2016 ರ ಯುಎಸ್ ಚುನಾವಣೆಯಲ್ಲಿ ರಷ್ಯಾ ಮಧ್ಯಪ್ರವೇಶ: ಸತ್ಯ ಒಪ್ಪಿಕೊಂಡ ಸೆನೆಟರ್ ಗುಪ್ತಚರ ಸಮಿತಿ

ಬ್ರಿಟೀಷ್ ಮೂಲದ ಸಮೀಕ್ಷಾ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕ ರಷ್ಯಾದ ಸಂಶೋಧಕರು ಮತ್ತು ರಷ್ಯನ್ ಗುಪ್ತಚರಕ್ಕೆ ಸಂಬಂಧಿಸಿದ ಕಂಪನಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವ ಮೂಲ....
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್: ಬ್ರಿಟೀಷ್ ಮೂಲದ ಸಮೀಕ್ಷಾ ಸಂಸ್ಥೆ  ಕೇಂಬ್ರಿಡ್ಜ್ ಅನಾಲಿಟಿಕ ರಷ್ಯಾದ ಸಂಶೋಧಕರು ಮತ್ತು ರಷ್ಯನ್ ಗುಪ್ತಚರಕ್ಕೆ ಸಂಬಂಧಿಸಿದ ಕಂಪನಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ 2016 ರ ಯುಎಸ್ ಚುನಾವಣೆಯಲ್ಲಿ ಟ್ರಂಪ್ ವಿಜಯಕ್ಕೆ ಕಾರಣವಾಗಿತ್ತು ಎಂದು ವಿಸ್ಟೆಲ್ ಬ್ಲೌವರ್ (ಕಾನೂನುಬಾಹಿರ ಅಥವಾ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯ ಅಥವಾ ಸಂಸ್ಥೆಯ ಬಗ್ಗೆ ತಿಳಿಸುವ ವ್ಯಕ್ತಿ.)ಅಮೆರಿಕಾ ಕಾಂಗ್ರೆಸ್ ನ ಎದುರು ನಡೆದ ವಿಚಾರಣೆ ವೇಳೆ ತಿಳಿಸಿದ್ದಾರೆ.
ಬ್ರಿಟೀಷ್ ಮೂಲದ ಸಂಸ್ಥೆಗೆ ದಶಲಕ್ಷ ಸಂಖ್ಯೆಯ ಫೇಸ್ ಬುಕ್ ಬಳಕೆದಾರರ ಡೇಟಾಗಳನ್ನು ಸೋರಿಕೆ ಮಾಡಿದ್ದ ಕ್ರಿಸ್ಟೋಫರ್ ವೈಲೀ ಅಮೆರಿಕಾದ ಸೆನೆಟ್ ಸಮಿತಿ ಮುಂದೆ ಹೇಳಿಕೆ ನಿಡಿ ರಷ್ಯನ್ ಗುಪ್ತಚರ ಸಂಸ್ಥೆಗಳು ಈ ಮಾಹಿತಿಯನ್ನು ಪಡೆದುಕೊಂಡಿದ್ದವು ಎಂದಿದ್ದಾರೆ.
ಫೇಸ್ ಬುಕ್ ಬಳಕೆದಾರರ ಮಾಹಿತಿ ಪಡೆಯುವುದಕ್ಕಾಗಿ ಅಪ್ಲಿಕೇಷನ್ ಒಂದನ್ನು ಅಲೆಕ್ಸಾಂಡರ್ ಕೊಗಾನ್, ರಚಿಸಿದ್ದರು. ಇವರು ರಷ್ಯಾ ಮೂಲದ ಅಮೆರಿಕನ್ ಸಂಶೋಧಕರಾಗಿದ್ದು ಇವರು ರಷ್ಯಾ ಹೂಡಿಕೆ ಮಾಡಿದ್ದ ’ವ್ಯಕ್ತಿಗಳ ನಡವಳಿಕೆಯ ಸಂಶೋದನೆ’ ಸೇರಿ ಅನೇಕ ಯೋಜನೆಗಳಲ್ಲಿಉ ಪಾಲ್ಗೊಂಡಿದ್ದರು ಎಂದು ವೈಲೀ ಹೇಳಿದ್ದಾರೆ.
"ಎಂದರೆ ರಷ್ಯಾ ಗುಪ್ತಚರ ಸಂಸ್ಥೆಗಳು ಫೇಸ್ ಬುಕ್ ಬಳಕೆದಾರರ ಡೇಟಾ ಬಳಸಿಕೊಂಡು ಅಮೆರಿಕಾ ರಷ್ಯಾ ಪಡೆಗಳ ವಿರುದ್ಧ ಏನೇನು ತಂತ್ರ ನಡೆಸಿದೆ ಎನ್ನುವುದರ ಮಾಹಿತಿ ಪಡೆಯುತ್ತಿತ್ತೆಂದು ಅನುಮಾನಿಸಲು ಆಧಾರವಿದೆ.ಎಂದು ವೈಲೀ ತನ್ನ ಲಿಖಿತ ಸಾಕ್ಷ್ಯದಲ್ಲಿ ಹೇಳಿದ್ದಾರೆ.
"ರಷ್ಯಾದ ಗುಪ್ತಚರ ಸಂಸ್ಥೆ ಎಫ್ಎಸ್ಬಿಗೆ ಸಂಬಂಧಿಸಿರುವ ಕಂಪನಿಗಳು ಮತ್ತು ಕಾರ್ಯನಿರ್ವಾಹಕರೊಂದಿಗೆ ಅದರ ವರದಿಯನ್ನು (ಮತ್ತು)ಊಹಾತ್ಮಕ ಕ್ಯಾಂಏನ್ ಪ್ರಚಾರಗಳು ಹಾಗೂ ವರ್ತನೆ ಅವಲೋಕನಗಳು ಕುರಿತ ಮಾಹಿತಿ ಪಡೆಯಲು ರಷ್ಯಾ ಅಧಿಕಾರಿಗಲು ಈ ಯೋಜನೆಯನ್ನು ಬಳಸಿಕೊಂಡರು." ವೈಲೀ ತನ್ನ ಸಾಕ್ಷದಲ್ಲಿ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ನ 2016 ಪ್ರಚಾರ ಅಭಿಯಾನದ ಸಂಬಂಧ ಫೇಸ್ ಬುಕ್ ಡೇಟಾವನ್ನು ದುರುಪಯೋಗಪಡಿಸಿಕೊಂಡ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯ ಕುರಿತ ವಿವರವಾದ ವಿಚಾರಣೆಯ ಭಾಗ ಇದಾಗಿದೆ.
ಶೈಕ್ಷಣಿಕ ಸಂಶೋಧಕ ಕೋಗನ್ ಅವರೊಂದಿಗಿನ ದತ್ತಾಂಶ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿ ಕೇಂಬ್ರಿಜ್ ಅನಲಿಟಿಕಾ ವಿಶ್ಲೇಷಕ ಸಂಸ್ಥೆ ತನ್ನ ಬಳಕೆದಾರ ಡೇಟಾವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಫೇಸ್ ಬುಕ್ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com