ಯೇಸು ಕ್ರಿಸ್ತ ಕುರಿತು ಗಾಂಧೀಜಿ ಬರೆದ ಪತ್ರ ಮಾರಾಟಕ್ಕೆ

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಯೇಸು ಕ್ರಿಸ್ತನ ಬಗೆಗೆ ಬರೆದಿದ್ದ ಪತ್ರವೊಂದನ್ನು ಹರಾಜಿಗೆ ಇಡಲಾಗಿದ್ದು ಇದರ ಮುಕಬೆಲೆ 50 ಸಾವಿರ ಡಾಲರ್ (ಅಂದಾಜು 33.50ಲಕ್ಷ ರೂ.) ಎಂದು ನಿಗದಿಪಡಿಸಲಾಗಿದೆ.
ಮಹಾತ್ಮಾ ಗಾಂಧಿ
ಮಹಾತ್ಮಾ ಗಾಂಧಿ
ವಾಷಿಂಗ್ ಟನ್: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಯೇಸು ಕ್ರಿಸ್ತನ ಬಗೆಗೆ ಬರೆದಿದ್ದ ಪತ್ರವೊಂದನ್ನು ಹರಾಜಿಗೆ ಇಡಲಾಗಿದ್ದು ಇದರ ಮುಖಬೆಲೆ 50 ಸಾವಿರ ಡಾಲರ್ (ಅಂದಾಜು 33.50ಲಕ್ಷ ರೂ.) ಎಂದು ನಿಗದಿಪಡಿಸಲಾಗಿದೆ.
ಗಾಂಧೀಜಿ ಸಬರಮತಿ ಆಶ್ರಮದಲ್ಲಿದ್ದ ಸಮಯದಲ್ಲಿ ಏಪ್ರಿಲ್ 6, 1926ರಂದು ಈ ಪತ್ರ ಬರೆದಿದ್ದರು. ಶಾಯಿಯಲ್ಲಿ ಬರೆದ ಪತ್ರದಲ್ಲಿ ಗಾಂಧೀಜಿಯ ಸಹಿ ಇದೆ.
’ಯೇಸುವು ಮಾನವಕುಲದ ಶ್ರೇಷ್ಠ ಮಾರ್ಗದರ್ಶಕರಲ್ಲಿ ಒಬ್ಬ’ ಎಂದು ಯೇಸುವಿನ ಅಸ್ತಿತ್ವ ಹಾಗೂ ಸ್ವರೂಪದ ಬಗೆಗೆ ವಿವರಿಸಿದ್ದ ಪತ್ರವೊಂದನ್ನು ಹಿರಿಯ ಕ್ರೈಸ್ತರಾಗಿದ್ದ ಮಿಲ್ಟನ್ ನ್ಯೂಬೆರಿ ಫ್ರಾಂಟ್ಚ್ಜ್ ಎನ್ನುವವರಿಗೆ ಗಾಂಧಿ ಬರೆದಿದ್ದರು. ಈ ಪತ್ರವು ಹಲವಾರು ವರ್ಷಗಳಿಂದ ಖಾಸಗಿ ವ್ಯಕ್ತಿಯೊಬ್ಬರ ಸಂಗ್ರಹದಲ್ಲಿತ್ತು.
ಪೆನ್ಸಿಲ್ವೇನಿಯ ಮೂಲದ ರ್ಯಾಬ್ ಕಲೆಕ್ಷನ್ ಎಂಬ ಸಂಸ್ಥೆ ಈ ಪತ್ರವನ್ನೀಗ ಹರಾಜಿಗೆ ಇಟ್ಟಿದೆ.ಇದೊಂದ ಮಹತ್ವದ ಪತ್ರವಾಗಿದ್ದು ಇದರಲ್ಲಿನ ವಿಚಾರಗಳು ಭಾವನಾತ್ಮಕವೂ, ಪ್ರಭಾವಶಾಲಿಯೂ ಆಗಿದೆ ಎಂದು  ರ್ಯಾಬ್ ಕಲೆಕ್ಷನ್ ನ ಮಾಲೀಕ ನತಾನ್ ರಾಬ್ ಹೇಳುತ್ತಾರೆ.
ಇತರೆ ಧರ್ಮದ ಮೇಲೆ ಗಾಂಧಿ ಯಾವ ರೀತಿಯ ಗೌರವ ಭಾವನೆ ಹೊಂದಿದ್ದರೆನ್ನುವುದು ಈ ಪತ್ರದಿಂದ ತಿಳಿಯುತ್ತದೆ ಎಂದು ಅವರು ಹೇಳುತ್ತಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com