ಗುರುದ್ವಾರ ಪ್ರವೇಶಕ್ಕೆ ಭಾರತ ರಾಯಭಾರಿಗೆ ಪಾಕ್ ನಿರ್ಬಂಧ

ರಾವಲ್ಪಿಂಡಿಯಲ್ಲಿರುವ ಗುರುದ್ವಾರ ಪಂಜಾ ಸಾಹೀಬ್ ಪ್ರವೇಶಕ್ಕೆ ತೆರಳದಂತೆ ಭಾರತದ ಹೈ ಕಮಿಷನಲ್ ಅಜಯ್ ಬಿಸಾರಿಯಾಗೆ ಪಾಕಿಸ್ತಾನ ನಿರ್ಬಂಧ ಹೇರಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಇಸ್ಲಾಮಾಬಾದ್; ರಾವಲ್ಪಿಂಡಿಯಲ್ಲಿರುವ ಗುರುದ್ವಾರ ಪಂಜಾ ಸಾಹೀಬ್ ಪ್ರವೇಶಕ್ಕೆ ತೆರಳದಂತೆ ಭಾರತದ ಹೈ ಕಮಿಷನಲ್ ಅಜಯ್ ಬಿಸಾರಿಯಾಗೆ ಪಾಕಿಸ್ತಾನ ನಿರ್ಬಂಧ ಹೇರಿದೆ. 
ಗುರುದ್ವಾರ ಪ್ರವೇಶಕ್ಕೆ ಪಾಕಿಸ್ತಾನ ನಿರ್ಬಂಧ ಹೇರಿದ ಹಿನ್ನಲೆಯಲ್ಲಿ ಪೂರ್ವಾನುಮತಿಯ ಹೊರತಾಗಿಯು ಅಜಯ್ ಅವರು ತಮ್ಮ ಪತ್ನಿ ಸಮೇತ ಮರಳಿದ್ದಾರೆ. 
ವಿವಾದಿತ ಚಿತ್ರ ನಾನಕ್ ಶಾಹ್ ಫಕೀರ್ ವಿರುದ್ಧ ಸಿಕ್ಖರು ಹಲವು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಅಜಯ್ ಅವರಿಗೆ ಗುರುದ್ವಾರ ಪ್ರವೇಶಿಸಲು ನಿರ್ಬಂಧ ಹೇರಲಾಗಿದೆ ಎಂದು ತಿಳಿದುಬಂದಿದೆ. 
2 ತಿಂಗಳ ಅವಧಿಯಲ್ಲಿ ಅಜಯ್ ಅವರಿಗೆ ಸಿಕ್ಖರ ಪವಿತ್ರ ಸ್ಥಳವಾದ ಪಂಜಾ ಸಾಹೀಬ್'ಗೆ ತೆರಳದಂತೆ ಅಡ್ಡಪಡಿಸಿದ 2ನೇ ಘಟನೆ ಇದಾಗಿದೆ. ಈ ಸಂಬಂಧ ಭಾರತ ಸರ್ಕಾರ ತೀವ್ರ ಆಕ್ಷೇಪ ಸಲ್ಲಿಸಿದೆ. ಇದಕ್ಕೆ ಪಾಕಿಸ್ತಾನ ಯಾವುದೇ ಪ್ರತಿಕ್ರಿಯೆ ಹಾಗೂ ಕಾರಣಗಳನ್ನು ನೀಡಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com