ರಿಯಾಯಿತಿ ದರದಲ್ಲಿ ಇಂಧನ ಪೂರೈಕೆಗೆ 'ಒಪೆಕ್ ಸಭೆ 'ಯಲ್ಲಿ ಒತ್ತಾಯ- ಧರ್ಮೇಂದ್ರ ಪ್ರಧಾನ್

ರಿಯಾಯಿತಿ ದರದಲ್ಲಿ ಇಂಧನ ಪೂರೈಸುವಂತೆ ಪೆಟ್ರೋಲಿಯಂ ರಪ್ತು ರಾಷ್ಟ್ರಗಳ ಒಕ್ಕೂಟ- ಒಪೆಕ್ಸ್ ಸಭೆಯಲ್ಲಿ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್

ವಿಯನ್ನಾ: ರಿಯಾಯಿತಿ ದರದಲ್ಲಿ ಇಂಧನ  ಪೂರೈಸುವಂತೆ  ಪೆಟ್ರೋಲಿಯಂ ರಪ್ತು ರಾಷ್ಟ್ರಗಳ ಒಕ್ಕೂಟ- ಒಪೆಕ್ಸ್ ಸಭೆಯಲ್ಲಿ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಪೆಟ್ರೋಲಿಯಂ ಖಾತೆ  ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಸಿಗಬೇಕೆಂದು ನಾವು ಯಾವಾಗಲೂ ನಿರೀಕ್ಷಿಸುತ್ತೇವೆ. ಕಳೆದ ಹಲವು ವರ್ಷಗಳಿಂದ ಭಾರತ ಇದನ್ನು ಪ್ರಸ್ತಾಪಿಸುತ್ತಲೇ ಬಂದಿದೆ. ಮುಂದಿನ ಸಭೆಯಲ್ಲಿ ಅದನ್ನೇ ಪುನರಾವರ್ತಿಸುತ್ತೇವೆ. ನಾಲ್ಕು ವರ್ಷಗಳ ಹಿಂದೆ ಭಾರತದ ಮಾತನ್ನು ನಿರ್ಲಕ್ಷಿಸುತ್ತಿದ್ದರು. ಆದರೆ ಈಗ ಭಾರತ ಸ್ವಂತ ಧ್ವನಿ ಹೊಂದಿದೆ ಎಂದರು.

ಭಾರತದ ಅಗತ್ಯಕ್ಕೆ ತಕ್ಕಂತೆ  ದುಬಾರಿಯಲ್ಲದ ರಿಯಾಯಿತ ದರದಲ್ಲಿ  ಒಪೆಕ್ ರಾಷ್ಟ್ರಗಳು ಇಂಧನ ಪೂರೈಸುವಂತೆ ಪ್ರಧಾನ್ ಆಗ್ರಹಿಸಿದರು.

 ಒಪೆಕ್ ರಾಷ್ಟ್ರಗಳ ಸಭೆಯ ಮಹತ್ವ ಕುರಿತಂತೆ ವಿವರಿಸಿದ ಪ್ರಧಾನ್, ಇಂಧನ ಭದ್ರತೆ ಯುಗದಲ್ಲಿ ಈ ಸಭೆ ಮಹತ್ವದ್ದಾಗಿದೆ.  ಇಂಧನ ಪೂರೈಕೆ ಜಾಲದಲ್ಲಿ ಅಡ್ಡಿಯುಂಟು ಮಾಡದ ಬಗ್ಗೆ ಭರವಸೆ ಹಿನ್ನೆಲೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.

ವಿಯನ್ನಾದಲ್ಲಿ ನಡೆಯಲಿರುವ ಒಪೆಕ್ ರಾಷ್ಟ್ರಗಳ ಸಭೆಯಲ್ಲಿ ಭಾರತ ಕೂಡಾ ಪಾಲ್ಗೊಳ್ಳಲಿದ್ದು, ನಮ್ಮ  ರಾಷ್ಟ್ರದ ಸಲಹೆಗಳನ್ನು ಮಂಡಿಸಲಾಗುವುದು,  ತೈಲ ಉತ್ಪನ್ನ ರಾಷ್ಟ್ರಗಳ ಬೆಲೆ ಇಳಿಕೆ ಎದುರು ನೋಡಲಾಗುತ್ತಿಗೆ, ತೈಲ ಬೆಲೆ ಗಳು ಸಾಮಾನ್ಯರಿಗೂ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com