292 ಮೊಸಳೆಗಳ ಮಾರಣಹೋಮ; ವ್ಯಕ್ತಿ ಕೊಂದಿದ್ದಕ್ಕೆ ಸೇಡು ತೀರಿಸಿಕೊಂಡ ಜನತೆ

ವ್ಯಕ್ತಿಯೊಬ್ಬನನ್ನು ದಾರುಣವಾಗಿ ಕೊಂದು ಹಾಕಿದ್ದ ಮೊಸಳೆಗಳ ವಿರುದ್ಧ ತಿರುಗಿಬಿದ್ದ ಗ್ರಾಮವೊಂದು 292 ಮೊಸಳೆಗಳನ್ನು ಹತ್ಯೆ ಮಾಡಿರುವ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ...
292 ಮೊಸಳೆಗಳ ಮಾರಣಹೋಮ; ವ್ಯಕ್ತಿ ಕೊಂದಿದ್ದಕ್ಕೆ ಸೇಡು ತೀರಿಸಿಕೊಂಡ ಜನತೆ
292 ಮೊಸಳೆಗಳ ಮಾರಣಹೋಮ; ವ್ಯಕ್ತಿ ಕೊಂದಿದ್ದಕ್ಕೆ ಸೇಡು ತೀರಿಸಿಕೊಂಡ ಜನತೆ
Updated on
ಜಕಾರ್ತಾ: ವ್ಯಕ್ತಿಯೊಬ್ಬನನ್ನು ದಾರುಣವಾಗಿ ಕೊಂದು ಹಾಕಿದ್ದ ಮೊಸಳೆಗಳ ವಿರುದ್ಧ ತಿರುಗಿಬಿದ್ದ ಗ್ರಾಮವೊಂದು 292 ಮೊಸಳೆಗಳನ್ನು ಹತ್ಯೆ ಮಾಡಿರುವ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ. 
ವೆಸ್ಟ್ ಪೌವಾ ಪ್ರಾಂತ್ಯದ ಸೋರಾಂಗ್ ಜಿಲ್ಲೆಯಲ್ಲಿ ಮೊಸಳೆಗಳ ಫಾರ್ಮ್ ವೊಂದರಲ್ಲಿ ನೂರಾರು ಮೊಸಳೆಗಳನ್ನು ಸಾಕಲಾಗಿತ್ತು. ಪ್ರಾಣಿಗಳಿಗೆ ಮೇವುಗಳನ್ನು ನೀಡುವ ಸಲುವಾಗಿ ಫಾರ್ಮ್'ಗೆ ಹೋಗಿದ್ದ ವ್ಯಕ್ತಿಯ ಮೇಲೆ ಈ ಮೊಸಳೆಗಳು ದಾಳಿ ಮಾಡಿ, ದಾರುಣವಾಗಿ ಕೊಂದು ಹಾಕಿದ್ದವು. 
ವ್ಯಕ್ತಿಯೊಬ್ಬ ಸಹಾಯಕ್ಕಾಗಿ ಕಿರುಚಾಡುತ್ತಿದ್ದ ಶಬ್ಧ ಕೇಳಿಸಿತ್ತು. ಕೂಡಲೇ ಸ್ಥಳಕ್ಕೆ ಹೋದಾಗ ವ್ಯಕ್ತಿಯೊಬ್ಬರ ಮೇಲೆ ಮೊಸಳೆಗಳು ದಾಳಿ ಮಾಡಿದ್ದವು ಎಂದು ಸಿಬ್ಬಂದಿಯೊಬ್ಬ ಹೇಳಿದ್ದಾನೆ.
ಶನಿವಾರ ಈ ಘಟನೆ ನಡೆದಿತ್ತು, ಮತ್ತೆಂದೂ ಇಂತಹ ಘಟನೆಗಳು ಸಂಭವಿಸಬಾರದೆಂದು ಗ್ರಾಮಸ್ಥರು ಮೊಸಳೆಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು. 
ಮೊಸಳೆಗಳ ವಿರುದ್ದ ರೊಚ್ಚಿಗೆದ್ದಿದ್ದ ಗ್ರಾಮಸ್ಥರು ಸಣ್ಣದು, ದೊಡ್ಡಲು ಎಂಬುದನ್ನು ನೋಡದೆಯೇ ಆಯುಧಗಳಿಂದ 292 ಮೊಸಳೆಗಳನ್ನು ಕೊಂದು ಹಾಕಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜನರ ಸೇರಿದ್ದರಿಂದಾಗಿ ಮೊಸಳೆಗಳ ಮಾರಣಹೋಮ ತಡೆಗಟ್ಟಲು ಅಲ್ಲಿನ ಸಿಬ್ಬಂದಿಗಳಿಗೂ ಸಾಧ್ಯವಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com