ಸಿಖ್ಖರನ್ನು ಬಲವಂತವಾಗಿ ಹೊರಹಾಕಲು ಪಾಕಿಸ್ತಾನ ಯತ್ನ: ಗುಲಾಬ್ ಸಿಂಗ್
ಸಿಖ್ಖರನ್ನು ಬಲವಂತವಾಗಿ ಹೊರಹಾಕಲು ಪಾಕಿಸ್ತಾನ ಯತ್ನ: ಗುಲಾಬ್ ಸಿಂಗ್

ಸಿಖ್ಖರನ್ನು ಬಲವಂತವಾಗಿ ಹೊರಹಾಕಲು ಪಾಕಿಸ್ತಾನ ಯತ್ನ: ಗುಲಾಬ್ ಸಿಂಗ್

ಪಾಕಿಸ್ತಾನ ಸರ್ಕಾರ ಸಿಖ್ಖರನ್ನು ದೇಶದಿಂದ ಬಲವಂತವಾಗಿ ಹೊರಹಾಕಬೇಕೆಂದು ಬಯಸಿದೆ ಎಂದು ಪಾಕಿಸ್ತಾನದ ಮೊದಲ ಸಿಖ್ ಪೊಲೀಸ್ ಅಧಿಕಾರಿ ಗುಲಾಬ್ ಸಿಂಗ್ ಹೇಳಿದ್ದಾರೆ.
ಲಾಹೋರ್: ಪಾಕಿಸ್ತಾನ ಸರ್ಕಾರ ಸಿಖ್ಖರನ್ನು  ದೇಶದಿಂದ ಬಲವಂತವಾಗಿ ಹೊರಹಾಕಬೇಕೆಂದು ಬಯಸಿದೆ ಎಂದು ಪಾಕಿಸ್ತಾನದ ಮೊದಲ ಸಿಖ್ಖ್ ಪೊಲೀಸ್ ಅಧಿಕಾರಿ ಗುಲಾಬ್ ಸಿಂಗ್ ಹೇಳಿದ್ದಾರೆ.
ಸಿಂಗ್ ಅವರ ಮನೆಯಿಂದ ಅವರನ್ನು ಮತ್ತು ಅವರ ಕುಟುಂಬವನ್ನು ಬಲವಂತವಾಗಿ ತೆರವುಗೊಳಿಸಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನಿಡಿದ್ದಾರೆ.
"1947ರಿಂದಲೂ ನನ್ನ ಕುಟುಂಬ ಪಾಕಿಸ್ತಾನದಲ್ಲಿ ನೆಲೆಸಿದೆ, ಗಲಭೆಗಳ ನಂತರವೂ ನಾವು ಪಾಕಿಸ್ತಾನವನ್ನು ಬಿಡಲಿಲ್ಲ .ಈಗ ನಾವು ಇಲ್ಲಿಂದ ತೆರಳಬೇಕಾಗಿದೆ.ನಮ್ಮನ್ನು ಬಲವಂತವಾಗಿ ಹೊರಹಾಕಲಾಗಿದೆ. 
ಏನೆಂದರೆ ನನ್ನ ಚಪ್ಪಲಿ ಸೇರಿ ಎಲ್ಲಾ ಅಗತ್ಯ ವಸ್ತುಗಳು ಮನೆಯೊಳಗಿದ್ದಂತೆಯೇ ಮನೆಯನ್ನು ಜಪ್ತಿ ಮಾಡಿ ಬೀಗ ಹಾಕಲಾಗಿದೆ. ಈ ನನ್ನ ತಲೆ ಮೇಲಿರುವ ’ಪಟ್ಕಾ’ಸಹ ಹಳೆ ರಗ್ಗಿನಿಂದ ಮಾಡಿಕೊಂಡದ್ದು. ನಾನೇ ಇದನ್ನು ಸುತ್ತಿ ಸುತ್ತಿ ಹೀಗೆ ತಲೆಗೆ ಏರಿಸಿಕೊಂಡಿದ್ದು.
"ನನಗೆ ಸತತ ಕಿರುಕುಳ ನೀಡಲಾಗಿದೆ, ನನ್ನನ್ನು ಥಳಿಸಿ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ.ಮತ್ತು ನನ್ನ ನಂಬಿಕೆಯನ್ನೇ ಅವಮಾನಿಸಲಾಗಿದೆ" ಎಎನ್ ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಗುಲಾಬ್ ಸಿಂಗ್ ಹೇಳಿದ್ದಾರೆ.
ತನ್ನ ಕುಟುಂಬ ಹಾಗೂ ನನ್ನನ್ನು ಎವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ನಿಂದ ಬಲವಂತವಾಗಿ ಕಿತ್ತೊಗೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.. "

Related Stories

No stories found.

Advertisement

X
Kannada Prabha
www.kannadaprabha.com