ಇಮ್ರಾನ್ ಖಾನ್ ಗೆ ಅನೈತಿಕ ಸಂಬಂಧದಿಂದ ಹುಟ್ಟಿದ 5 ಮಕ್ಕಳಿದ್ದಾರೆ: ಅವರಲ್ಲಿ ಕೆಲವರು ಭಾರತೀಯರು!

ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ ರಾಜಕಾರಣಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್ ನೀಡಿರುವ ಹೇಳಿಕೆ ಪಾಕಿಸ್ತಾನದಲ್ಲಿ ಭಾರೀ...
ಇಮ್ರಾನ್ ಖಾನ್
ಇಮ್ರಾನ್ ಖಾನ್
Updated on
ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ ರಾಜಕಾರಣಿ ಇಮ್ರಾನ್ ಖಾನ್  ಮಾಜಿ ಪತ್ನಿ ರೆಹಮ್ ಖಾನ್ ನೀಡಿರುವ ಹೇಳಿಕೆ ಪಾಕಿಸ್ತಾನದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ,
ಪಾಕಿಸ್ತಾನ್ ತೆಹ್ರಕ್ ಇ- ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಗೆ ಅನೈತಿಕ ಸಂಬಂಧದಿಂದ ಹುಟ್ಟಿದ 5 ಮಕ್ಕಳಿದ್ದಾರೆ, ಅವರಲ್ಲಿ ಕೆಲವರು ಭಾರತೀಯರು ಇದ್ದಾರೆ ಎಂದು ಆತ ತನ್ನ ಬಳಿ ಹೇಳಿಕೊಂಡಿದ್ದಾನೆ ಎಂದು ರೆಹಮ್ ಖಾನ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ, ಪಾಕಿಸ್ತಾನದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರೆಹಮ್ ಖಾನ್ ಅವರ ಈ ಆರೋಪದಿಂದ ಪ್ರಧಾನ ಮಂತ್ರಿ ಹುದ್ದೆ ಆಕಾಂಕ್ಷಿಯಾಗಿರುವ ಇಮ್ರಾನ್ ಖಾನ್ ದ ವರ್ಚಸ್ಸಿಗೆ ಭಾರೀ ಹೊಡೆತ ಬಿದ್ದಿದೆ.
ಇಮ್ರಾನ್ ಖಾನ್ ಪತ್ನಿ ಪೀಡಕ, ವುಮನೈಜರ್ ಜೊತೆಗೆ ಮಾದಕ ವ್ಯಸನಿಯೂ ಆಗಿರುವ ಆತ, ವಿವಾಹಿತ ಪುರುಷನೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದಾನೆ ಎಂದು ಬರೆದಿದ್ದಾರೆ,
ರೆಹಮ್ ಖಾನ್ ಹೆಸರಿನ ಪುಸ್ತಕದಲ್ಲಿ  ಕೇವಲ ಇರ್ಮಾನ್ ಖಾನ್ ಬಗ್ಗೆ ಮಾತ್ರ ಬರಹವಿಲ್ಲ, ಜೊತೆಗೆ ಪಾಕಿಸ್ತಾನ ರಾಜಕೀಯದ ಕರಾಳ ಮುಖದ ಚಿತ್ರಣ ಕೂಡ ನೀಡಿದ್ದಾರೆ.
ತನ್ನ ಮೊದಲ ಪತಿ ಇಜಾಜ್ ರೆಹಮಾನ್ ಹಾಗೂ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಸೇರಿದಂತೆ ಹಲವು ಮಂದಿಯಿಂದ ಜೀವ ಬೆದರಿಕೆಯಿದ್ದು ಕಾನೂನು ಸಮರ ನಡೆಸುತ್ತಿರುವುದಾಗಿ ಹೇಳಿದ್ದಾರೆ,.ವಾಸಿಂ ಅಕ್ರಮ್ ತನ್ನ ಹೆಂಡತಿ ಮತ್ತೊಬ್ಬನ ಜೊತೆ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡಲು ಬಯಸುತ್ತಾನೆ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಮೌತ್ ಗಾರ್ಡ್ ನಲ್ಲಿ ಕೋಕೇನ್ ಬಳಕೆ ಮಾಡುತ್ತಾರೆ, ಪ್ರತಿದಿನ ಹೆರಾಯಿನ್ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ,
ಬಿಬಿಸಿ ಮಾಜಿ ಪತ್ರಕರ್ತೆ ರೆಹಮ್ ಖಾನ್ ಇದು ನಾನು ನಡೆಸಿದ ನನ್ನ ಜೀವನದ ಹೋರಾಟ ಹಾಗೂ ಅದರಿಂದ ಹೇಗೆ ನಾನು ಹೊರಬಂದೆ ಎನ್ನುವುದರ ಬಗ್ಗೆ ಪುಸ್ತಕದಲ್ಲಿ ಬರೆದಿದ್ದೇನೆ,.ಪಾಕಿಸ್ತಾನದಲ್ಲಿ ಜುಲೈ 25ಕ್ಕೆ ಸಾರ್ವತ್ರಿಕ ಚುನಾವಣೆಯಿದ್ದು, ಇಮ್ರಾನ್ ಖಾನ್ ರಾಜಕೀಯ ಜೀವನ ಪೆಟ್ಟು ಕೊಡಲು ಪುಸ್ತಕ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.
2015ರ ಜನವರಿಯಲ್ಲಿ ಆತನನ್ನು ವಿವಾಹವಾದ ಮೇಲೆ, ತನಗೆ ಮತ್ತು ಅಮೆರಿಕಾದ ಸಿತಾ ವೈಟ್ ಗೆ ಅನೈತಿಕ ಸಂಬಂದವಿದ್ದು, ತಮಗೆ ಟೆರಿಯನ್ ವೈಟ್ ಎಂಬ ಮಗಳಿದ್ದಾಳೆ ಎಂದು ಇಮ್ರಾನ್ ಹೇಳಿದ್ದ. ನಿನಗೆ ಗೊತ್ತಾ ಕೇವಲ ಅವಳೊಬ್ಬಳು ಮಾತ್ರವಲ್ಲ, ನನಗೆ ಅನೈತಿಕ ಸಂಬಂಧದಿಂದ ಹುಟ್ಟಿದ 5 ಮಕ್ಕಳಿವೆ, ಅದರಲ್ಲಿ ಕೆಲವರು ಭಾರತೀಯರು, ಮೊದಲನೆ ಮಗುವಿಗೆ 34 ವರ್ಷ. 
ಅವರ ಅಮ್ಮಂದಿರು ವಿವಾಹಿತರು, ಅವರ ವಿವಾಹ ಜೀವನ ಹಾಳು ಮಾಡಲು ಬಯಸದ ನಾನು ಈ ಎಲ್ಲಾ ವಿಷಯಗಳನ್ನು ರಹಸ್ಯವಾಗಿಟ್ಟಿದ್ದೇನೆ ಎಂದು ಇಮ್ರಾನ್ ಖಾನ್ ಹೇಳಿದ್ದಾಗಿ ಪುಸ್ತಕದಲ್ಲಿ ಬರೆಯಲಾಗಿದೆ, 
ಇಮ್ರಾನ್ ಖಾನ್ ಜಾಮೈಮಾ ಎಂಬಾಕೆಯನ್ನು ವಿವಾಹವಾಗಿದ್ದ, ಆತ ಬ್ರಿಟಿಷ್ ಮೂಲದವಳು, ಸುಮಾರು 9 ವರ್ಷ ಆತನ ಜೊತೆ ಸಂಸಾರ ನಡೆಸಿ ಪಾಕಿಸ್ತಾನದ ಜೀವನ ಶೈಲಿಗೆ ಹೊಂದಿಕೊಳ್ಳದೇ ಆತನನ್ನು ಬಿಟ್ಟು ತೆರಳಿದಳು. 
10 ತಿಂಗಳು ಸಂಸಾರ ನಡೆಸಿದ ರೆಹಮ್ ಖಾನ್ ಕಳೆದ ತಿಂಗಳು ಇರ್ಮಾನ್  ಖಾನ್ ನಿಂದ ಪ್ರತ್ಯೇಕವಾಗಿದ್ದಾಳೆ, ತನ್ನ ಪತಿ ಪ್ರಾಮಾಣಿಕವಾಗಿಲ್ಲ ಹಾಗೂ ಸರಿಯಿಲ್ಲ ಎಂದು ಘೋಷಿಸಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com