ಕಿಮ್ ಜೊತೆಗಿನ ಶೃಂಗಸಭೆಯ ಪೂರ್ವಸಿದ್ಧತೆ ಸುಗಮ - ಡೊನಾಲ್ಡ್ ಟ್ರಂಪ್

ಜೂನ್ 12 ರಂದು ಸಿಂಗಾಪುರದಲ್ಲಿ ನಿಗದಿಯಾಗಿರುವ ಉತ್ತರ ಕೊರಿಯಾ ಮುಖಂಡ ಕಿಮ್ ಜಂಗ್ ಉನ್ ಜೊತೆಗಿನ ಶೃಂಗಸಭೆಯ ಪೂರ್ವಸಿದ್ಧತೆ ಸುಗಮವಾಗಿ ನಡೆಯುತ್ತಿರುವುದಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್, ಕಿಮ್
ಡೊನಾಲ್ಡ್ ಟ್ರಂಪ್, ಕಿಮ್
ನ್ಯೂಯಾರ್ಕ್:  ಜೂನ್ 12 ರಂದು ಸಿಂಗಾಪುರದಲ್ಲಿ ನಿಗದಿಯಾಗಿರುವ ಉತ್ತರ ಕೊರಿಯಾ ಮುಖಂಡ ಕಿಮ್ ಜಂಗ್ ಉನ್ ಜೊತೆಗಿನ ಶೃಂಗಸಭೆಯ  ಪೂರ್ವಸಿದ್ಧತೆ ಸುಗಮವಾಗಿ ನಡೆಯುತ್ತಿರುವುದಾಗಿ   ಅಮೆರಿಕಾದ ಅಧ್ಯಕ್ಷ ಡೊನಾಲ್ಡ್  ಟ್ರಂಪ್  ಹೇಳಿದ್ದಾರೆ.
ಸಿಂಗಾಪುರದ  ಸೆಂಟೊಸಾ ದ್ವೀಪದಲ್ಲಿನ  ರೆಸಾರ್ಟ್  ನಲ್ಲಿ ಬರುವ ಮಂಗಳವಾರ ಐತಿಹಾಸಿಕ ಶೃಂಗಸಭೆಯ ವೇದಿಕೆ ಸಿದ್ಧತಾ ಕಾರ್ಯ ನಡೆದಿರುವ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್  ಈ ಹೇಳಿಕೆ ನೀಡಿದ್ದಾರೆ.  ವಿಶ್ವದಾದ್ಯಂತ 2, 500 ಪತ್ರಕರ್ತರು  ಈ ಮಹತ್ವದ  ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪರಮಾಣು ನಾಶ ಕುರಿತಂತೆ  ಉತ್ತರ ಕೊರಿಯಾದೊಂದಿಗಿನ ವಿವಾದದಿಂದಾಗಿ ಕಳೆದು ತಿಂಗಳ ಡೊನಾಲ್ಡ್ ಟ್ರಂಪ್    ಮಾತುಕತೆಗೆ ಕರೆದು ನಂತರ ರದ್ದುಪಡಿಸುವುದಾಗಿ ಹೇಳಿಕೆ ನೀಡಿದ್ದರು. ಇದರಿಂದಾಗಿ ಈ  ಶೃಂಗಸಭೆಯ ಮೇಲೆ ಅನಿಶ್ಚಿತತೆಯ ಕಾರ್ಮೋಡ ಆವರಿಸಿತ್ತು.
ಉತ್ತರ ಕೊರಿಯಾದೊಂದಿಗಿನ  ಶೃಂಗಸಭೆ ಫಲಾಪ್ರಧವಾಗಲಿದೆ ಎಂಬ ನಿರೀಕ್ಷೆಯಿದೆ.  ಭೇಟಿಗೂ ಮುನ್ನ ಹಲವು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಉತ್ತಮ ಸಂಬಂಧ ಮೂಡುವ ಸಾಧ್ಯತೆ ಇದೆ. ಎಲ್ಲವೂ ಸುಗಮ ರೀತಿಯಲ್ಲಿ ಸಾಗಲಿ ಎಂಬುದನ್ನು ಎದುರು ನೋಡುತ್ತಿರುವುದಾಗಿ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ನಲ್ಲಿಂದು  ಹೇಳಿದ್ದಾರೆ.
ಸಿಂಗಾಪುರದಲ್ಲಿ ಶೃಂಗಸಭೆ ಹಿನ್ನೆಲೆಯಲ್ಲಿ  ಉತ್ತರ ಕೊರಿಯಾ ಹಾಗೂ ಅಮೆರಿಕಾದ  ಸಿಬ್ಬಂದಿಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದೆ.   ಉತ್ತರ ಕೊರಿಯಾದೊಂದಿಗಿನ ಭೇಟಿ ನಂತರ ಜಪಾನ್ ಪ್ರಧಾನಿ ಶಿಂಜೊ ಅಬೆ  ವೈಟ್  ಹೌಸ್ ನಲ್ಲಿ  ಟ್ರಂಪ್ ಜೊತೆಗೆ ಮಾತುಕತೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com