ಸತತ ಎರಡನೇ ಬಾರಿಗೆ ನೇಪಾಳ ಅಧ್ಯಕ್ಷರಾಗಿ ಬಿದ್ಯಾ ದೇವಿ ಭಂಡಾರಿ ಆಯ್ಕೆ

ಸತತ ಎರಡನೇ ಬಾರಿಗೆ ನೇಪಾಳ ಅಧ್ಯಕ್ಷರಾಗಿ ಬಿದ್ಯಾ ದೇವಿ ಭಂಡಾರಿ ಅವರು ಆಯ್ಕೆಯಾಗಿದ್ದು, ಅಧ್ಯಕ್ಷೀಯ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್ ನ ಕುಮಾರಿ ಲಕ್ಷ್ಮೀ ರೈ ಅವರ ವಿರುದ್ಧ ಭಂಡಾರಿ ಅವರು ಗೆಲುವು ಸಾಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಠ್ಮಂಡು: ಸತತ ಎರಡನೇ ಬಾರಿಗೆ ನೇಪಾಳ ಅಧ್ಯಕ್ಷರಾಗಿ ಬಿದ್ಯಾ ದೇವಿ ಭಂಡಾರಿ ಅವರು ಆಯ್ಕೆಯಾಗಿದ್ದು, ಅಧ್ಯಕ್ಷೀಯ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್ ನ ಕುಮಾರಿ ಲಕ್ಷ್ಮೀ ರೈ ಅವರ ವಿರುದ್ಧ ಭಂಡಾರಿ ಅವರು ಗೆಲುವು ಸಾಧಿಸಿದ್ದಾರೆ.
56 ವರ್ಷದ ಬಿದ್ಯಾ ದೇವಿ ಭಂಡಾರಿ ಅವರು, ಆಡಳಿತಾ ರೂಢ ಕಮ್ಯುನಿಸ್ಟ್ ಪಾರ್ಟಿ ನೇತೃತ್ವದ ಎಡಪಕ್ಷಗಳ ಬೆಂಬಲ ಪಡೆದು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಭಂಡಾರಿ ಅವರಿಗೆ ನೇಪಾಳ ಯೂನಿಫೈಡ್ ಮಾರ್ಕ್ಸಿಸ್ಟ್, ಲೆನಿನಿಸ್ಚ್, ಸಿಪಿಎನ್ ಮತ್ತು ಸಂಘೀಯ ಸಮಾಜ್ ಬಾದಿ ಫೋರಂ ನೇಪಾಳ್ ಮತ್ತು ಇತರೆ ಪಕ್ಷಗಳು ಬಿದ್ಯಾ ಭಂಡಾರಿ ಅವರನ್ನು ಬೆಂಬಲಿಸಿದ್ದವು. 
2015ರಲ್ಲಿ ಪ್ರಪ್ರಥಮ ಬಾರಿಗೆ ನೇಪಾಳ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಿದ್ಯಾ ದೇವಿ ಭಂಡಾರಿ ಅವರು ನೇಪಾಳದ ಪ್ರಥಮ ಮಹಿಳಾ ಅಧ್ಯಕ್ಷರೆಂಬ ಕೀರ್ತಿಗೂ ಭಾಜನರಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com