ಕೆಲಸಕ್ಕಾಗಿ 32 ಕಿ.ಮೀ ನಡೆದು ಹೋಗಿದ್ದ ಉದ್ಯೋಗಿಗೆ ಸಿಇಒ ಕೊಟ್ಟ ಗಿಫ್ಟ್ ಏನು ಗೊತ್ತಾ!

ಕೆಲಸ ಸಿಕ್ಕ ಖುಷಿಯಲ್ಲಿ ಉದ್ಯೋಗಿಯೊಬ್ಬ ಮೊದಲ ದಿನವೇ ಕೆಲಸಕ್ಕೆ ಗೈರಾಗಬಾರದು ಎಂಬ ಉದ್ದೇಶದಿಂದ ರಾತ್ರಿಯಿಡೀ ಸುಮಾರು 20 ಮೈಲಿ(32 ಕಿ.ಮೀ) ನಡೆದುಕೊಂಡು ಬಂದಿದ್ದ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಕೆಲಸ ಸಿಕ್ಕ ಖುಷಿಯಲ್ಲಿ ಉದ್ಯೋಗಿಯೊಬ್ಬ ಮೊದಲ ದಿನವೇ ಕೆಲಸಕ್ಕೆ ಗೈರಾಗಬಾರದು ಎಂಬ ಉದ್ದೇಶದಿಂದ ರಾತ್ರಿಯಿಡೀ ಸುಮಾರು 20 ಮೈಲಿ(32 ಕಿ.ಮೀ) ನಡೆದುಕೊಂಡು ಬಂದಿದ್ದ ಉದ್ಯೋಗಿಗೆ ಸಂಸ್ಥೆಯ ಸಿಇಒ ವಿಶೇಷ ಗಿಫ್ಟ್ ಒಂದನ್ನು ನೀಡಿದ್ದಾರೆ. 
ಉದ್ಯೋಗಿಯ ಉತ್ಸಾಹ ಹಾಗೂ ಶ್ರದ್ಧೆಯನ್ನು ಕಂಡು ಪ್ರಭಾವಿತರಾದ ಸಂಸ್ಥೆಯ ಯುವ ಸಿಇಒ ತನ್ನ ಸ್ವಂತ ಐಷಾರಾಮಿ ಕಾರನ್ನೇ ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಿಇಒ ನಡೆಯನ್ನು ನೇಟಿಗರು ಪ್ರಶಂಸಿಸಿದ್ದಾರೆ. 
ಅಲಬಾಮಾ ಕಾಲೇಜಿನ ವಿದ್ಯಾರ್ಥಿಯಾಗಿದ್ದ 20 ವರ್ಷದ ವಾಲ್ಟರ್ ಕಾರ್ರ್ ಬೆಲ್ ಹೋಫ್ಸ್ ಎಂಬ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಮನೆಯಿಂದ ಕಚೇರಿಗೆ 20 ಮೈಲಿ ದೂರವಿತ್ತು. ಮೊದಲ ದಿನವೇ ಕೆಲಸಕ್ಕೆ ಲೇಟಾಗಿ ಹೋಗಬಾರದು ಎಂದು ವಾಲ್ಟರ್ ಕಳೆದ ಶುಕ್ರವಾರ ನಡುರಾತ್ರಿ 11.40ಕ್ಕೆ ಮನೆ ಬಿಟ್ಟು ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದ. 
ಶನಿವಾರ ಬೆಳಗ್ಗೆ ರಸ್ತೆ ಬದಿ ನಡೆದು ಹೋಗುತ್ತಿದ್ದ ಹುಡುಗನನ್ನು ಪೊಲೀಸರು ವಿಚಾರಿಸಿ ಆತನಿಗೆ ಉಪಾಹಾರ ನೀಡಿ ಕಚೇರಿಗೆ ಮುಟ್ಟಿಸಿದ್ದರು. ಕಚೇರಿಗೆ ತಲುಪಿದ ನಂತರ ಈತನ ಕಥೆ ಕೇಳಿದ ಅಧಿಕಾರಿಗಳು ಅಚ್ಚರಿಪಟ್ಟಿದ್ದರು. ಹಾಗೂ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಆದರೆ ಇದಕ್ಕೆ ಒಪ್ಪದ ವಾಲ್ಟರ್ ಕರ್ತವ್ಯಕ್ಕೆ ಹಾಜರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com