ಪಾಕ್ ಚುನಾವಣೆ: ಮುಕ್ತ ನ್ಯಾಯಸಮ್ಮತ ಚುನಾವಣೆಗೆ ಅಡ್ಡಿ, ಫಲಿತಾಂಶ ತಿರಸ್ಕರಿಸುತ್ತೇವೆ - ಶಾಬಾಜ್ ಶರೀಫ್

ಪಾಕಿಸ್ತಾನದಲ್ಲಿ 272 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಮುನ್ನಡೆ ಸಾಧಿಸಿದ್ದರೆ, ರಿಗ್ಗಿಂಗ್ ನಡೆದಿದೆ ಎಂದು ಪಿಎಂಎಲ್-ಎನ್ ಪಕ್ಷ ಆರೋಪಿಸಿದೆ.
ಪಾಕ್ ಚುನಾವಣೆ: ಮುಕ್ತ ನ್ಯಾಯ ಸಮ್ಮತ ಚುನಾವಣೆಗೆ ಅಡ್ಡಿ, ಫಲಿತಾಂಶ ತಿರಸ್ಕರಿಸುತ್ತೇವೆ-ಶಾಬಾಜ್ ಶರೀಫ್
ಪಾಕ್ ಚುನಾವಣೆ: ಮುಕ್ತ ನ್ಯಾಯ ಸಮ್ಮತ ಚುನಾವಣೆಗೆ ಅಡ್ಡಿ, ಫಲಿತಾಂಶ ತಿರಸ್ಕರಿಸುತ್ತೇವೆ-ಶಾಬಾಜ್ ಶರೀಫ್
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ 272 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಮುನ್ನಡೆ ಸಾಧಿಸಿದ್ದರೆ, ರಿಗ್ಗಿಂಗ್ ನಡೆದಿದೆ ಎಂದು ಪಿಎಂಎಲ್-ಎನ್ ಪಕ್ಷ ಆರೋಪಿಸಿದೆ. 
ಮತ  ಎಣಿಕೆಯಲ್ಲಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಮುನ್ನಡೆ ಸಾಧಿಸುತ್ತಿದ್ದಂತೆಯೇ ಪಕ್ಷದ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಆಡಳಿತಾ ರೂಢಪಕ್ಷವಾಗಿದ್ದ ಪಿಎಂಎಲ್-ಎನ್ ತೀವ್ರ ಹಿನ್ನಡೆ ಎದುರಿಸುತ್ತಿದ್ದು, ರಿಗ್ಗಿಂಗ್ ನಡೆದಿದೆ ಎಂದು ಆರೋಪಿಸಿದೆ. ಅಷ್ಟೇ ಅಲ್ಲದೇ,  ತನ್ನ ಪಕ್ಷದ ಏಜೆಂಟ್ ಗಳನ್ನು ಮತದಾನ ಕೇಂದ್ರದಿಂದ ಹೊರಗಟ್ಟಲಾಗಿತ್ತು ಎಂದೂ ಆರೋಪಿಸಿದೆ.
ಆದರೆ ಚುನಾವಣಾ ಆಯೋಗ ಪಿಎಂಎಲ್-ಎನ್ ಆರೋಪವನ್ನು ತಳ್ಳಿಹಾಕಿದೆ.  ಇದೇ ವೇಳೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಶಾಬಾಜ್ ಶರೀಫ್ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಡ್ಡಿ ಉಂಟಾಗಿದೆ, ನಾವು ಈ ಫಲಿತಾಂಶವನ್ನು ತಿರಸ್ಕರಿಸುತ್ತೇವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com