ಮಕ್ಕಳಿಗೆ ಲೈಂಗಿಕ ಕಿರುಕುಳ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದ ಆರ್ಚ್ ಬಿಷಪ್ ಗೆ 1 ವರ್ಷ ಜೈಲು

ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದ ಆರ್ಚ್ ಬಿಷಪ್ ಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಆರ್ಚ್ ಬಿಷಪ್
ಆರ್ಚ್ ಬಿಷಪ್
ಕ್ಯಾನ್ಬೆರಾ: ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದ ಆರ್ಚ್ ಬಿಷಪ್ ಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. 
1970 ರ ಪ್ರಕರಣದಲ್ಲಿ ಈಗ ಆರ್ಚ್ ಬಿಷಪ್ ಆಗಿರುವ ಫಿಲಿಪ್ ವಿಲ್ಸನ್ ಗೆ ಶಿಕ್ಷೆ ನೀಡಲಾಗಿದ್ದು, ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾದ ಜಗತ್ತಿನ ಅತಿ ಹಿರಿಯ ಕ್ಯಾಥೋಲಿಕ್ ಈತ ಎಂದು ಬಿಸಿಸಿ ವರದಿ ಪ್ರಕಟಿಸಿದೆ. 
ನ್ಯೂ ಸೌತ್ ವೇಲ್ಸ್ ನಲ್ಲಿ ಶಿಶುಕಾಮಿ ಪಾದ್ರಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣವನ್ನು ಮುಚ್ಚಿ ಹಾಕಲು ಸಹಾಯ ಮಾಡಿದ್ದ ಆರ್ಚ್ ಬಿಷಪ್ ನ ಅಪರಾಧ ಜೂನ್ ನಲ್ಲಿ ಸಾಬೀತಾಗಿತ್ತು.  ಕೋರ್ಟ್ ಈಗ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, 1 ವರ್ಶಗಳ ಕಾಲ ಗೃಹ ಬಂಧನದಲ್ಲಿರಿಸುವಂತೆ ಸೂಚನೆ ನೀಡಿದೆ. ಅಪರಾಧಿ ಎಂದು ಸಾಬೀತಾದ ನಂತರವೂ ಆರ್ಚ್ ಬಿಷಪ್ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಕೋರ್ಟ್ ಹೇಳಿದ್ದು, 6 ತಿಂಗಳ ನಂತರ ಆರ್ಚ್ ಬಿಷಪ್ ಪೆರೋಲ್ ಮೇಲೆ ಹೊರಬರಲು ಅವಕಾಶವಿದೆ ಎಂದು ತಿಳಿಸಿದೆ. ಇಷ್ಟೆಲ್ಲಾ ಆದರೂ ಸಹ ಆರ್ಚ್ ಬಿಷಪ್ ತಮ್ಮ ಪದವಿಯಲ್ಲೇ ಮುಂದುವರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com