ಮಸ್ತುಂಗ್ ಬಾಂಬ್ ಸ್ಫೋಟದ ಜವಾಬ್ದಾರಿ ಹೊತ್ತ ಇಸಿಸ್ ಉಗ್ರ ಸಂಘಟನೆ, ಚುನಾವಣೆ ಮುಂದೂಡಿಕೆ

128 ಮಂದಿ ಜನರ ಸಾವಿಗೆ ಕಾರಣವಾದ ಬಲೂಚಿಸ್ತಾನದ ಮಸ್ತುಂಗ್ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಚುನಾವಣಾ ರ್ಯಾಲಿ ವೇಳೆ ನಡೆದ ಬಾಂಬ್ ಸ್ಫೋಟಕ್ಕೆ ನಾನೇ ಜವಾಬ್ದಾರಿ ಎಂದು ಕುಖ್ಯಾತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಾಹೋರ್: 128 ಮಂದಿ ಜನರ ಸಾವಿಗೆ ಕಾರಣವಾದ ಬಲೂಚಿಸ್ತಾನದ ಮಸ್ತುಂಗ್ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಚುನಾವಣಾ ರ್ಯಾಲಿ ವೇಳೆ ನಡೆದ ಬಾಂಬ್ ಸ್ಫೋಟಕ್ಕೆ ನಾನೇ ಜವಾಬ್ದಾರಿ ಎಂದು ಕುಖ್ಯಾತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹೇಳಿದೆ.
ಈ ಬಗ್ಗೆ ಆಡಿಯೋವೊಂದನ್ನು ಇಸಿಸ್ ಬಿಡುಗಡೆ ಮಾಡಿದ್ದು, ಇದಲ್ಲದೆ ತನ್ನ ಮುಖವಾಣಿ ಅಮಾಖ್ ನಲ್ಲೂ ಈ ಬಗ್ಗೆ ಹೇಳಿಕೆ ನೀಡಿದೆ. ಇನ್ನು ಬಾಂಬ್ ಸ್ಫೋಟದಲ್ಲಿ ಈ ವರೆಗೂ ಸುಮಾರು 128 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. 
ಉಗ್ರ ದಾಳಿ ನಡೆದ ಪರಿಣಾಮ ಮಸ್ತುಂಗ್ ಪ್ರದೇಶದಲ್ಲಿ ಚುನಾವಣೆಯ ಮತದಾನ ಪ್ರಕ್ರಿಯಯನ್ನು ಮುಂದೂಡಲವಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಇದೀಗ ಘಟನಾ ಸ್ಥಳಕ್ಕೆ ಪಾಕಿಸ್ತಾನ ಅಧಿಕಾರಿಗಳು ತೆರಳಿದ್ದು, ಸ್ಫೋಟಕ್ಕೆ ಸುಮಾರು 8 ರಿಂದ 10 ಕೆಜಿಯಷ್ಟು ಸ್ಫೋಟಕ ಸಾಮಗ್ರಿ ಮತ್ತು ಬಾಲ್ ಬೇರಿಂಗ್ಸ್ ಗಳನ್ನು ಬಳಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com