ತಂದೆ ಹಂತಕನನ್ನು ನಾನು, ಸಹೋದರಿ ಪ್ರಿಯಾಂಕ ಕ್ಷಮಿಸಿದ್ದೇವೆ: ರಾಹುಲ್ ಗಾಂಧಿ

ತಂದೆ ರಾಜೀವ್ ಗಾಂಧಿಯವರ ಹಂತಕನನ್ನು ನಾನು ಹಾಗೂ ನನ್ನ ಸಹೋದರಿ ಪ್ರಿಯಾಂಕಾ ಗಾಂಧಿಯವರು ಕ್ಷಮಿಸಿದ್ದೇವೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ಹೇಳಿದ್ದಾರೆ...
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಸಿಂಗಾಪುರ: ತಂದೆ ರಾಜೀವ್ ಗಾಂಧಿಯವರ ಹಂತಕನನ್ನು ನಾನು ಹಾಗೂ ನನ್ನ ಸಹೋದರಿ ಪ್ರಿಯಾಂಕಾ ಗಾಂಧಿಯವರು ಕ್ಷಮಿಸಿದ್ದೇವೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ಹೇಳಿದ್ದಾರೆ. 
ಸಿಂಗಾಪುರದಲ್ಲಿ ಮಾತನಾಡಿರುವ ಅವರು, ಯಾವುದೇ ರೂಪದ ಹಿಂಸಾಚಾರವನ್ನೂ ನಾನು ಇಷ್ಟಪಡುವುದಿಲ್ಲ. ತಂದೆ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿರುವುದಕ್ಕೆ ಯಾವುದೇ ಕಾರಣಗಳೇ ಇರಲಿ, ಹಂತಕನನ್ನು ನಾವು ಕ್ಷಮಿಸಿದ್ದೇವೆಂದು ಹೇಳಿದ್ದಾರೆ. 
ರಾಜಕೀಯದಲ್ಲಿ ಕೆಲ ಸಂಘಟನೆಗಳ ವಿರುದ್ಧ ನಿಂತಾಗ, ಒಂದು ವಿಚಾರದ ಪರವಾಗಿ ನಿಂತಾಗ ಒಂದಲ್ಲಾ ಒಂದು ದಿನ ನಾವು ಸಾವನ್ನಪ್ಪುತ್ತೇವೆಂಬುದು ಖಚಿತವಾಗಿರುತ್ತದೆ. ನನ್ನ ತಂದೆ ಹಾಗೂ ನನ್ನ ಅಜ್ಜಿ ಕೂಡ ಒಂದಲ್ಲಾ ಒಂದು ದಿನ ಸಾವನ್ನಪ್ಪುತ್ತಾರೆಂಬುದು ನಮಗೆ ಗೊತ್ತಿತ್ತು. 
ನಾನು ಸಾವನ್ನಪ್ಪಿತ್ತೇನೆಂದು ನನ್ನ ಅಜ್ಜಿ ನನಗೆ ಹೇಳಿದ್ದರು, ನೀವು ಸಾವನ್ನಪ್ಪುತ್ತೀರ ಎಂದು ನಾನು ನನ್ನ ತಂದೆ ಹೇಳಿದ್ದೆ. ರಾಜಕೀಯಲ್ಲಿ ನಾವು ದೊಡ್ಡ ದೊಡ್ಡ ಶಕ್ತಿಗಳೊಂದಿಗೆ ಹೋರಾಟ ನಡೆಸಬೇಕಾಗುತ್ತದೆ, ಇದು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ, ಅದರಿಂದ ನೋವುನ್ನು ಅನುಭವಿಸಬೇಕಾಗಿರುತ್ತದೆ. 
ಹಲವು ವರ್ಷಗಳವರೆಗೂ ನಾನು ಸಾಕಷ್ಟು ಬೇಸರ ಹಾಗೂ ನೋವಿನಲ್ಲಿದ್ದೆವು. ಬಹಳ ಕೋಪ ಕೂಡ ಇತ್ತು. ಆದರೆ, ನಾನು ಹಂತಕನನ್ನು ಕ್ಷಮಿಸಿದೆವು. ಟಿವಿಯಲ್ಲಿ ಪ್ರಭಾಕರನ್ ಸಾವನ್ನಪ್ಪಿರುವುದನ್ನು ನೋಡಿದೆ. ಈ ವೇಳೆ ನನ್ನಲ್ಲಿ ಎರಡು ಭಾವನೆಗಳು ಮೂಡಿದವು. ಒಬ್ಬ ವ್ಯಕ್ತಿಯನ್ನು ಹೀಗೇಕೆ ಅವಮಾನಿಸುತ್ತಿದ್ದಾರೆಂದು ಹಾಗೂ ಆತನ ಕೆಟ್ಟ ಪರಿಸ್ಥಿತಿ ಹಾಗೂ ಆತನ ಮಕ್ಕಳ ಕುರಿತಂತೆ ಬೇಸರವಾಯಿತು ಎಂದು ತಿಳಿಸಿದ್ದಾರೆ. 
ನನ್ನ ಅಜ್ಜಿ ಸಾವನ್ನಪ್ಪಿದ್ದಾಗ ನನಗೆ 14 ವರ್ಷ ವಯಸ್ಸಾಗಿತ್ತು. ನನ್ನ ಅಜ್ಜಿಯನ್ನು ಹತ್ಯೆ ಮಾಡಿದವರೊಂದಿಗೇ ನಾನು ಬ್ಯಾಡ್ಮಿಂಟನ್ ಆಡಿದ್ದೆ. ನನ್ನ ತಂದೆಯನ್ನೂ ಕೂಡ ಹತ್ಯೆ ಮಾಡಲಾಗಿತ್ತು. ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ನಾವು ಜೀವನ ನಡೆಸುತ್ತೇವೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಯವರೆಗೂ 15ಕ್ಕೂ ಹೆಚ್ಚು ವ್ಯಕ್ತಿಗಳು ನಮ್ಮನ್ನು ಸುತ್ತುವರೆದಿರುತ್ತಾರೆ. ಇದನ್ನು ನಾನು ಸೌಕರ್ಯವೆಂದು ಭಾವಿಸುವುದಿಲ್ಲ. ಇಂತಹ ವಿಚಾರಗಳನ್ನು ನಿಭಾಯಿಸುವುದು ಬಹಳ ಕಷ್ಟವಾಗಿರುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com