ಇಬಿ-5 ವೀಸಾ ಸುಧಾರಣೆ ಅಥವಾ ರದ್ದು ಮಾಡುವಂತೆ ಅಮೆರಿಕಾ ಕಾಂಗ್ರೆಸ್ ಗೆ ಟ್ರಂಪ್ ಆಡಳಿತ ಆಗ್ರಹ

ಇಬಿ-5 ವೀಸಾವನ್ನು ಸುಧಾರಿಸುವಂತೆ ಅಥವಾ ರದ್ದುಗೊಳಿಸುವಂತೆ ಡೊನಾಲ್ಡ್ ಟ್ರಂಪ್ ಆಡಳಿತ ಅಮೆರಿಕಾ ಕಾಂಗ್ರೆಸ್ ಒತ್ತಾಯಿಸಿದೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ವಿದೇಶಿಯರು ಅಮೆರಿಕಾದಲ್ಲಿ 1 ಮಿಲಿಯನ್ ಡಾಲರ್ ನಷ್ಟು ಹೂಡಿಕೆ ಮಾಡಲು  ಹಸಿರು  ಕಾರ್ಡ್ ಒದಗಿಸುವ 10 ಕಾಯಂ ಪೂರ್ಣವಧಿ ಕೆಲಸ ಉದ್ಯೋಗ ಸೃಷ್ಟಿಸುವ ಇಬಿ-5 ವೀಸಾವನ್ನು ಸುಧಾರಿಸುವಂತೆ ಅಥವಾ ರದ್ದುಗೊಳಿಸುವಂತೆ ಡೊನಾಲ್ಡ್ ಟ್ರಂಪ್ ಆಡಳಿತ ಅಮೆರಿಕಾ ಕಾಂಗ್ರೆಸ್ ನ್ನು ಒತ್ತಾಯಿಸಿದೆ.
ಭಾರತೀಯರು ಸೇರಿದಂತೆ ವಿದೇಶಿಯರಿಂದ ಈ ವೀಸಾ ದುರ್ಬಳಕೆ ಹೆಚ್ಚಾಗುತ್ತಿದ್ದ ವರದಿಗಳು ಕೇಳಿಬಂದ ನಂತರ ಟ್ರಂಪ್ ಆಡಳಿತ ಈ ಕ್ರಮ ತೆಗೆದುಕೊಂಡಿದೆ.
ವೀಸಾ ದುರ್ಬಳಕೆ ಪ್ರಕರಣಗಳು ಹೆಚ್ಚಾದ ನಂತರ ಅಮೆರಿಕಾದ ಉನ್ನತ ಶಾಸಕರು ಕೂಡಾ  ಹೂಡಿಕೆದಾರರ ವೀಸಾ ಯೋಜನೆಯಂತಿರುವ ಇಬಿ-5  ಹೂಡಿಕೆದಾರರ ವೀಸಾ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇಬಿ-5 ಪ್ರಾದೇಶಿಕ ಕೇಂದ್ರ ಕಾರ್ಯಕ್ರಮ ಈ ವರ್ಷದ ಸೆಪ್ಟೆಂಬರ್ 30 ರಂದು ಅಂತ್ಯಗೊಳ್ಳಲಿದೆ. ಅಮೆರಿಕಾದ ಹೂಡಿಕೆದಾರರು, ಉದ್ಯಮಿಗಳು ಹಾಗೂ ಸಮುದಾಯವನ್ನು ವಂಚನೆಯಿಂದ ರಕ್ಷಿಸಲು ಸುಧಾರಣೆ ತರಬೇಕಾಗಿದೆ ಎಂದು ಅಮೆರಿಕಾ ನಾಗರಿಕ ಮತ್ತು ವಲಸೆ ವಿಭಾಗದ ನಿರ್ದೇಶಕ ಎಲ್. ಫ್ರಾನ್ಸಿಸ್ ಸಿಸ್ನಾ ಶಾಸಕರಿಗೆ ಹೇಳಿದ್ದಾರೆ.
ಇಬಿ- 5 ಹೂಡಿಕೆದಾರರ ವೀಸಾ ಯೋಜನೆಯಲ್ಲಿ ಪ್ರತಿಯೊಂದು ರಾಷ್ಟ್ರಕ್ಕೂ ಶೇ. 7 ರಂತೆ  ಪ್ರತಿವರ್ಷ ವಿದೇಶಿಗರಿಗೆ 10 ಸಾವಿರ ವೀಸಾವನ್ನು ಹಂಚಿಕೆ ಮಾಡಲಾಗುತ್ತದೆ. ಚೀನಾ, ವಿಯಟ್ನಾಂ ಹೊರತುಪಡಿಸಿದರೆ ಭಾರತ ಅತಿ ಹೆಚ್ಚು ಇಬಿ-5 ವೀಸಾ ಅರ್ಜಿ ಪಡೆಯುವ ಮೂರನೇ ರಾಷ್ಟ್ರವಾಗಿದೆ. ಹೆಚ್ಚಿನ ವೀಸಾ ದುರ್ಬಳಕೆ ಆರೋಪ ಚೀನಾದಿಂದ ಕೇಳಿಬಂದಿದೆ.
ಕಳೆದ ವರ್ಷ 500 ಇಬಿ- 5 ಅರ್ಜಿಗಳು ಭಾರತಿಯರಿಂದ ಸಲ್ಲಿಕೆಯಾಗಿದ್ದವು. ಈ ವರ್ಷ 700 ವೀಸಾ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಚಂಡೀಗಢ, ಪಂಜಾಬ್, ದೆಹಲಿ, ಮುಂಬೈ, ತಮಿಳುನಾಡು, ಕರ್ನಾಟಕದಿಂದ ಈ ವೀಸಾಗೆ ಹೆಚ್ಚಿನ ಬೇಡಿಕೆ ಇದೆ. ಒಂದು ವೇಳೆ ಈ ವೀಸಾ ರದ್ದುಗೊಂಡರೆ ಭಾರತೀಯರ ಮೇಲೆ ತೀವ್ರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಇಬಿ-5 ಪ್ರಾದೇಶಿಕ ಕೇಂದ್ರ ಯೋಜನೆಯ ಅವಧಿ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಸೆನೆಟಿನ ನ್ಯಾಯಾಂಗ ಸಮಿತಿ ಮುಂದೆ ಪರಿಶೀಲನೆ ನಡೆಸಲಾಗುವುದು ಎಂದು ಸಿಸ್ನಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com