ಕೇಂಬ್ರಿಡ್ಜ್ ಅನಾಲಿಟಿಕಾದೊಂದಿಗೆ ಕಾಂಗ್ರೆಸ್ ಸಂಬಂಧ; ವೈಲೀ ಆರೋಪ ತಳ್ಳಿ ಹಾಕಿದ ಸಂಸ್ಥೆ

ಫೇಸ್ ಬುಕ್ ದತ್ತಾಂಶ ಸೋರಿಕೆ ಮಾಡಿದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಪ್ರಕರಣವನ್ನು ಬಯಲಿಗೆಳೆದ ಕ್ರಿಸ್ ವೈಲಿ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಫೇಸ್ ಬುಕ್ ದತ್ತಾಂಶ ಸೋರಿಕೆ ಮಾಡಿದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಪ್ರಕರಣವನ್ನು ಬಯಲಿಗೆಳೆದ ಕ್ರಿಸ್ ವೈಲಿ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು  ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಹೇಳಿದೆ.
ಕ್ರಿಸ್ ವೈಲಿ ಹೇಳಿಕೆ ಬೆನ್ನಲ್ಲೇ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ, ವೈಲಿ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದೆ. '2014ರಿಂದ ವೈಲಿ ಸಂಸ್ಥೆಯ ಅರೆಕಾಲಿಕ ಗುತ್ತಿಗೆದಾರನಾಗಿದ್ದರು. ಹೀಗಾಗಿ ಅವರಿಗೆ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಯಾವುದೇ ರೀತಿಯ ಸಂಪೂರ್ಣ ಮಾಹಿತಿ ಇಲ್ಲ. ಒಂದು ವರ್ಷಕ್ಕೂ ಕಡಿಮೆ ಅವಧಿಗೆ ವೈಲಿ ಇಲ್ಲಿ ಕೆಲಸ ಮಾಡಿದ್ದರು. ಆದರೆ ಸಂಸ್ಥೆಯಲ್ಲಿನ ತಮ್ಮ ಅಧಿಕಾರವನ್ನು ವೈಲಿ ದುರುಪಯೋಗ ಪಡಿಸಿಕೊಂಡಿದ್ದಾರೆ. 
ಅಲ್ಲದೆ ಸಂಸ್ಥೆಗೆ ವ್ಯತಿರಿಕ್ತವಾಗಿ ಪ್ರತ್ಯೇಕ ಸಂಸ್ಥೆಯ ಸ್ಥಾಪನೆಗೂ ವೈಲಿ ಮುಂದಾಗಿದ್ದರು. ವೈಲಿ ಹೇಳಿಕೊಳ್ಳುವಂತ ಅವರು ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಸಂಸ್ಥಾಪಕರಲ್ಲ. ಸಂಸದೀಯ ಸಮಿತಿ ಮುಂದೆ ವೈಲಿ ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರವಾದದ್ದು. ಅಲ್ಲದೆ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಗಳೂ ಕೂಡ ಸುಳ್ಳು ಎಂದು ಸಂಸ್ಥೆ ಸ್ಪಷ್ಟನೆ ನೀಡಿದೆ. 
ನಿನ್ನೆಯಷ್ಟೇ ಕೇಂಬ್ರಿಡ್ಜ್ ಅನಾಲಿಟಿಕಾ ದತ್ತಾಂಶ ಸೋರಿಕೆ ಹಗರಣ ಬಯಲಿಗೆಳೆದಿದ್ದ ಕ್ರಿಸ್ ವೈಲಿ, ಬ್ರಿಟನ್ ಸಂಸದೀಯ ಸಮಿತಿ ಮುಂದೆ ಹೇಳಿಕೆ ನೀಡಿದ್ದರು. ಈ ವೇಳೆ ಹೇಗೆ ಫೇಸ್ ಬುಕ್ ದತ್ತಾಂಶವನ್ನು ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆ ದುರುಪಯೋಗ ಪಡಿಸಿಕೊಂಡು ಮತಗಾರರ ಮೇಲೆ ಪರಿಣಾಮ ಬೀರುತ್ತಿತ್ತು ಎಂಬಿತ್ಯಾದಿ ಅಂಶಗಳನ್ನು ಸಮಿತಿ ಮುಂದೆ ಹೇಳಿಕೊಂಡಿದ್ದರು. ಅಲ್ಲದೆ ಭಾರತದ ಕಾಂಗ್ರೆಸ್ ಪಕ್ಷ ಕೂಡ ಅನಲಿಟಿಕಾ ಸಂಸ್ಥೆಯ ಗ್ರಾಹಕನಾಗಿತ್ತು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com