ನರೇಂದ್ರ ಮೋದಿ ಜೊತೆಗೆ ಎಸ್ ಸಿ ಓ ಪ್ರಧಾನ ಕಾರ್ಯದರ್ಶಿ ಮಾತುಕತೆ: ಭಾರತದ ಕೊಡುಗೆ ಶ್ಲಾಘನೆ
ಸ್ಯಾನ್ ಡಾಂಗ್ : ಶಾಂಘೈ ಸಹಕಾರ ಸಂಘಟನೆಯ 18 ನೇ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಚೀನಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎಸ್ ಸಿ ಓ ಪ್ರಧಾನ ಕಾರ್ಯದರ್ಶಿ ರಷೀದ್ ಅಲಿಮೊವ್ ಮಾತುಕತೆ ನಡೆಸಿದ್ದು, ಸಂಘಟನೆಗೆ ಸಂಬಂಧಿಸಿದಂತೆ ಭಾರತದ ಕಾರ್ಯಚಟುವಟಿಕೆ ಹಾಗೂ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರಾವಳಿ ತೀರ ಪ್ರದೇಶ ಚೀನಾದ ಸ್ಯಾನ್ ಡಾಂಗ್ ನಲ್ಲಿ ಪ್ರಧಾನಿ ನರೇಂದ್ರಮೋದಿ ಆಗಮಿಸಿದ ನಂತರ ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ಮಾತುಕತೆ ನಡೆಸಿದ ರಷೀದ್ ಅಲಿಮೊವ್, 2017ರಲ್ಲಿ ಭಾರತ ಎಸ್ ಸಿ ಓದ ಪೂರ್ಣ ಸದಸ್ಯತ್ವ ಪಡೆದ ನಂತರ ಸಾಕಷ್ಟು ಕೊಡುಗೆ ನೀಡಿರುವುದಾಗಿ ತಿಳಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಮೋದಿ ಜೊತೆಗಿನ ಸಭೆಯಲ್ಲಿ ಜೂನ್. 16 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಬೀಜಿಂಗ್ ನಲ್ಲಿರುವ ಎಸ್ ಸಿಓದ ಪ್ರಧಾನ ಕಚೇರಿಯಲ್ಲಿ ಆಚರಿಸಲು ಆಲಿಮೊವ್ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಭಾರತದ ಪ್ರಧಾನಮಂತ್ರಿ ಎಸ್ ಸಿ ಓ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. 8 ರಾಷ್ಟ್ರಗಳು ಇದರ ಸದಸ್ಯ ರಾಷ್ಟ್ರಗಳಾಗಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ