ಡೊನಾಲ್ಡ್ ಟ್ರಂಪ್- ಕಿಮ್
ವಿದೇಶ
ಜೂನ್ 12 ರಂದು ಡೊನಾಲ್ಡ್ ಟ್ರಂಪ್ - ಕಿಮ್ ಶೃಂಗಸಭೆ
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ನಡುವಿನ ಮಾತುಕತೆಗೆ ವೇದಿಕೆ ಸಿದ್ದವಾಗಿದೆ. ಮುಂದಿನ ಮಂಗಳವಾರ ಸಿಂಗಾಪುರದಲ್ಲಿ ಉಭಯ ನಾಯಕರ ನಡುವಿನ ಮಹತ್ವದ ಮಾತುಕತೆ ನಡೆಯಲಿದೆ ಎಂದು ವೈಟ್ ಹೌಸ್ ಹೇಳಿದೆ.
ನ್ಯೂಯಾರ್ಕ್ : ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ನಡುವಿನ ಮಾತುಕತೆಗೆ ವೇದಿಕೆ ಸಿದ್ದವಾಗಿದೆ. ಮುಂದಿನ ಮಂಗಳವಾರ ಸಿಂಗಾಪುರದಲ್ಲಿ ಉಭಯ ನಾಯಕರ ನಡುವಿನ ಮಹತ್ವದ ಮಾತುಕತೆ ನಡೆಯಲಿದೆ ಎಂದು ವೈಟ್ ಹೌಸ್ ಹೇಳಿದೆ.
ಉಭಯ ನಾಯಕರು ಅಂದು ಬೆಳಗ್ಗೆ 9 ಗಂಟೆಗೆ ಭೇಟಿಯಾಗಲಿದ್ದಾರೆ. ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯಿಂದ ಡೊನಾಲ್ಡ್ ದಿನನಿತ್ಯದ ವಿವರ ಪಡೆಯಲಿದ್ದಾರೆ ಎಂದು ವೈಟ್ ಹೌಸ್ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ತಿಳಿಸಿದ್ದಾರೆ.
ಸಿಂಗಾಪುರದಲ್ಲಿ ಆಯೋಜಿಸಿರುವ ಮಾತುಕತೆಗೆ ಒಂದು ವಾರವಷ್ಟೇ ಬಾಕಿ ಇದ್ದು, ಕೆಲವೇ ಕೆಲವು ಮಾಹಿತಿಗಳನಷ್ಟೇ ಬಹಿರಂಗಪಡಿಸಲಾಗಿದೆ. ಆದರೆ, ಉಭಯ ರಾಷ್ಟ್ರಗಳ ನಾಯಕರು ಎಲ್ಲಿ ಸಭೆ ನಡೆಸಲಿದ್ದಾರೆ ಎಂಬುದು ಇನ್ನೂ ಸ್ಪಷ್ಪವಾಗಿಲ್ಲ.
ಆದರೆ, ಪರಮಾಣುಗಳನ್ನು ಬಿಟ್ಟುಕೊಡದ ಹೊರತು ಉತ್ತರ ಕೊರಿಯಾ ವಿರುದ್ಧದ ನಿರ್ಬಂಧವನ್ನು ತೆಗೆದುಹಾಕುವುದಿಲ್ಲ ಎಂದು ವಾಷಿಂಗ್ ಟನ್ ಸ್ಪಷ್ಪಪಡಿಸಿದೆ.
ಈ ಸಭೆಯ ಹಿನ್ನೆಲೆಯಲ್ಲಿ ಕಳೆದ ವಾರ ಉತ್ತರ ಕೊರಿಯಾದ ಉನ್ನತ ಅಧಿಕಾರಿಗಳೊಂದಿಗೆ ಕಳೆದ ವಾರ ಟ್ರಂಪ್ ಮಾತುಕತೆ ನಡೆಸಿದ್ದಾರೆ. ಕಿಮ್ ಅವರ ಹಿರಿಯ ಅಧಿಕಾರಿ ಕಿಮ್ ಯಾಂಗ್ ಚೊಲ್ ಪತ್ರವೊಂದನ್ನು ಟ್ರಂಪ್ ಅವರಿಗೆ ನೀಡಿದ್ದಾರೆ.
ಆದರೆ, ಆ ಪತ್ರದ ಬಗ್ಗೆ ಏನನ್ನೂ ಹೇಳುವುದಿಲ್ಲ. ಆದ್ದರಿಂದಾಗಿ ಅಧ್ಯಕ್ಷರ ನಡುವಿನ ಮಾತುಕತೆಗೆ ವೇದಿಕೆ ಸಿದ್ದಪಡಿಸಲಾಗುತ್ತಿದೆ, ಜೂ.12ರಂದು ಸಿಂಗಾಪುರದಲ್ಲಿ ಸೇರಲಿದ್ದು, ಪರಿಮಾಣು ನಾಶವೇ ಈ ಶೃಂಗಸಭೆಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ