ಭಾರತ, ಪಾಕಿಸ್ತಾನದ ಮುಗ್ದ ಮೀನುಗಾರರನ್ನು ಬಿಡುಗಡೆ ಮಾಡಿ- ಪಾಕ್ ಪತ್ರಿಕೆ

ಬಂಧನಕ್ಕೊಳಗಾಗಿರುವ ಭಾರತ ಮತ್ತು ಪಾಕಿಸ್ತಾನದ ಮೀನುಗಾರರನ್ನು ಮಾನವೀಯತೆ ಆಧಾರದ ಮೇಲೆ ಬಿಡುಗಡೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಪಾಕಿಸ್ತಾನದ ಪತ್ರಿಕೆಯೊಂದು ಆಗ್ರಹಿಸಿದೆ.
ಮೀನುಗಾರರು
ಮೀನುಗಾರರು
Updated on: 

ಇಸ್ಲಾಮಾಬಾದ್ : ಬಂಧನಕ್ಕೊಳಗಾಗಿರುವ ಭಾರತ ಮತ್ತು ಪಾಕಿಸ್ತಾನದ ಮೀನುಗಾರರನ್ನು ಮಾನವೀಯತೆ ಆಧಾರದ ಮೇಲೆ ಬಿಡುಗಡೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಪಾಕಿಸ್ತಾನದ ಪತ್ರಿಕೆಯೊಂದು ಆಗ್ರಹಿಸಿದೆ.

ಪಾಕಿಸ್ತಾನದಲ್ಲಿದ್ದ 147 ಮೀನುಗಾರರನ್ನು ಭಾನುವಾರ ಬಿಡುಗಡೆ ಮಾಡಿರುವುದು ಅತ್ಯುತ್ತಮ ಸ್ವಾಗರ್ತಾಹ ಬೆಳವಣಿಗೆಯಾಗಿದೆ ಎಂದು ದಿ ಎಕ್ಸ್ ಪ್ರೆಸ್ ಪತ್ರಿಕೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಅಂತಾರಾಷ್ಟ್ರೀಯ ಜಲ ಗಡಿ ಉಲ್ಲಂಘನೆ ಆರೋಪದ ಮೇರೆಗೆ ಉಭಯ ದೇಶಗಳ ಸಾವಿರಾರು ಮೀನುಗಾರರು ಜೈಲಿನಲ್ಲಿ ಕೊಳೆಯುವಂತಾಗಿದೆ ಎಂದು ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ಹಲವಾರು ವರ್ಷಗಳಿಂದ ಜೈಲಿನಲ್ಲಿರಬೇಕಾದ್ದರಿಂದ ಅವರ ಹಡಗುಗಳು ಕೊಳೆಯುವಂತಾಗುತ್ತವೆ. ಅವರ ಕುಟುಂಬಗಳು ಗುರುತಿಸಲು ಅಸಾಧ್ಯವಾಗುತ್ತದೆ. ಹಡಗುಗಳನ್ನು ಮರದಿಂದ ತಯಾರು ಮಾಡಲಾಗಿರುತ್ತದೆ ಎಂದು ಹೇಳಿದೆ.

ಬಡ ಮೀನುಗಾರರಿಗೆ ದಿಕ್ಸೂಚಿ ಹಾಗೂ  ಜಿಪಿಎಸ್ ಟ್ರಾಕಿಂಗ್  ಗೊತ್ತಿರುವುದಿಲ್ಲ ನೀರಿನಲ್ಲಿ ಅಂತಾರಾಷ್ಟ್ರೀಯ ಜಲ ಗಡಿಯ ಬಗ್ಗೆಯೂ ಅವರಿಗೆ ಗೊತ್ತಿರುವುದಿಲ್ಲ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

ಭಾರತದ ಹಲವು ಮಂದಿ ಮೀನುಗಾರರು ಪಾಕಿಸ್ತಾನದ ಜೈಲ್ಲಿನಲ್ಲಿರುವ ಬಗ್ಗೆ ಮಾಹಿತಿ ನೀಡಿರುವ  ಪತ್ರಿಕೆ ,ಉಭಯ ದೇಶಗಳ ಭದ್ರತೆ ನಿಟ್ಟಿನಲ್ಲಿ ಮಾನವೀಯತೆ ಆಧಾರದ ಮೇಲೆ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಒತ್ತಾಯಿಸಲಾಗಿದೆ



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com