ಪಾಕ್ ಚುನಾವಣೆ: ಪಿಎಂಎಲ್-ಎನ್ ಪರ ನವಾಜ್ ಷರೀಫ್ ಮೊಮ್ಮಗನಿಂದ ಪ್ರಚಾರ

ಪಾಕಿಸ್ತಾನದಲ್ಲಿ ಜುಲೈ 25ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆ ರಂಗೇರುತ್ತಿದ್ದು, ಭ್ರಷ್ಟಾಚಾರ....
ನವಾಜ್ ಷರೀಫ್ ಹಾಗೂ ಮೊಮ್ಮಗ
ನವಾಜ್ ಷರೀಫ್ ಹಾಗೂ ಮೊಮ್ಮಗ
Updated on: 
ಲಾಹೋರ್: ಪಾಕಿಸ್ತಾನದಲ್ಲಿ ಜುಲೈ 25ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆ ರಂಗೇರುತ್ತಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮೊಮ್ಮಗ ಜುನೈದ್ ಸಫ್ದಾರ್ ಅವರು ಪಿಎಂಎಲ್-ಎನ್ ಪ್ರಚಾರ ನಡೆಸಲಿದ್ದಾರೆ. ಇದರೊಂದಿಗೆ ಷರೀಫ್ ಕುಟುಂಬದ ಮೂರನೇ ತಲೆಮಾರಿನ ಕುಡಿಯೊಂದು ಸಕ್ರಿಯೆ ರಾಜಕೀಯ ಪ್ರವೇಶಿಸಿದೆ.
ಲಂಡನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರುವ ಜುನೈದ್ ಸಫ್ದಾರ್ ಅವರು ನಿನ್ನೆ ಪಾಕಿಸ್ತಾನಕ್ಕೆ ಆಗಮಿಸಿದ್ದು, ರಾವಲ್ಪಿಂಡಿಯ ಜೈಲಿನಲ್ಲಿರುವ ತಮ್ಮ ತಾತ ನವಾಜ್ ಷರೀಫ್, ತಾಯಿ ಮರ್ಯಮ್ ಮತ್ತು ತಂದೆ ಎಂ ಸಫ್ಧಾರ್ ಅವರನ್ನು ಭೇಟಿ ಮಾಡುವ ನಿರೀಕ್ಷೆ ಇದೆ.
ಜುನೈದ್ ಅವರು ಕೆಲವು ಕ್ಷೇತ್ರಗಳಲ್ಲಿ ಪಕ್ಷದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಿಎಂಎಲ್ ಎನ್ ಹಿರಿಯ ನಾಯಕರೊಬ್ಬರು ಹೇಳಿರುವುದಾಗಿ ಡಾನ್ ವರದಿ ಮಾಡಿದೆ.
ಅಕ್ರಮವಾಗಿ ಸಂಪಾದಿಸಿದ ಹಣದಿಂದ ಲಂಡನ್ ನಲ್ಲಿ ನಾಲ್ಕು ಐಷಾರಾಮಿ ಫ್ಲಾಟ್ ಗಳನ್ನು ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಅಕೌಂಟಬಲಿಟಿ ಕೋರ್ಟ್ ಈ ಮೂವರಿಗೆ ಜೈಲು ಶಿಕ್ಷೆ ವಿಧಿಸಿದ್ದು, ಕಳೆದ ಜುಲೈ 13ರಂದು ಲಾಹೋರ್ ನಲ್ಲಿ ಬಂಧಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com