ಪಾಕ್'ನಲ್ಲಿ ಮೊದಲ ಬಾರಿಗೆ ಸುದ್ದಿವಾಚಕಿಯಾದ ಲೈಂಗಿಕ ಅಲ್ಪಸಂಖ್ಯಾತ

ಪಾಕಿಸ್ತಾನದಲ್ಲಿ ಇನ್ನು ಮುಂದೆ ಲೈಂಗಿಕ ಅಲ್ಪಸಂಖ್ಯಾತರೂ ಟೀವಿ ವಾಹಿನಿಗಳಲ್ಲಿ ಸುದ್ದಿ ನಿರೂಪಣೆ ಮಾಡಲಿದ್ದಾರೆ...
ಪಾಕ್'ನಲ್ಲಿ ಮೊದಲ ಬಾರಿಗೆ ಸುದ್ದಿವಾಚಕಿಯಾದ ಲೈಂಗಿಕ ಅಲ್ಪಸಂಖ್ಯಾತ
ಪಾಕ್'ನಲ್ಲಿ ಮೊದಲ ಬಾರಿಗೆ ಸುದ್ದಿವಾಚಕಿಯಾದ ಲೈಂಗಿಕ ಅಲ್ಪಸಂಖ್ಯಾತ
ಇಸ್ಲಾಮಾಬಾದ್; ಪಾಕಿಸ್ತಾನದಲ್ಲಿ ಇನ್ನು ಮುಂದೆ ಲೈಂಗಿಕ ಅಲ್ಪಸಂಖ್ಯಾತರೂ ಟೀವಿ ವಾಹಿನಿಗಳಲ್ಲಿ ಸುದ್ದಿ ನಿರೂಪಣೆ ಮಾಡಲಿದ್ದಾರೆ.
ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಸುದ್ದಿ ವಾಚಕಿಯಾಗಿ ಲೈಂಗಿಕ ಅಲ್ಪಸಂಖ್ಯಾತರೊಬ್ಬರು ಆಯ್ಕೆಯಾಗಿದ್ದಾರೆ. 
ಹಿರಿಯ ಪಾಕಿಸ್ತಾನ ಪತ್ರಕರ್ತ ಮಾವಿಕ್ ಮಲ್ಲಿಕ್ ಅವರು ಈ ಕುರಿತು ಟ್ವೀಟ್ ಮಾಡಿದ್ದು, ಈ ಕುರಿತು ಫೋಟೋ ಪೋಸ್ಟ್ ಮಾಡಿ, ಪಾಕಿಸ್ತಾನದ ಪ್ರಪ್ರಥಮ ಅಲ್ಪಸಂಖ್ಯಾತ ನಿರೂಪತಿ ಎಂದು ಬರೆದುಕೊಂಡಿುದ್ದಾರೆ. 
ಇತ್ತೀಚೆಗೆ ಪಾಕಿಸ್ತಾನ ಸಂಸತ್ತಿನ ಮೇಲ್ಮನೆ ಲೈಂಗಿಕ ಅಲ್ಪಸಂಖ್ಯಾತರ ಗೌರವ ಮತ್ತು ಸುರಕ್ಷತೆ ಕುರಿತು ಮಸೂದೆಯೊಂದನ್ನು ಪಾಸ್ ಮಾಡಿತ್ತು. ಪಾಕಿಸ್ತಾನ ಒಟ್ಟು ಜನಸಂಖ್ಯೆಯಲ್ಲಿ ಕನಿಷ್ಟ 5 ಲಕ್ಷ| ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. 
ಮಾಡೆಲಿಂಗ್ ಮಾಡಲು ನನಗೆ ಸಾಕಷ್ಟು ಅವಕಾಶಗಳು ಬಂದಿತ್ತು. ಆದರೆ, ನನ್ನ ಸಮುದಾಯಕ್ಕೆ ಏನಾದರೂ ಮಾಡಬೇಕೆಂದು ನಾನು ಬಯಸಿದ್ದೇನೆ. ನಾವು ಬಹಳ ಹಿಂದುಳಿದಿದ್ದೇವೆಂದು ಎನಿಸುತ್ತದೆ. ಹೀಗಾಗಿ ನನ್ನ ಜನರ ಶಕ್ತಿಯನ್ನು ಹೆಚ್ಚಿಸಬೇಕೆಂದು ಬಯಸಿದ್ದೇನೆ. ಎಲ್ಲಿಯೇ ಹೋದರೂ ನಮ್ಮನ್ನು ಕೆಳಮಟ್ಟದಲ್ಲಿಯೇ ನೋಡುತ್ತಾರೆ. ಈ ಭೂಮಿಯಲ್ಲಿ ನಾವು ಮಾಡಲಾಗದ್ದು ಏನೂ ಇಲ್ಲ. ನಾವು ಕೂಡ ಶಿಕ್ಷಿತರಾಗಿದ್ದೇವೆ. ಪದವಿ ಪಡೆದಿದ್ದೇವೆ. ಆದರೆ, ನಮಗೆ ಅವಕಾಶಗಳಿಲ್ಲ, ನಮಗೆ ಪ್ರೋತ್ಸಾಹಗಳಿಲ್ಲ. ಈ ರೀತಿಯ ಆಲೋಚನೆಗಳು ಹಾಗೂ ಪರಿಸ್ಥಿತಿಯನ್ನು ಬದಲಿಸಲು ಬಯಸಿದ್ದೇನೆ. ಫ್ಯಾಷನ್ ವಲಯದಲ್ಲಿ ಇತಿಹಾಸ ಸೃಷ್ಟಿಸಿದ್ದೇನೆ. ಮಾಧ್ಯಮ ವಲಯದಲ್ಲಿ ಇತಿಹಾಸ ಸೃಷ್ಟಿಸಲು ಬಯಸಿದ್ದೇನೆಂದು ನಿರೂಪಕಿಯಾಗಿ ಆಯ್ಕೆಯಾಗಿರುವ ಲೈಂಗಿಕ ಅಲ್ಪಸಂಖ್ಯಾತ ಮಲಿಕ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com