ಥಾಯ್ಲೆಂಡ್‌ ಗುಹೆಯಲ್ಲಿ ಸಿಲುಕಿದ್ದ ಎಲ್ಲಾ 12 ಬಾಲಕರು ಮತ್ತು ಕೋಚ್ ರಕ್ಷಣೆ

ಥಾಯ್ಲೆಂಡ್ ನ ಗುಹೆಯೊಂದರಲ್ಲಿ ಸಿಲುಕಿದ್ದ ಥಾಯ್ ಯುವ ಫುಟ್ಬಾಲ್ ತಂಡದ ಎಲ್ಲಾ 12 ಆಟಗಾರರನ್ನು...
ರಕ್ಷಣಾ ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆ
ಬ್ಯಾಂಕಾಕ್: ಥಾಯ್ಲೆಂಡ್ ನ ಗುಹೆಯೊಂದರಲ್ಲಿ ಸಿಲುಕಿದ್ದ ಥಾಯ್ ಯುವ ಫುಟ್ಬಾಲ್ ತಂಡದ ಎಲ್ಲಾ 12 ಆಟಗಾರರನ್ನು ಮತ್ತು ಅವರ ಕೋಚ್ ಅನ್ನು ಮಂಗಳವಾರ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಥಾಯ್ ನೌಕಾಪಡೆ ತಿಳಿಸಿದೆ. ಇದರೊಂದಿಗೆ ಕಳೆದ 18 ದಿನಗಳಿಂದ ನಡೆಯುತ್ತಿದ್ದ ರಕ್ಷಣಾ ಕಾರ್ಯಾಚರಣೆ ಅಂತ್ಯಗೊಂಡಿದೆ.
ಗುಹೆಯಿಂದ ಇಂದು ನಾಲ್ವರು ಬಾಲಕರನ್ನು ಸುರಕ್ಷಿತವಾಗಿ ಹೊರ ತರಲಾಗಿದ್ದು, ಒಟ್ಟಾರೇ 12 ಬಾಲಕರನ್ನು ಹಾಗೂ 25 ವರ್ಷದ ಕೋಚ್ ಅನ್ನು ರಕ್ಷಿಸಲಾಗಿದೆ ಎಂದು ಥಾಯ್ ನೌಕಾಪಡೆ ಸೀಲ್ ತನ್ನ ಫೇಸ್ ಬುಕ್ ಪೇಜ್ ನಲ್ಲಿ ತಿಳಿಸಿದೆ.
ಪ್ರವಾಹದಿಂದಾಗಿ ಥಾಯ್ ಲುವಾಂಗ್ ಗುಹೆಯಲ್ಲಿ ಸಿಲುಕಿಕೊಂಡಿದ್ದ 12 ಬಾಲಕರ ಪೈಕಿ ಎಂಟು ಬಾಲಕರನ್ನು ಭಾನುವಾರ ಮತ್ತು ಸೋಮವಾರ ರಕ್ಷಿಸಲಾಗಿತ್ತು. ಇಂದು ಮತ್ತೆ ನಾಲ್ವರು ಬಾಲಕರನ್ನು ಹೊರಗೆ ಕರೆತರುವಲ್ಲಿ ರಕ್ಷಣ ತಂಡ ಯಶಸ್ವಿಯಾಗಿದೆ.
ನಿನ್ನೆ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ನಾಲ್ಕು ಬಾಲಕರನ್ನು ರಕ್ಷಿಸಲಾಗಿತ್ತು. ನಂತರ ಗುಹೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿ ತಾತ್ಕಾಲಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಮತ್ತೆ ಕಾರ್ಯಾಚರಣೆ ಆರಂಭಿಸಿ ನಾಲ್ವರನ್ನು ರಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com