ಇಮ್ರಾನ್ ಖಾನ್
ಇಮ್ರಾನ್ ಖಾನ್

ಪಾಕಿಸ್ತಾನ: ಹೊಸ ಸರ್ಕಾರ ರಚನೆ ಸಿದ್ಧತೆ ಆರಂಭಿಸಿದ ಇಮ್ರಾನ್ ಖಾನ್

ಇಮ್ರಾನ್ ಖಾನ್ ಹೊಸ ಸರ್ಕಾರ ರಚನೆ ಸಂಬಂಧ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಮಾತುಕತೆ ಆರಂಭಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಾಕಿಸ್ತಾನ ತೆಹ್ರರಿಕ್ ಇ- ಇನ್ಸಪ್  ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್  ಹೊಸ ಸರ್ಕಾರ ರಚನೆ  ಸಂಬಂಧ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಮಾತುಕತೆ ಆರಂಭಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ನ್ಯಾಷನಲ್ ಆಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ   267 ಸ್ಥಾನಗಳ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಪಿಐಟಿ ಪಕ್ಷ 115 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದೆ.

ಪಾಕಿಸ್ತಾನ ಸಂಸತ್ತಿನ ಕೆಳಮನೆಯಾಗಿರುವ ನ್ಯಾಷನಲ್ ಆಸೆಂಬ್ಲಿ  ಒಟ್ಟಾರೇ 342 ಸದಸ್ಯರನ್ನು ಹೊಂದಿದೆ. ಈ ಪೈಕಿ 272 ಮಂದಿ ನೇರವಾಗಿ ಜನರಿಂದ ಆಯ್ಕೆಯಾಗುತ್ತಾರೆ. 172 ಸ್ಥಾನಗಳನ್ನು ಪಡೆದ ಪಕ್ಷ ಸ್ವತಂತ್ರವಾಗಿ  ಸರ್ಕಾರ ರಚಿಸಲು ಅವಕಾಶ ಇರುತ್ತದೆ.

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಪ್  ಅವರ ಪಾಕಿಸ್ತಾನ್ ಮುಸ್ಲಿ ಲೀಗ್  64 ಹಾಗೂ ಮಾಜಿ ಅಧ್ಯಕ್ಷ ಆಸಿಪ್ ಆಲಿ ಜರ್ದಾರಿ ಅವರ ಪಾಕಿಸ್ತಾನ್ ಫೀಪಲ್ಸ್ ಪಾರ್ಟಿ 43  ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸ್ವತಂತ್ರ ಅಭ್ಯರ್ಥಿಗಳು 13  ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಪಂಜಾಬ್ ನಲ್ಲಿ ಪಿಎಂಎಲ್ -ಎನ್ ಪಕ್ಷ ಕೂಡಾ ಸರ್ಕಾರ ರಚಿಸುವ  ರೇಸ್ ನಲ್ಲಿದ್ದು,  ಇಮ್ರಾನ್ ಖಾನ್  ಮೈತ್ರಿ ಸಂಪುಟ ಹಾಗೂ ಸರ್ಕಾರ ರಚನೆ ಸಂಬಂಧ ಆ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಇಮ್ರಾನ್ ಖಾನ್ ಆಪ್ತ ಜಹಂಗೀರ್ ಖಾನ್  ತಾರಿನ್  ಸ್ವತಂತ್ರ್ಯ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಪಾಕಿಸ್ತಾನದ ಮುಖಂಡ ಖಲೀದ್ ಮುಕ್ಬುಲ್  ಸಿದ್ದಿಕಿ ಅವರೊಂದಿಗೆ  ಮಾತುಕತೆ ನಡೆಸಿದ್ದಾರೆ .

Related Stories

No stories found.

Advertisement

X
Kannada Prabha
www.kannadaprabha.com