ಕಾಬೂಲ್: ಆಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದಲ್ಲಿ ಶಸ್ತ್ರಾಸ್ತ್ರದಾರಿಯೊಬ್ಬ ಆರು ಮಂದಿ ಭಾರತೀಯರನ್ನು ಅಪಹರಿಸಿರುವುದಾಗಿ ವರದಿಯಾಗಿದೆ. .ಆಫ್ಘಾನಿಸ್ತಾನದಲ್ಲಿನ ಭಾರತೀಯ ಮೂಲಸೌಕರ್ಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಭಾರತೀಯರನ್ನು ಬಂದೂಕುಧಾರಿಯೊಬ್ಬ ಅಪಹರಣ ಮಾಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. .ಕೆಲಸಕ್ಕಾಗಿ ತೆರಳುತ್ತಿದ್ದಾಗ ಭಾರತೀಯರನ್ನು ಅಪಹರಿಸಲಾಗಿದೆ. ಈ ಕೃತ್ಯವನ್ನು ತಾಲಿಬಾನ್ ಸಂಘಟನೆ ಉಗ್ರರು ಮಾಡಿರಬಹುದು ಎಂದು ಬಾಗ್ಲಾನ್ ಪ್ರಾಂತ್ಯದ ಕೌನ್ಸಿಲ್ ಶಂಕಿಸಿದೆ. .ಇನ್ನು ಈ ಕೃತ್ಯದ ಕುರಿತು ಯಾವುದೇ ಉಗ್ರ ಸಂಘಟನೆ ಹೊಣೆ ಹೊತ್ತಿಕೊಂಡಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics