ಸ್ವಯಂಪ್ರೇರಿತ ದಿವಾಳಿತನ ಘೋಷಿಸಿದ ಕೇಂಬ್ರಿಡ್ಜ್ ಅನಲಿಟಿಕಾ

ಫೇಸ್ ಬುಕ್ ಡೇಟಾ ಕಳವು ಮಾಡಿ ಸುದ್ದಿಯಾಗಿದ್ದ ಕೇಂಬ್ರಿಡ್ಜ್ ಅನಲಿಟಿಕಾ ಇದೀಗ ಸ್ವಯಂಪ್ರೇರಿತ ದಿವಾಳಿತನ ಘೋಷಣೆ ಮಾಡಿದೆ.
ಸ್ವಯಂಪ್ರೇರಿತ ದಿವಾಳಿತನ ಘೋಷಿಸಿದ ಕೇಂಬ್ರಿಡ್ಜ್ ಅನಲಿಈಕಾ
ಸ್ವಯಂಪ್ರೇರಿತ ದಿವಾಳಿತನ ಘೋಷಿಸಿದ ಕೇಂಬ್ರಿಡ್ಜ್ ಅನಲಿಈಕಾ
ಲಂಡನ್: ಫೇಸ್ ಬುಕ್ ಡೇಟಾ ಕಳವು ಮಾಡಿ ಸುದ್ದಿಯಾಗಿದ್ದ ಕೇಂಬ್ರಿಡ್ಜ್ ಅನಲಿಟಿಕಾ ಇದೀಗ ಸ್ವಯಂಪ್ರೇರಿತ ದಿವಾಳಿತನ ಘೋಷಣೆ ಮಾಡಿದೆ.
ನ್ಯೂಯಾರ್ಕ್ ನ್ಯಾಯಾಲಯಕ್ಕೆ ಈ ಸಂಬಂಧ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದ ಸಂಸ್ಥೆ 10 ರಿಂದ 50 ಕೋಟಿ ಮೌಲ್ಯದ ಸ್ಥಿರಾಸ್ಥಿ 10 ಲಕ್ಷದಿಂದ ಒಂದು ಕೋಟಿ ಡಾಲರ್ ಸಾಲ ಇದೆ ಎಂದೂ ನ್ಯಾಯಾಲಯಕ್ಕೆ ಮನವರಿಕೆ ಮಾಡಿದೆ.
ಫೇಸ್ ಬುಕ್ ಹಾಗೂ ಇತರೆ ಸಾಮಾಜಿಕ ತಾಣದ ಮಹಿತಿಯನ್ನು ಕಳವು ಮಾಡಿ ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಿದ್ದ ಆರೋಪ ಹೊತ್ತಿದ್ದ ಕೇಂಬ್ರಿಡ್ಜ್ ಅನಲಿಟಿಕಾ ಟ್ರಂಪ್ ಅಧಿಕಾರಕ್ಕೇರಲು ಪರೋಕ್ಷವಾಗಿ ಸಹಕರಿಸಿತ್ತು ಎನ್ನಲಾಗಿದೆ.
ಇದಕ್ಕೂ ಮುನ್ನ ಮೇ ತಿಂಗಳ ಪ್ರಾರಂಭದ ವಾರದಲ್ಲಿ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆ ಬಾಗಿಲು ಮುಚ್ಚುವ ಪ್ರಸ್ತಾಪ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com