ಫೇಸ್ ಬುಕ್ ನಿಮ್ಮ ಮಾಹಿತಿಯನ್ನು ಮಾರುತ್ತದೆ: ಕೇಂಬ್ರಿಡ್ಜ್ ಅನಾಲಿಟಿಕಾ ಮಾಜಿ ಉಪಾಧ್ಯಕ್ಷ ಸ್ಟೀವ್ ಬನಾನ್

ಲೇ ಕೆಂಬ್ರೀಡ್ಜ್ ಅನಾಲಿಟಿಕಾ ಮಾಜಿ ಉಪಾಧ್ಯಕ್ಷ ಸ್ಟೇವ್ ಬ್ಯಾನನ್ ,ಸಾಮಾಜಿಕ ಜಾಲತಾಣಗಳು ಜನರ ಬೃಹತ್ ಪ್ರಮಾಣದ ಮಾಹಿತಿಯನ್ನು ಮಾರಾಟ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಸ್ಟೇವ್ ಬ್ಯಾನನ್ ,
ಸ್ಟೇವ್ ಬ್ಯಾನನ್ ,

ನ್ಯೂಯಾರ್ಕ್ : ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್  ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ವ್ಯವಹಾರ ವಿಧಾನವನ್ನು ಗುರಿಯಾಗಿಸಿದ ಬೆನ್ನಲ್ಲೇ ಕೆಂಬ್ರೀಡ್ಜ್  ಅನಾಲಿಟಿಕಾ ಮಾಜಿ ಉಪಾಧ್ಯಕ್ಷ ಸ್ಟೀವ್  ಬನಾನ್ ,ಸಾಮಾಜಿಕ ಜಾಲತಾಣ ಫೇಸ್ ಬುಕ್  ಜನರ ಬೃಹತ್ ಪ್ರಮಾಣದ ಮಾಹಿತಿಯನ್ನು ಮಾರಾಟ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಫೈನಾನ್ಸಿಯಲ್  ಟೈಮ್ಸ್ ಪತ್ರಿಕೆ ಆಯೋಜಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅನಾಲಿಟಿಕಾ  ಕಂಪನಿ ಫೇಸ್ ಬುಕ್ ನಿಂದ ರಾಜಕೀಯ ದತ್ತಾಂಶ    ಪಡೆದಿರುವ ಬಗ್ಗೆ ಮಾಹಿತಿ ಇಲ್ಲ ಎಂದರು.

ನಿಮ್ಮ ಸಿಬ್ಬಂದಿಯನ್ನು ಅವರು ಉಚಿತವಾಗಿ ಪಡೆದುಕೊಳ್ಳುತ್ತಾರೆ. ನಂತರ ಅದನ್ನು ಅಧಿಕ ಪ್ರಮಾಣದಲ್ಲಿ ಮಾರಾಟ ಮಾಡುತ್ತಾರೆ. ಅದಕ್ಕಾಗಿ ಕಂಪನಿ ವ್ಯವಹಾರ ಅಧಿಕ ಮೌಲ್ಯ ಹೊಂದಿರುತ್ತವೆ ಎಂದು ಅವರು ಹೇಳಿದ್ದಾರೆ.

ಅಮೆರಿಕಾ ಅಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಕೆಂಬ್ರಿಡ್ಜ್ ಅನಾಲಿಟಿಕಾ ಡೊನಾಲ್ಡ್ ಟ್ರಂಪ್ ಜೊತೆ ಕೆಲಸ ಮಾಡಿತ್ತು. ಅಮೆರಿಕಾದ ಸಾವಿರಾರು ಮಂದಿ ಮತದಾರರ  ಬಳಕೆದಾರರ ಮಾಹಿತಿಯನ್ನು ಫೇಸ್ ಬುಕ್ ದುರ್ಬಳಕೆ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಫೇಸ್ ಬುಕ್ ಬಳಕೆದಾರರ ಮಾಹಿತಿಯಿಂದ ಚುನಾವಣೆ ಫಲಿತಾಂಶದಲ್ಲಿ ತಮ್ಮ ವರ್ಚಸ್ಸು ಕುಂದುವ ರೀತಿಯಲ್ಲಿ ಪರಿಣಾಮ ಬೀರಿ ನಕಲಿ ಸುದ್ದಿಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಫೇಸ್ ಬುಕ್ ನಿಂದ ದತ್ತಾಂಶ ಮಾರಾಟ ಯೋಜನೆ ಬಗ್ಗೆ ತಮ್ಮಗೇನೂ ನೆನಪಿಲ್ಲ, ಅದನ್ನು ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಸಲಾಗುತ್ತಿತ್ತು ಎಂಬ ಬಗ್ಗೆ ತಮ್ಮಗೆ ಯಾವುದೇ ನೆನಪಿಲ್ಲ ಎದು  ಬನಾನ್ ತಿಳಿಸಿದ್ದಾರೆ.

 ಚುನಾವಣೆ ದೃಷ್ಟಿಯಿಂದ ತಾವಾಗಲೀ ಅಥವಾ ಕೆಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯಾಗಲೀ  ಫೇಸ್ ಬುಕ್ ನಿಂದ ಮಾಹಿತಿ ದುರ್ಬಳಕೆ ಮಾಡಿಕೊಳ್ಳುವ ಕುತಂತ್ರವನ್ನು ಮಾಡಿಲ್ಲ ಎಂದು ಅವರು ಸ್ಪಷ್ಪಪಡಿಸಿದ್ದಾರೆ.

 ಫೇಸ್ ಬುಕ್ ನಲ್ಲಿನ ಮಾಹಿತಿ ದುರ್ಬಳಕೆ ಬಗ್ಗೆ ಅದರ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಮುಖ್ಯಸ್ಥ ಜುಕರ್ ಬರ್ಗ್ ನಿನ್ನೆಯಷ್ಟೇ ಕ್ಷಮೆ ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com