ಮಾನಸ ಸರೋವರ ಯಾತ್ರೆ: ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 150 ಭಾರತೀಯರ ರಕ್ಷಣೆ

ಕಳೆದ 4 ದಿನಗಳಿಂದ ನೇಪಾಳ ಬಳಿಯ ಸಿಮಿಕೋಟ್ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಮಂಜಿನ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ಭಾರತೀಯ ಪೈಕಿ 150 ಭಾರತೀಯರನ್ನು...
ಮಾನಸ ಸರೋವರ ಯಾತ್ರೆ: ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 150 ಭಾರತೀಯರ ರಕ್ಷಣೆ
ಮಾನಸ ಸರೋವರ ಯಾತ್ರೆ: ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 150 ಭಾರತೀಯರ ರಕ್ಷಣೆ
ಕಠ್ಮಂಡು; ಕಳೆದ 4 ದಿನಗಳಿಂದ ನೇಪಾಳ ಬಳಿಯ ಸಿಮಿಕೋಟ್ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಮಂಜಿನ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ಭಾರತೀಯ ಪೈಕಿ 150 ಭಾರತೀಯರನ್ನು ರಕ್ಷಣೆ ಮಾಡಲಾಗಿದೆ ಎಂದು ಮಂಗಳವಾರ ತಿಳಿದುಬಂದಿದೆ. 
ಸಿಮಿಕೋಟ್'ನಿಂದ 150 ಭಾರತೀಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
3,600 ಮೀಟರ್ ಎತ್ತರ ಹಿಲ್ಸಾದಲ್ಲಿ ಸಿಲುಕಿಕೊಂಡಿರುವ ಯಾತ್ರಿಕರನ್ನು ರಕ್ಷಣೆ ಮಾಡಲು ಯತ್ನಗಳನ್ನು ನಡೆಸುತ್ತಿದ್ದೇವೆ. ನೇಪಾಳ ಸರ್ಕಾರದ 11 ಹೆಲಿಕಾಪ್ಟರ್ ಗಳೂ ಕೂಡ ಕಾರ್ಯಾಚರಣೆ ನಡೆಸುತ್ತಿವೆ. ಕೆಲ ಖಾಸಗಿ ಕಂಪನಿಗಳ ಹೆಲಿಕಾಪ್ಟರ್ ಗಳೂ ಕಾರ್ಯಾಚರಣೆ  ನಡೆಸುತ್ತಿವೆ ಎಂದು ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಬಿ.ಕೆ.ರೆಗ್ಮಿಯವರು ಹೇಳಿದ್ದಾರೆ. 
ಸಿಮಿಕೋಟ್'ಗೆ 2 ವಿಮಾನಗಳು ಆಗಮಿಸಿದ್ದು, ಸಂಕಷ್ಟದಲ್ಲಿರುವ 525 ಯಾತ್ರಾರ್ಥಿಗಳನ್ನು ರಕ್ಷಣೆ ಮಾಡುತ್ತಿವೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com