ಜಲಾಂತರ್ಗಾಮಿ ನೌಕೆ
ಜಲಾಂತರ್ಗಾಮಿ ನೌಕೆ

ಚೀನಾ ನರಿಬುದ್ಧಿ: ಭಾರತಕ್ಕೆ ಸೆಡ್ಡು ಹೊಡೆಯಲು ಪಾಕ್‌ಗೆ ಚೀನಾದ 8 ಜಲಾಂತರ್ಗಾಮಿ ನೌಕೆ!

ಪಾಕಿಸ್ತಾನದ ಪರಮಾಪ್ತನಾಗಿರುವ ಚೀನಾ ಭಾರತೀಯ ನೌಕಾ ಪಡೆಗೆ ಸೆಡ್ಡು ಹೊಡೆಯಲು ಪಾಕಿಸ್ತಾನಕ್ಕೆ ನೆರವಾಗುವ ಉದ್ದೇಶದೊಂದಿಗೆ ಎಂಟು..
ಇಸ್ಲಾಮಾಬಾದ್/ಬೀಜಿಂಗ್: ಪಾಕಿಸ್ತಾನದ ಪರಮಾಪ್ತನಾಗಿರುವ ಚೀನಾ ಭಾರತೀಯ ನೌಕಾ ಪಡೆಗೆ ಸೆಡ್ಡು ಹೊಡೆಯಲು ಪಾಕಿಸ್ತಾನಕ್ಕೆ ನೆರವಾಗುವ ಉದ್ದೇಶದೊಂದಿಗೆ ಎಂಟು ಜಲಾಂತರ್ಗಾಮಿಗಳನ್ನು ನಿರ್ಮಿಸುತ್ತಿದೆ. 
ಭಾರತದ ಬಳಿ 16 ಜಲಾಂತರ್ಗಾಮಿ ನೌಕೆಗಳಿದ್ದು ಪಾಕಿಸ್ತಾನದ ಬಳಿ 10 ಇವೆ. ಇನ್ನು ಚೀನಾ ನಿರ್ಮಿತ 8 ಜಲಾಂತರ್ಗಾಮಿ ನೌಕೆಗಳು ಪಾಕಿಸ್ತಾನ ಕೈ ಸೇರಿದರೆ ಆಗ ಅದರ ನೌಕಾ ಬಲ ಹೆಚ್ಚಾಗಲಿದ್ದು ಇದರಿಂದ ಜಲಾಂತರ್ಗತ ಸಮರದಲ್ಲಿ ಪಾಕಿಸ್ತಾನಕ್ಕೆ ಭಾರತೀಯ ನೌಕಾ ಪಡೆಯನ್ನು ಎದುರಿಸುವುದು ಸುಲಭವಾಗುತ್ತದೆ ಎಂದು ಚೀನಾ ಲೆಕ್ಕಾಚಾರ. 
ಪಾಕಿಸ್ತಾಕ್ಕಾಗಿ ಚೀನಾ ಈಗಾಗಲೇ ಎರಡು ರಿಮೋಟ್ ಸೆನ್ಸಿಂಗ್ ಸೆಟಲೈಟ್ ಗಳನ್ನು ಯಶಸ್ವಿಯಾಗಿ ಚಾಲನೆಗೊಳಿಸಿದೆ. ಇದರಿಂದ ಪಾಕಿಸ್ತಾನಕ್ಕೆ 50 ಬಿಲಿಯನ್ ಡಾಲರ್ ವೆಚ್ಚದಲ್ಲಿ ಮೈದಳೆಯುತ್ತಿರುವ ಪಾಕಿಸ್ತಾನ್ ಇಕಾನಮಿಕ್ ಕಾರಿಡಾರ್ ಯೋಜನೆಯ ಪ್ರಗತಿಯ ಮೇಲೆ ವಿಚಕ್ಷಣೆ ನೆಡಸುವುದು ಸಾಧ್ಯವಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com