ಅಮೆರಿಕದ ಡೆಮಾಕ್ರೆಟಿಕ್ ಪಕ್ಷಕ್ಕೆ ಭಾರತೀಯ ಮೂಲದ ಸೀಮಾ ನಂದಾ ಸಾರಥ್ಯ!

ಭಾರತೀಯ-ಅಮೆರಿಕನ್ ಸೀಮಾ ನಂದಾ ಅಮೆರಿಕದ ವಿರೋಧ ಪಕ್ಷ ಡೆಮಾಕ್ರೆಟಿಕ್ ಪಕ್ಷದ ಸಿಇಒ ಆಗಿ ನೇಮಕಗೊಂಡಿದ್ದು, ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಸೀಮ ನಂದಾ
ಸೀಮ ನಂದಾ
ನ್ಯೂಯಾರ್ಕ್: ಭಾರತೀಯ-ಅಮೆರಿಕನ್ ಸೀಮಾ ನಂದಾ ಅಮೆರಿಕದ ವಿರೋಧ ಪಕ್ಷ ಡೆಮಾಕ್ರೆಟಿಕ್ ಪಕ್ಷದ ಸಿಇಒ ಆಗಿ ನೇಮಕಗೊಂಡಿದ್ದು, ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. 
ಡೆಮಾಕ್ರೆಟಿಕ್ ನ್ಯಾಷನಲ್ ಕಮಿಟಿ(ಡಿಎನ್ ಸಿ)ಯ ನೇತೃತ್ವ ವಹಿಸಿರುವ ಸೀಮಾ ನಂದಾ ಬಗ್ಗೆ ಪಕ್ಷದ ಹಿರಿಯ ನಾಯಕ ಟಾಮ್ ಪೆರೆಜ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಡಿಎನ್ ಸಿ ಗೆ ಸೀಮಾ ನಂದಾ ಪ್ರತಿಭೆ ಮತ್ತು ಬುದ್ಧಿವಂತಿಕೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. 
ಡೆಮಾಕ್ರೆಟಿಕ್ ನ್ಯಾಷನಲ್ ಕಮಿಟಿ (ಡಿಎನ್ ಸಿ) ಯ ಸಿಇಒ ಆಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ, ನಾವು ನಮ್ಮ ದೇಶದ ಆತ್ಮಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ, ನಮ್ಮ ಪ್ರಜಾಪ್ರಭುತ್ವಕ್ಕಾಗಿ, ಅವಕಾಶಕ್ಕಾಗಿ ಹೋರಾಟ ಮಾಡುತ್ತಿದ್ದೇವೆ, ಎಲ್ಲರನ್ನೂ ಒಳಗೊಂಡ ಸಕಾರಾತ್ಮಕತೆಯಿಂದಾಗಿ ನಮ್ಮ ಪಕ್ಷ ಅತ್ಯಂತ ಬಲಿಷ್ಠವಾಗಿದೆ. ಇತ್ತೀಚಿನ ದಶಕಗಳಲ್ಲಿ ಡಿಎನ್ ಸಿ ಯ ನೇತೃತ್ವ ವಹಿಸಿಕೊಳ್ಳುತ್ತಿರುವ ಮೊದಲ ಏಷ್ಯನ್-ಅಮೆರಿಕನ್ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸೀಮಾ ನಂದಾ ಹೇಳಿದ್ದಾರೆ.
ಅಮೆರಿಕದ ನ್ಯೂ ಇಂಗ್ಲೆಂಡ್ ಪ್ರದೇಶದಲ್ಲಿರುವ ಕನೆಕ್ಟಿಕಟ್ ರಾಜ್ಯದಲ್ಲಿ ಬೆಳೆದಿರುವ ಸೀಮಾ ನಂದಾ ಪೋಷಕರು ದಂತ ವೈದ್ಯರು. ಬ್ರೌನ್ ವಿಶ್ವವಿದ್ಯಾಲಯದಲ್ಲಿ ಹಾಗೂ ಬಾಸ್ಟಾನ್ ಕಾಲೇಜ್ ಲಾ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಸೀಮಾ ನಂದಾ, ಅಲ್ಲಿನ ಮಸಾಚುಸೆಟ್ಸ್ ಬಾರ್ ಅಸೋಸಿಯೇಷನ್ ನ ಸದಸ್ಯರೂ ಆಗಿದ್ದರು. ನಾಗರಿಕ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಲೀಡರ್ಶಿಪ್ ಕಾನ್ಫರೆನ್ಸ್ ನಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಸಿಒಒ ಆಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com