ವಂಚಕರಿಂದ ಅಮೆರಿಕಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ದೂರವಾಣಿ ಕದ್ದಾಲಿಕೆ

ವಂಚಕರಿಂದ ಅಮೆರಿಕಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ದೂರವಾಣಿಯನ್ನು ಕದ್ದಾಲಿಸಲಾಗುತ್ತಿದೆ ಎಂದು ಭಾರತೀಯ ರಾಯಭಾರ ಅಧಿಕಾರಿಗಳು ಅಮೆರಿಕಾ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್ : ವಂಚಕರಿಂದ ಅಮೆರಿಕಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ದೂರವಾಣಿಯನ್ನು ಕದ್ದಾಲಿಸಲಾಗುತ್ತಿದೆ ಎಂದು ಭಾರತೀಯ ರಾಯಭಾರ ಅಧಿಕಾರಿಗಳು ಅಮೆರಿಕಾ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.

ಈ  ಕುರಿತಂತೆ ಆಂತರಿಕ ತನಿಖೆ ನಡೆಸಿ ಶಂಕಿತ ಕರೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಮೆರಿಕಾ ಸರ್ಕಾರಕ್ಕೆ ಸಲಹೆ ನೀಡಲಾಗಿದೆ.

ಇಂತಹ ಕರೆಗಳ ಮೂಲಕ ಹಣಕ್ಕಾಗಿ ಜನರನ್ನು ವಂಚಿಸಲಾಗುತ್ತಿದ್ದು, ರಾಯಭಾರಿ ಕಚೇರಿಗೆ ಕೆಟ್ಟ ಹೆಸರು ತರುವ ಹುನ್ನಾರ ನಡೆಸಲಾಗುತ್ತಿದೆ ಎಂದು  ರಾಯಭಾರಿ ಅಧಿಕಾರಿಗಳು ತಿಳಿಸಿದ್ದಾರೆ.

 ಕ್ರೇಡಿಟ್ ಕಾರ್ಡ್, ಪಾಸ್ ಪೋರ್ಟ್, ಮತ್ತಿತರ ವೈಯಕ್ತಿಕ ಮಾಹಿತಿ ಹಾಗೂ ಭಾರತೀಯ ನಾಗರಿಕರಿಂದ ಹಣ ಪಡೆಯಲು ಕದ್ದಾಲಿಕೆ ನಡೆಸಲಾಗುತ್ತಿದೆ. ಇದನ್ನು ಸರಿಪಡಿಸದಿದ್ದಲ್ಲಿ ಭಾರತ ಹಾಗೂ ಅಮೆರಿಕಾದ ಭದ್ರತಾ ವ್ಯವಸ್ಥೆ
ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ

ಜನರನ್ನು ವಂಚಿಸುವ ದೃಷ್ಟಿಯಲ್ಲಿ ವಂಚಕರು ಈ ರೀತಿಯಲ್ಲಿ ಕೆಲಸದಲ್ಲಿ ನಿರತರಾಗಿದ್ದಾರೆ. ಅಮೆರಿಕಾದಲ್ಲಿ ವಾಸಿಸುತ್ತಿರುವ ಕೆಲ ಭಾರತೀಯ ಪ್ರಜೆಗಳು ಇಂತಹ ಕರೆ ಸ್ವೀಕರಿಸುತ್ತಿದ್ದು, ರಾಯಭಾರ  ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ

ಕೆಲ ಪ್ರಕರಣಗಳಲ್ಲಿ ವಂಚಕರು ರಾಯಭಾರಿ ಕಚೇರಿ ಮತ್ತಿತರ ಭಾರತೀಯ ಪ್ರಾಧಿಕಾರಗಳಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ.  ವೀಸಾ ಅರ್ಜಿದಾರರು ಕೂಡಾ ಇಂತಹ ಕರೆಗಳನ್ನು  ಸ್ವೀಕರಿಸಿದ್ದಾರೆ.

 ಇದರಿಂದ ಎಚ್ಚೆತ್ತುಕೊಂಡಿರುವ ಭಾರತೀಯ ರಾಯಭಾರಿ ಅಧಿಕಾರಿಗಳು  ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಮತ್ತಿತರ ಮಾಹಿತಿ ಕಲೆ ಹಾಕಲಾಗುತ್ತಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com