ಬಹ್ರೇನ್ ನಲ್ಲಿ ನಡೆದ 42 ನೇ ವಿಶ್ವ ಪಾರಂಪರಿಕ ಸಮಿತಿ ಸಭೆಯಲ್ಲಿ ಮೌಂಟ್ ಫನ್ಜಿಂಗ್ಯಾನ್ ನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ. ಉನ್ನತ ಗುಣಮಟ್ಟದ ಕಾಡುಗಳ ವೈವಿಧ್ಯತೆ, ಪರ್ವತ ದೃಶ್ಯಾವಳಿ, ಜೌಗು ಪ್ರದೇಶಗಳು, ಜಲಪಾತಗಳು, 450 ಕಶೇರುಕ ಜೀವಿಗಳನ್ನು ಹೊಂದಿರುವ ಮೌಂಟ್ ಫನ್ಜಿಂಗ್ಯಾನ್ ನ ಸೌಂದರ್ಯವನ್ನು ಗುರುತಿಸಿ , ಯುನೆಸ್ಕೋ ಪಟ್ಟಿಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.