4ನೇ ಬಾರಿಗೆ ರಷ್ಯಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ವ್ಲಾದಿಮಿರ್ ಪುಟೀನ್
ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇಕಡ 76.67 ಮತಗಳನ್ನು ಪಡೆದು ಪ್ರಚಂಡ ವಿಜಯ ಸಾಧಿಸಿದ್ದ ವ್ಲಾದಿಮಿರ್ ಪುಟಿನ್ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ...
ಮಾಸ್ಕೋ: ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇಕಡ 76.67 ಮತಗಳನ್ನು ಪಡೆದು ಪ್ರಚಂಡ ವಿಜಯ ಸಾಧಿಸಿದ್ದ ವ್ಲಾದಿಮಿರ್ ಪುಟಿನ್ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಪುಟಿನ್, ರಷ್ಯಾದ ಪ್ರಸ್ತುತ ಮತ್ತು ಭವಿಷ್ಯಕ್ಕಾಗಿ ನನ್ನ ಕೈಲಾಗುವ ಎಲ್ಲವನ್ನು ಮಾಡುವುದು ನನ್ನ ಕರ್ತವ್ಯ ಹಾಗೂ ಇದು ನನ್ನ ಜೀವನದ ಗುರಿ ಎಂದು ಹೇಳಿದ್ದಾರೆ.
1999ರಿಂದ ವ್ಲಾದಿಮಿರ್ ಪುಟಿನ್ ರಷ್ಯಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಮತ್ತೆ ರಷ್ಯಾ ಅಧ್ಯಕ್ಷರಾಗಿರುವ ಪುಟಿನ್ 2024ರವರೆಗೂ ದೇಶದ ಅಧ್ಯಕ್ಷರಾಗಿರುತ್ತಾರೆ.
ರಷ್ಯಾದ ಮಾಜಿ ಅಧ್ಯಕ್ಷ ಸ್ಟಾಲಿನ್ ಬಳಿಕದಲ್ಲಿ ಪುಟಿನ್ ದೇಶದ ದೀರ್ಘಾವಧಿ ಅಧ್ಯಕ್ಷರೆನಿಸಿಕೊಂಡಿದ್ದಾರೆ. ಇನ್ನು ತಾನು ಜೀವಮಾನದ ಅಧ್ಯಕ್ಷರಾಗಿ ಮುಂದುವರಿಯಲು ಬಯಸುವುದಿಲ್ಲ ಎಂದು ಪುಟಿನ್ ಹೇಳಿದ್ದಾರೆ.