ಚೀನಾದ ಹೈಟೆಕ್ ಮಿಲಿಟರಿ ತಂತ್ರಜ್ಞಾನಕ್ಕೆ ಈಗ ಸೊಳ್ಳೆಗಳೇ ಟಾರ್ಗೆಟ್

ಚೀನಾದ ಮಿಲಿಟರಿ ತಂತ್ರಜ್ಞಾನದ ಬೆಳವಣಿಗೆಯ ವೇಗ ಇಡೀ ವಿಶ್ವವನ್ನೇ ಬೆರಗುಗೊಳಿಸುತ್ತಿದೆ. ಈ ನಡುವೆಯೇ ಚೀನಾದ ಮಿಲಿಟರಿ ತಂತ್ರಜ್ಞಾನಕ್ಕೆ ಹೊಸ ಸವಾಲು ಎದುರಾಗಿದೆ.
ಚೀನಾ
ಚೀನಾ
ಬೀಜಿಂಗ್: ಚೀನಾದ ಮಿಲಿಟರಿ ತಂತ್ರಜ್ಞಾನದ ಬೆಳವಣಿಗೆಯ ವೇಗ ಇಡೀ ವಿಶ್ವವನ್ನೇ ಬೆರಗುಗೊಳಿಸುತ್ತಿದೆ. ಈ ನಡುವೆಯೇ ಚೀನಾದ ಮಿಲಿಟರಿ ತಂತ್ರಜ್ಞಾನಕ್ಕೆ ಹೊಸ ಸವಾಲು ಎದುರಾಗಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ ಚೀನಾ ಸೊಳ್ಳೆಗಳ ವಿರುದ್ಧ ಸಮರ ಸಾರಿದ್ದು, ಮಿಲಿಟರಿ ಗ್ರೇಡ್ ರೇಡಾರ್ ಸಹಾಯದಿಂದ ಸೊಳ್ಳೆಗಳನ್ನು ಟಾರ್ಗೆಟ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. 
ಬೀಜಿಂಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ) 2 ಕಿ.ಮೀ ದೂರದ ವ್ಯಾಪ್ತಿ ವರೆಗೂ ಎಲೆಕ್ಟ್ರೋ ಮ್ಯಾಗ್ನೆಟಿಕ್ ವೇವ್ ಗಳ ಸಹಾಯದಿಂದ ಸೊಳ್ಳೆಗಳ ಪ್ರಬೇಧ, ಲಿಂಗ, ಹಾರುವ ವೇಗ ಮತ್ತು ದಿಕ್ಕು ಸೇರಿದಂತೆ ಸೊಳ್ಳೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದೆ.
ಕ್ಷಿಪಣಿ ಪತ್ತೆ ವ್ಯವಸ್ಥೆ ಮಾದರಿಯಲ್ಲೇ ಸೊಳ್ಳೆಗಳನ್ನೂ ಸಹ ಪರೀಕ್ಶೆ ಮಾಡಲಾಗುತ್ತದೆ, ಈ ತಂತ್ರಜ್ಞಾನದಿಂದ ಸೊಳ್ಳೆಗಳ ಸಮಸ್ಯೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡಬಹುದೆಂಬುದು ಚೀನಾ ತಜ್ಞರ ವಿಶ್ವಾಸವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com