ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಪುನಾರಾಯ್ಕೆ

ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಪುನಾರಾಯ್ಕೆಯಾಗಿದ್ದಾರೆ. ಐದು ವರ್ಷಗಳ ಅವಧಿಗೆ ಎರಡನೇ ಬಾರಿಗೆ ಕ್ಸಿ-ಜಿನ್ ಪಿಂಗ್ ಅವರನ್ನು ಎನ್ ಪಿ ಸಿ ಆಯ್ಕೆ ಮಾಡಿದ್ದು, ಅವರ ಜೀವನದುದ್ದಕ್ಕೂ ಅಧಿಕಾರ ಹೊಂದುವಂತೆ ದಾರಿ ಮಾಡಿಕೊಡಲಾಗಿದೆ.
ಕ್ಸಿ-ಜಿನ್ ಪಿಂಗ್
ಕ್ಸಿ-ಜಿನ್ ಪಿಂಗ್

ಬೀಜಿಂಗ್ :ಚೀನಾದ ಅಧ್ಯಕ್ಷರಾಗಿ  ಕ್ಸಿ-ಜಿನ್ ಪಿಂಗ್ ಪುನಾರಾಯ್ಕೆಯಾಗಿದ್ದಾರೆ. ಐದು ವರ್ಷಗಳ ಅವಧಿಗೆ ಎರಡನೇ ಬಾರಿಗೆ ಕ್ಸಿ-ಜಿನ್ ಪಿಂಗ್ ಅವರನ್ನು ಎನ್ ಪಿ ಸಿ ಆಯ್ಕೆ ಮಾಡಿದ್ದು,  ಅವರ ಜೀವನದುದ್ದಕ್ಕೂ ಅಧಿಕಾರ ಹೊಂದುವಂತೆ ದಾರಿ ಮಾಡಿಕೊಡಲಾಗಿದೆ.

ಕೇಂದ್ರಿಯ ಮಿಲಿಟರಿ ಆಯೋಗದ ಮುಖ್ಯಸ್ಥರಾಗಿಯೂ  ಕ್ಸಿ-ಜಿನ್ ಪಿಂಗ್ ಆಯ್ಕೆಯಾಗಿದ್ದಾರೆ. ಇದು ಚೈನಾ ಮಿಲಿಟರಿಯ ಸಂಪೂರ್ಣ ಮೇಲ್ವಿಚಾರಣೆ ವಹಿಸಲಿದೆ.

ಮಾರ್ಚ್ 11 ರಂದು ಆಡಳಿತಾ ರೂಢ ಕಮ್ಯೂನಿಸ್ ಪಾರ್ಟಿ ಆಫ್ ಚೀನಾ  ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎರಡು ಅವಧಿಯ ಮಿತಿಯನ್ನು ತೆಗೆಯುವ ಸಂವಿಧಾನ ತಿದ್ದುಪಡಿ ಪ್ರಸ್ತಾವಕ್ಕೆ
ಎನ್ ಪಿಸಿಯ 2900 ನಿಯೋಗಿಗಳು  ಗೆ ಮತ ಚಲಾಯಿಸಿದ್ದರು.  ಆದರೆ. ಆಡಳಿತಾರೂಢ ಸಿಪಿಸಿಯ 2023   ಮುಖ್ಯಸ್ಥರು ನಿವೃತ್ತಿಯಾಗಿದ್ದು,ಮಿಲಿಟರಿ ಹಾಗೂ ಅಧ್ಯಕ್ಷೀಯ ನಿಯಮ ಪ್ರಕಾರ ಕ್ಸಿ-ಜಿನ್ ಪಿಂಗ್ ಪುನಾರಾಯ್ಕೆಯಾಗಿದ್ದಾರೆ.

ಕ್ಸಿ-ಜಿನ್ ಪಿಂಗ್ 2013ರಿಂದಲೂ ಚೀನಾ ಅಧ್ಯಕ್ಷರಾಗಿದ್ದಾರೆ.  ಇಂದು ಉಪರಾಷ್ಟ್ರಾಧ್ಯಕ್ಷರನ್ನು ಎನ್ ಪಿಸಿ ಆಯ್ಕೆ ಮಾಡಲಿದ್ದು, ಕ್ಸಿ-ಜಿನ್ ಪಿಂಗ್ ನೇತೃತ್ವದಲ್ಲಿನ  ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com