ಜೋಹಾನ್ಸ್ ಬರ್ಗ್: 10ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ಭಾರತದಿಂದ 40 ಕ್ಕೂ ಹೆಚ್ಚು ರಾಷ್ಟ್ರಗಳಿಗೆ 11 ಬಿಲಿಯನ್ ಡಾಲರ್ ಮೊತ್ತದ ಸಾಲದ ನೆರವು ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರಮೋದಿ
ಪ್ರಧಾನಿ ನರೇಂದ್ರಮೋದಿ

ಜೋಹಾನ್ಸ್ ಬರ್ಗ್: 40 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭಾರತ 11 ಬಿಲಿಯನ್ ಡಾಲರ್ ಮೊತ್ತದ  ಸಾಲದ ನೆರವು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ  ಜೋಹಾನ್ಸ್ ಬರ್ಗ್ ನಲ್ಲಿ  ನಡೆಯುತ್ತಿರುವ 10 ನೇ  ಬ್ರಿಕ್ಸ್  ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಫ್ರಿಕಾದ ರಾಷ್ಟ್ರಗಳನ್ನು ಭಾರತ ಬೆಂಬಲಿಸಲಿದೆ. ಭಾರತದ ಖಾಸಗಿ ವಲಯಗಳು 54 ಬಿಲಿಯನ್ ಡಾಲರ್ ಮೊತ್ತದ ಹಣವನ್ನು ಹೂಡಿಕೆ ಮಾಡಿವೆ ಎಂದು ತಿಳಿಸಿದರು.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ಶಾಂತಿ ಹಾಗೂ ಅಭಿವೃದ್ಧಿಗೆ ಭಾರತ ಸರ್ಕಾರ ಆದ್ಯತೆ ನೀಡಿರುವುದಾಗಿ ಹೇಳಿದರು.
'ಆಫ್ರಿಕಾದಲ್ಲಿ ಬ್ರಿಕ್ಸ್ ಅಂತರ್ಗತ ಬೆಳವಣಿಗೆಗೆ ಸಹಕಾರ ಮತ್ತು 4 ನೇ ಕೈಗಾರಿಕಾ ಕ್ರಾಂತಿಯಲ್ಲಿ ಹಂಚಿಕೆಯ ಸಮೃದ್ಧಿ ಈ ಬಾರಿಯ ಬ್ರಿಕ್ಸ್ ಶೃಂಗಸಭೆಯ ಧ್ಯೇಯ ವಾಕ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com