ತರಬೇತಿ ನಿರತ ಸೌದಿ ಮಹಿಳೆ
ತರಬೇತಿ ನಿರತ ಸೌದಿ ಮಹಿಳೆ

ಸ್ಟೇರಿಂಗ್ ಹಿಡಿದ ಸೌದಿ ಮಹಿಳೆ, ಹೊಸ ಸ್ವಾಂತಂತ್ರ್ಯದ ಟೆಸ್ಟ್-ಡ್ರೈವಿಂಗ್

ಸೌದಿ ಅರೇಬಿಯಾದಲ್ಲಿ ಜೂನ್ ನಿಂದ ಮಹಿಳೆಯರಿಗೆ ವಾಹನ ಚಲಾಯಿಸಲು ಕಾನೂನು ಪ್ರಕಾರ ಅವಕಾಶ ನೀಡಲಾಗಿದ್ದು, ...
Published on
ಜಿದ್ದಾಹ್: ಸೌದಿ ಅರೇಬಿಯಾದಲ್ಲಿ ಜೂನ್ ನಿಂದ ಮಹಿಳೆಯರಿಗೆ ವಾಹನ ಚಲಾಯಿಸಲು ಕಾನೂನು ಪ್ರಕಾರ ಅವಕಾಶ ನೀಡಲಾಗಿದ್ದು, ಲಕ್ಷಾಂತರ ಸೌದಿ ಮಹಿಳೆಯರು ಚಾಲನ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದಾರೆ ಮತ್ತು ವಾಹನ ಚಾಲನೆಯ ತರಬೇತಿ ಪಡೆಯಲು ಆರಂಭಿಸಿದ್ದಾರೆ.
ಒಂದು ಸಣ್ಣ ಪಾರ್ಕಿಂಗ್ ಸ್ಥಳದಲ್ಲಿ ವಾಹನ ಓಡಿಸಲು ನನಗೆ ಹಿಂಚರಿಕೆಯಾಗುತ್ತದೆ.  ಇಕ್ಕಟ್ಟು ಸ್ಥಳಗಳಲ್ಲಿ ನಿಶಕ್ತಳಾಗುತ್ತೇನೆ ಎಂದು ಚಾಲನೆಯ ತರಬೇತಿ ಪಡೆಯುತ್ತಿರುವ 30 ವರ್ಷದ ಫಾತಿಮಾ ಸಲೇಂ ಅವರು ಹೇಳಿಕೊಂಡಿದ್ದಾರೆ.
ಇಟಾಲಿಯನ್ ಮಾಜಿ ರೇಸ್ಕಾರ್ ಡ್ರೈವರ್ ಫ್ರಾನ್ಸೆಸ್ಕಾ ಪಾರ್ಡಿನಿ ನನಗೆ ಧೈರ್ಯ ತುಂಬಿ, ಸಮಾಧಾನವಾಗಿ ಕನ್ನಡಿ ನೋಡಿಕೊಂಡು ವಾಹನವನ್ನು ಪಾರ್ಕ್ ಮಾಡಬೇಕು ಮತ್ತು ಬಕಲ್ ಅಪ್ ಮಾಡಲು ನೆನಪಿಸುತ್ತಾನೆ ಎಂದು ಫಾತಿಮಾ ತಿಳಿಸಿದ್ದಾರೆ.
ಸೌದಿ ಸರ್ಕಾರ ಕಳೆದ ವರ್ಷ ಮಹಿಳೆಯರಿಗೆ ವಿಧಿಸಿದ್ದ ಚಾಲನಾ ನಿರ್ಬಂಧವನ್ನು ತೆರವುಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು, ಹೊಸ ಕಾಯ್ದೆಯು 2018ರ ಜೂನ್‌ನಿಂದ ಅನ್ವಯವಾಗಲಿದೆ.
ನಿರ್ಬಂಧದ ವಿರುದ್ಧ ಮಹಿಳಾ ಕಾರ್ಯಕರ್ತರ ದೀರ್ಘ ಹೋರಾಟದ ಫಲವಾಗಿ ಈಗ ಚಾಲನಾ ಪ್ರಿಯ ಮಹಿಳೆಯರ ಕೈಗೆ ಸ್ಟೇರಿಂಗ್ ಬಂದಿದ್ದು, ಕಾರ್ಯಕರ್ತೆಯರಲ್ಲಿ ಉಲ್ಲಾಸ ಮೂಡಿಸಿದೆ. ನಿಷೇಧವನ್ನು ಟೀಕಿಸಿದ್ದ ಅನೇಕ ಕಾರ್ಯಕರ್ತೆಯರು ಸೆರೆವಾಸವನ್ನೂ ಅನುಭವಿಸಿದ್ದರು.
ವಿದೇಶಿ ಚಾಲಕರು ಮತ್ತು ಆ್ಯಪ್ ಆಧಾರಿತ ವಾಹನಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದ ಮಹಿಳೆಯರು ಸಾಮಾಜಿಕವಾಗಿ ಸ್ವಾವಲಂಬಿಗಳಾಗಲು ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಹೊಸ ನೀತಿ ಒತ್ತು ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com