಸ್ಫೋಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಗಾಯಾಳುಗಳ ರಕ್ಷಣೆಗೆ  ಸ್ಥಳಕ್ಕಾಗಮಿಸಿದ್ದ ಆ್ಯಂಬುಲೆನ್ಸ್ ಕೂಡ ಎರಡನೇ ಸ್ಫೋಟದ ವೇಳೆ ದಾಳಿಗೆ ತುತ್ತಾಗಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಅಂತೆಯೇ ಮೊದಲ ದಾಳಿಗಿಂತಲೂ ಎರಡನೇ ದಾಳಿ ಸಾವನ್ನಪ್ಪಿದವರ ಸಂಖ್ಯೆ  ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಇನ್ನು ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಪ್ರಸ್ತುತ ಓರ್ವ ಶಂಕಿತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತೆಯೇ ಈ ವರೆಗೂ ದಾಳಿ ಸಂಬಂಧ ಯಾವುದೇ ಉಗ್ರಸಂಘಟನೆ ಜವಾಬ್ದಾರಿ ಹೊತ್ತುಕೊಂಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com