ಪಾಕ್ ಚುನಾವಣೆಗೂ ಮುನ್ನ ಹಫೀಜ್ ಸಯೀದ್ ರಾಜಕೀಯ ಪಕ್ಷದ ಫೇಸ್ ಬುಕ್ ಖಾತೆ ನಿಷ್ಕ್ರಿಯ!

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಪಾಕಿಸ್ತಾನದ ಉಗ್ರ ಹಫೀಜ್ ಸಯೀದ್ ನೇತೃತ್ವದ ರಾಜಕೀಯ ಪಕ್ಷದ ಫೇಸ್ ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ.
ಪಾಕ್ ಚುನಾವಣೆಗೂ ಮುನ್ನ ಹಫೀಜ್ ಸಯೀದ್ ರಾಜಕೀಯ ಪಕ್ಷದ ಫೇಸ್ ಬುಕ್ ಖಾತೆ ನಿಷ್ಕ್ರಿಯ!
ಪಾಕ್ ಚುನಾವಣೆಗೂ ಮುನ್ನ ಹಫೀಜ್ ಸಯೀದ್ ರಾಜಕೀಯ ಪಕ್ಷದ ಫೇಸ್ ಬುಕ್ ಖಾತೆ ನಿಷ್ಕ್ರಿಯ!
ಲಾಹೋರ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಪಾಕಿಸ್ತಾನದ ಉಗ್ರ ಹಫೀಜ್ ಸಯೀದ್ ನೇತೃತ್ವದ ರಾಜಕೀಯ ಪಕ್ಷದ ಫೇಸ್ ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. 
ಇಸ್ಲಾಮಿಸ್ಟ್ ಮಿಲ್ಲಿ ಮುಸ್ಲಿಂ ಲೀಗ್(ಎಂಎಂಎಲ್) ಪಕ್ಷಕ್ಕೆ ಸೇರಿದ ಫೇಸ್ ಬುಕ್ ನ ಹಲವು ಪೇಜ್ ಹಾಗೂ ಖಾತೆಗಳನ್ನು ಫೇಸ್ ಬುಕ್ ನಿಷ್ಕ್ರಿಯಗೊಳಿಸಿದೆ ಎಂದು ಅಲ್ಲಿನ ಪತ್ರಿಕೆಗಳ ವರದಿ ಮೂಲಕ ತಿಳಿದುಬಂದಿದೆ. 
ಸಕಾರಾತ್ಮಕ ಚರ್ಚೆಗಳನ್ನು ಉತ್ತೇಜಿಸುವುದು ತಮ್ಮ ಸಮಾಜಿಕ ಜಾಲತಾಣದ ಆದ್ಯತೆಯಾಗಿದೆ. ಯಾವುದೇ ಸಮಾಜಘಾತುಕ ಸಂಘಟನೆಗಳು ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡದೇ ಇರುವಂತೆ ಎಚ್ಚರಿಕೆ ವಹಿಸುವುದು ತಮ್ಮ ಉದ್ದೇಶವಾಗಿದೆ ಎಂದು ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಹೇಳಿದ್ದರು. 
ಇತ್ತೀಚೆಗಷ್ಟೇ ಪಾಕಿಸ್ತಾನ ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದ ಫೇಸ್ ಬುಕ್, ಜು.25 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ವಿವಿಧ ರಾಜಕೀಯ ಪಕ್ಷಗಳ ನಕಲಿ ಖಾತೆಗಳನ್ನು ತೆಗೆದುಹಾಕಲು ಸ್ಥಳೀಯ ಸಂಸ್ಥೆಗಳಿಗೆ ನೆರವು ನೀಡುವುದಾಗಿ ಹೇಳಿದ್ದಾರೆ. 
ಚುನಾವಣಾ ಆಯೋಗ ಎಂಎಂಎಲ್ ನ್ನು ರಾಜಕೀಯ ಪಕ್ಷವನ್ನಾಗಿ ಪರಿಗಣಿಸಿಲ್ಲ, ಇಷ್ಟೇ ಅಲ್ಲದೇ , ಅಮೆರಿಕ ಸಹ ಎಂಎಂಎಲ್ ನ್ನು ಉಗ್ರ ಸಂಘಟನೆಗಳ ಪಟ್ಟಿಗೆ ಸೇರಿಸಲು ತೀರ್ಮಾನಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com