ಅಮೆರಿಕ ದ್ವಿಪಕ್ಷೀಯ ಮಾತುಕತೆ ಆರಂಭಿಸಿದರೆ, ಅಣ್ಪಸ್ತ್ರ ಪರೀಕ್ಷೆ ಸ್ಥಗಿತ: ಉತ್ತರ ಕೊರಿಯಾ

ಅಮೆರಿಕ ದ್ವಿಪಕ್ಷೀಯ ಮಾತುಕತೆ ಆರಂಭಿಸಿದರೆ ತಾನು ತನ್ನ ಎಲ್ಲ ರೀತಿಯ ಅಣ್ವಸ್ತ್ರ ಪರೀಕ್ಷೆಗಳನ್ನು ಸ್ಥಗಿತಗೊಳಿಸುವುದಾಗಿ ಉತ್ತರ ಕೊರಿಯಾ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ಯೋಂಗ್ಯಾಂಗ್: ಅಮೆರಿಕ ದ್ವಿಪಕ್ಷೀಯ ಮಾತುಕತೆ ಆರಂಭಿಸಿದರೆ ತಾನು ತನ್ನ ಎಲ್ಲ ರೀತಿಯ ಅಣ್ವಸ್ತ್ರ ಪರೀಕ್ಷೆಗಳನ್ನು ಸ್ಥಗಿತಗೊಳಿಸುವುದಾಗಿ ಉತ್ತರ ಕೊರಿಯಾ ಹೇಳಿದೆ.
ಈ ಬಗ್ಗೆ ದಕ್ಷಿಣ ಕೊರಿಯಾದ ಅಧ್ಯಕ್ಷೀಯ ರಾಷ್ಟ್ರೀಯ ಭದ್ರತಾ ನಿರ್ದೇಶಕ ಚುಂಗ್ ಎಯಿ-ಯಾಂಗ್ ಅವರು ಮಾಹಿತಿ ನೀಡಿದ್ದು, ಅಮೆರಿಕ ಪೂರ್ಣ ಮನಸ್ಸಿನಿಂದ ಉತ್ತರಕೊರಿಯಾದೊಂದಿಗೆ ದ್ವಿಪಕ್ಷೀಯ ಮಾತುಕತೆ ಆರಂಭಿಸಿದರೆ ಉತ್ತರ ಕೊರಿಯಾ ತನ್ನೆಲ್ಲಾ ಅಣ್ವಸ್ತ್ರಗಳ ಪರೀಕ್ಷೆಯನ್ನು ಸ್ಥಗಿತಗೊಳಿಸಲಿದೆ. ಮುಖ್ಯವಾಗಿ ಉತ್ತರ ಕೊರಿಯಾ ಮತ್ತು ಅಮೆರಿಕ ನಡುವೆ ಏರ್ಪಟ್ಟಿರುವ ಶೀಥಲ ಸಮರ ಕೊನೆಗೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಉತ್ತರ ಕೊರಿಯಾ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಿದ್ದು, ಅಮೆರಿಕ ಪೂರ್ಣ ಸಹಕಾರದೊಂದಿಗೆ ದ್ವಿಪಕ್ಷೀಯ ಮಾತುಕತೆ ಆರಂಭಿಸಿದರೆ, ತಾವು ಕ್ಷಿಪಣಿ ಸೇರಿದಂತೆ ಇನ್ನಾವುದೇ ಅಣ್ವಸ್ತ್ರಗಳ ಪರೀಕ್ಷೆಗೆ ಮುಂದಾಗುವುದಿಲ್ಲ ಎಂಬ ಭರವಸೆ ನೀಡುತ್ತೇವೆ. ದೇಶದ ವಿರುದ್ಧದ ಭದ್ರತಾ ಆತಂಕ ದೂರವಾಗದರೆ ನಮಗೂ ಅಣ್ವಸ್ತ್ರ ಬಳಕೆಯ ಅಗತ್ಯತೆ ಬೀಳುವುದಿಲ್ಲ ಎಂದು ಉತ್ತರಕೊರಿಯಾ ಅಧಿಕಾರಿಗಳು ಹೇಳಿದ್ದಾರೆ ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷೀಯ ರಾಷ್ಟ್ರೀಯ ಭದ್ರತಾ ನಿರ್ದೇಶಕರು ಹೇಳಿದ್ದಾರೆ.
ಇತ್ತೀಚೆಗಷ್ಟೇ ಉತ್ತರಕೊರಿಯಾದ ಉನ್ನತ ಅಧಿಕಾರಿಗಳ ನಿಯೋಗ ಸಿಯೋಲ್ ಗೆ ಭೇಟಿ ನೀಡಿತ್ತು. ಈ ವೇಳೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರ ಸಹೋದರಿ ಕೂಡ ನಿಯೋಗದಲ್ಲಿ ಇದ್ದರು. ಈ ವೇಳೆ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ದೇಶಗಳು ತಮ್ಮ ನಡುವಿನ ಶತೃತ್ವ ಮರೆತು ಪರಸ್ಪರ ಭದ್ರತಾ ಸಹಕಾರ, ದ್ವಿಪಕ್ಷೀಯ ವಾಣಿಜ್ಯವಹಿವಾಟು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com