ನಜ್ರಿನ್ ಹಸನ್
ವಿದೇಶ
ಮೊಬೈಲ್ ಚಾರ್ಜ್ ಹಾಕುವಾಗ ಎಚ್ಚರ: ಮೊಬೈಲ್ ಫೋನ್ ಸ್ಫೋಟದಿಂದ ಕ್ರಾಡಲ್ ಫಂಡ್ ಸಿಇಒ ದುರ್ಮರಣ!
ಮಲೇಷ್ಯಾ ಮೂಲದ ಕ್ರಾಡಲ್ ಫಂಡ್ ಸಂಸ್ಥೆ ಸಿಇಒ ನಜ್ರಿನ್ ಹಸನ್ ಸಾವಿಗೆ ಚಾರ್ಜ್ ಹಾಕಿದ್ದ ಮೊಬೈಲ್ ಫೋನ್ ಸ್ಫೋಟವೇ ಕಾರಣ ಎಂದು ತನಿಖೆಯಲ್ಲಿ ತಿಳಿದುಬಂದಿದೆ...
ಮಲೇಷ್ಯಾ: ಮಲೇಷ್ಯಾ ಮೂಲದ ಕ್ರಾಡಲ್ ಫಂಡ್ ಸಂಸ್ಥೆ ಸಿಇಒ ನಜ್ರಿನ್ ಹಸನ್ ಸಾವಿಗೆ ಚಾರ್ಜ್ ಹಾಕಿದ್ದ ಮೊಬೈಲ್ ಫೋನ್ ಸ್ಫೋಟವೇ ಕಾರಣ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ನರ್ಜಿನ್ ಹಸನ್ ಮಲಗಿದ್ದ ಮಂಚದ ಪಕ್ಕದಲ್ಲಿಯೇ ಎರಡು ಮೊಬೈಲ್ ಫೋನ್ ಗಳಿದ್ದು ಚಾರ್ಚ್ ಆಗಿದ್ದ ಮೊಬೈಲ್ ತಡರಾತ್ರಿ ಸ್ಫೋಟಗೊಂಡ ಪರಿಣಾಮ ಇಡೀ ಕೋಣೆಗೆ ಬೆಂಕಿ ಹರಡಿದೆ. ನಿದ್ರೆಯ ಮಂಪರಿನಲ್ಲಿದ್ದ ನಜ್ರಿನ್ ಉಸಿರುಗಟ್ಟಿ ಅಥವಾ ಸ್ಫೋಟದಲ್ಲಿ ಮೊಬೈಲ್ ಫೋನ್ ತಲೆಗೆ ಸಿಡಿದು ಅವರು ಸಾವಿಗೀಡಾಗಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ.
ನಜ್ರಿನ್ ಕಳೆದ ವಾರ ದುರಂತ ಸಾವಿಗೀಡಾಗಿದ್ದರು. ಸದ್ಯ ಸಾವಿನ ನಿಖರ ಕಾರಣ ತಿಳಿದಿರಲಿಲ್ಲ. ನಜ್ರಿನ್ ಬ್ಯ್ಲಾಕ್ ಬೆರಿ ಮತ್ತು ಹುವಾಯಿ ಕಂಪನಿಯ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಿದ್ದರು. ಸ್ಫೋಟದಲ್ಲಿ ಹಾಸಿಗೆ ಸಂಪೂರ್ಣ ಸುಟ್ಟಿದ್ದು ಯಾವ ಫೋನ್ ಚಾರ್ಚ್ ಗೆ ಇಡಲಾಗಿತ್ತು ಮತ್ತು ಯಾವು ಫೋನ್ ಸ್ಫೋಟಗೊಂಡಿದೆ ಎಂಬುದು ತಿಳಿಯಲು ಸಾಧ್ಯವಾಗಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ