ದಕ್ಷಿಣ ಚೀನಾ ಸಮುದ್ರದಲ್ಲಿ ಕ್ಷಿಪಣಿ ನಿಯೋಜನೆ ನಿರ್ವಿವಾದ ಸಾರ್ವಭೌಮತ್ವ: ಚೀನಾ

ದಕ್ಷಿಣ ಚೀನಾ ಸಮುದ್ರದ ಮೇಲಿನ ತನ್ನ ಸಂಪೂರ್ಣ ಹಕ್ಕನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಚೀನಾ ಮುಂದುವರೆದಿದ್ದು, ಕ್ಷಿಪಣಿ, ಹಾಗೂ ಕ್ಷಿಪಣಿ ವ್ಯವಸ್ಥೆಗಳ ನಿಯೋಜನೆಯನ್ನು ಸಮರ್ಥಿಸಿಕೊಂಡಿದೆ.
ದಕ್ಷಿಣ ಚೀನಾ ಸಮುದ್ರ
ದಕ್ಷಿಣ ಚೀನಾ ಸಮುದ್ರ
ಬೀಜಿಂಗ್: ದಕ್ಷಿಣ ಚೀನಾ ಸಮುದ್ರದ ಮೇಲಿನ ತನ್ನ ಸಂಪೂರ್ಣ ಹಕ್ಕನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಚೀನಾ ಮುಂದುವರೆದಿದ್ದು, ಕ್ಷಿಪಣಿ, ಹಾಗೂ ಕ್ಷಿಪಣಿ ವ್ಯವಸ್ಥೆಗಳ ನಿಯೋಜನೆಯನ್ನು ಸಮರ್ಥಿಸಿಕೊಂಡಿದೆ. 
ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಕ್ಷಿಪಣಿ ನಿಯೋಜನೆಯನ್ನು ಆ ಪ್ರದೇಶದಲ್ಲಿ ತಾನು ಹೊಂದಿರುವ ನಿರ್ವಿವಾದ ಸಾರ್ವಭೌಮತ್ವ ಎಂದು ಚೀನಾ ಹೇಳಿದೆ.  ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಚಟುವಟಿಕೆ, ದಬ್ಬಾಳಿಕೆ ಹಾಗೂ ಸಾರ್ವಭೌಮತ್ವವನ್ನು ವಿಯೆಟ್ನಾಂ, ಫಿಲಿಪೇನ್ಸ್, ಮೆಲೇಷ್ಯಾ, ತೈವಾನ್, ಬ್ರೂನಿ ವಿರೋಧಿಸುತ್ತಿವೆ. 
ದಕ್ಷಿಣ ಚೀನಾ ಸಮುದ್ರದಲ್ಲಿರುವ ದ್ವೀಪಗಳ ಮೇಲೆ ಚೀನಾಗೆ ಸಂಪೂರ್ಣ ಸಾರ್ವಭೌಮ ಅಧಿಕಾರವಿದೆ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರರು ಕ್ಷಿಪಣಿ ನಿಯೋಜನೆ ಮಾಡಿರುವುದನ್ನು ಸಮರ್ಥಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com